ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ನಿವಾಸಕ್ಕೆ ಲಗ್ಗೆ ಹಾಕಲು ಧರಣಿ ನಿರತ ರೈತರ ಯತ್ನ

ಇದೇ ತಿಂಗಳ 16 ರಿಂದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ನಿರಂತರವಾಗಿ ಧರಣಿಗೆ ಕುಳಿತಿರುವ ನಮ್ಮನ್ನು ಸೌಜನ್ಯಕ್ಕಾದರೂ ಸರ್ಕಾರದ ಪರವಾಗಿ ಯಾರೂ ಮಾತನಾಡಿಸಿಲ್ಲ ಎಂದು ರೊಚ್ಚಿಗೆದ್ದ ರೈತರಿಂದ ಸಿಎಂ ನಿವಾಸದ ಮೇಲೆ ದಾಳಿ ನಡೆಸಲು ಯತ್ನ.

|
Google Oneindia Kannada News

ಬೆಂಗಳೂರು, ಮೇ 25: ರೈತರ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಆರೋಪಿಸಿರುವ ರಾಜ್ಯ ರೈತರ ಸಮುದಾಯ ಗುರುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳ ನಿವಾಸ್ಕಕೆ ಲಗ್ಗೆ ಹಾಕಲು ಯತ್ನಿಸಿದರು.

ಆದರೆ, ಅವರ ಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ಆನಂದ ರಾವ್ ಸರ್ಕಲ್ ನಲ್ಲಿಯೇ ರೈತರನ್ನು ತಡೆದು ಮುಖ್ಯಮಂತ್ರಿ ನಿವಾಸದ ಕಡೆಗೆ ಹೋಗುವುದನ್ನು ತಪ್ಪಿಸಿದರು.

Farmers tries to invade into CM Siddaramaiah house in Bengaluru

ಇದೇ ತಿಂಗಳ 16 ರಿಂದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ನಿರಂತರವಾಗಿ ಧರಣಿಗೆ ಕುಳಿತಿರುವ ನಮ್ಮನ್ನು ಸೌಜನ್ಯಕ್ಕಾದರೂ ಸರ್ಕಾರದ ಪರವಾಗಿ ಯಾರೂ ಮಾತನಾಡಿಸಿಲ್ಲ ಎಂದು ರೈತರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೆ.ಟಿ. ಗಂಗಾಧರ್, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸಮಾಲಿ ಪಾಟೀಲ್ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆದು ಸಿಎಂ ನಿವಾಸದ ಮುತ್ತಿಗೆ ಯತ್ನವನ್ನು ವಿಫಲಗೊಳಿಸಿದರು.

English summary
Farmers agitation in Bengaluru since May 16, turned wild when protesters tried to invade Chief Minister Siddaramaiah's house on May 25, 2017. But, Stopped them at Ananda Rao circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X