ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ತಿಕ್ ಮದುವೆ ರದ್ದು, ನ.26ಕ್ಕೆ ಕೋರ್ಟಿನಲ್ಲಿ ವಿಚಾರಣೆ

By Mahesh
|
Google Oneindia Kannada News

ಬೆಂಗಳೂರು, ನ.12: 'ಹೇಗಾದರೂ ಸರಿ ಕಾರ್ತಿಕ್ ನನ್ನನ್ನು ಪತ್ನಿ ಎಂದು ಒಪ್ಪಿಕೊಂಡರೆ ಸಾಕು, ನನಗೆ ಆಸ್ತಿ ಪಾಸ್ತಿ ಏನೂ ಬೇಡ. ನಾನು ಆತನನ್ನು ತುಂಬಾ ಪ್ರೀತಿಸಿದ್ದೇನೆ ಎಂದು ಕನ್ನಡದ ಎಲ್ಲಾ ಚಾನೆಲ್ ಗಳ ಮುಂದೆ ಕಂಠ ಶೋಷಣೆ ಮಾಡಿಕೊಂಡಿದ್ದ ಮೈತ್ರಿಯಾ ಅವರು ಹೈಕೋರ್ಟ್ ಬಿಟ್ಟು ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದು ಎಲ್ಲರಿಗೂ ತಿಳಿದೇ ಇದೆ. ಈಗ ಕಾರ್ತಿಕ್ ಹೊಸ ಮದುವೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯಿತು.

ನಟಿ ಮೈತ್ರಿಯಾ ಹಾಗೂ ಕಾರ್ತಿಕ್ ಗೌಡ ಅವರ ಪ್ರೇಮ-ವಿವಾಹ ಪ್ರಕರಣ ಮತ್ತೊಮ್ಮೆ ಕಾನೂನು ಸಮರ ಮುಂದುವರೆದಿದೆ. ಕಾನೂನು ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರಿಗೆ ಕೌಟುಂಬಿಕ ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡಿತ್ತು. ಅ.21ರೊಳಗೆ ಮೈತ್ರಿಯಾ ಅರ್ಜಿಗೆ ಪ್ರತಿಯಾಗಿ ಮರು ಅರ್ಜಿ ಸಲ್ಲಿಸಲು ಕೋರ್ಟ್ ಅವಕಾಶ ನೀಡಿತ್ತು. ಅದರಂತೆ, ಕಾರ್ತಿಕ್ ಪರ ವಕೀಲರು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ, ಕಾರ್ತಿಕ್ ಅವರಿಗೆ ಮದುವೆ ಆಗಲು ಅನುಮತಿ ನೀಡಬೇಕು, ಮೈತ್ರಿಯಾ ಸಲ್ಲಿಸಿರುವ ಅರ್ಜಿ ರದ್ದು ಮಾಡಬೇಕು ಎಂದು ವಾದಿಸಿದ್ದಾರೆ.

Family court adjourns hearing Karthik Gowda Mythriya case

ಮೈತ್ರಿಯಾ ಅರ್ಜಿಯಲ್ಲಿ ಏನಿದೆ?: ಮೈತ್ರಿಯಾ ಹೈಕೋರ್ಟ್ ಮೆಟ್ಟಿಲೇರುವ ಬದಲು ಫ್ಯಾಮಿಲಿ ಕೋರ್ಟಿನಲ್ಲಿ ಕಾಣಿಸಿಕೊಂಡಾಗಲೇ ಎಲ್ಲರ ಕುತೂಹಲ ಕೆರಳಿತ್ತು. ಬಹುಶಃ ಕಾರ್ತಿಕ್ ಜೊತೆ ಮದುವೆಯಾಗಿರುವುದಕ್ಕೆ ಬಲವಾಗಿ ಸಾಕ್ಷಿಯನ್ನು ಮೈತ್ರಿಯಾ ಸಂಪಾದಿಸಿರಬಹುದು. ಈಗಾಗಿ ಇಬ್ಬರ ಮದುವೆ ಸಿಂಧುಗೊಳಲಿದೆ ಎಂಬ ಮಾತುಗಳು ಕೋರ್ಟ್ ಆವರಣದಲ್ಲಿ ಕೇಳಿ ಬಂದಿತ್ತು.

ಮೈತ್ರಿಯಾ ಹಾಗೂ ಕಾರ್ತಿಕ್ ನಡುವೆ ಪ್ರೇಮ ಸಂಬಂಧವಿದ್ದ ಕಾಲದಲ್ಲೇ ಮೈತ್ರಿಯಾ ಅವರು ದೈಹಿಕ ಸಂಪರ್ಕಗೊಳಗಾಗಿದ್ದರು ಎಂಬುದಕ್ಕೆ ಪುರಾವೆ ಇದ್ದರೂ ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.[ದೈಹಿಕ ಸಂಪರ್ಕ ಮಾಡಿದ್ದು ಯಾರು?]

ವಿಚಾರಣೆ ಯಾವಾಗ?: ನನ್ನ ಪತಿ ಕಾರ್ತಿಕ್ ಅವರು ಈಗ ಮತ್ತೊಂದು ಮದುವೆಗೆ ಮುಂದಾಗಿದ್ದಾರೆ. ಡಿಸೆಂಬರ್ ನಲ್ಲಿ ಕೊಡಗಿನ ಯುವತಿ ಜೊತೆ ಮದುವೆಯಾಗುತ್ತಿದ್ದಾರೆ. ದಯವಿಟ್ಟು ಕಾರ್ತಿಕ್ ಮದುವೆಗೆ ಅನುಮತಿ ನೀಡಬಾರದು, ನಮ್ಮ ಮದುವೆ ಸಿಂಧುಗೊಳಿಸಬೇಕು ಎಂದು ಮೈತ್ರಿಯಾ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಕೋರ್ಟ್ ಕೈಗೆತ್ತಿಕೊಂಡಿತು.

Karthik and Mythriya

ಅದರೆ, ಎರಡು ಕಡೆ ವಾದ ಪ್ರತಿವಾದಗಳನ್ನು ಆಲಿಸಿದ ಕೌಟುಂಬಿಕ ಕೋರ್ಟ್ ಮುಂದಿನ ವಿಚಾರಣೆಯನ್ನು ನ.26ಕ್ಕೆ ಮುಂದೂಡಿದೆ. ಹೀಗಾಗಿ ಕಾರ್ತಿಕ್ ಗೌಡ ಅವರ ಮದುವೆಗೆ ಇರುವ ಅಡ್ಡಿ ಆತಂಕಗಳು ಇನ್ನೂ ಮುಂದುವರೆದಿದ್ದು, ನ.26ರ ನಂತರ ಏನಾಗುವುದೋ ಕಾದು ನೋಡಬೇಕಿದೆ. ಕೋರ್ಟ್ ಕಲಾಪ ಇದೇ ರೀತಿ ಮುಂದುವರೆದರೆ ಕಾರ್ತಿಕ್ ಅವರು ಮದುವೆಗೆ ಹೊಸ ಮುಹೂರ್ತ ಇಟ್ಟುಕೊಳ್ಳಬೇಕಾಗುತ್ತದೆ. [ಕೌಟುಂಬಿಕ ಕೋರ್ಟಿಗೆ ಕಾಲಿಟ್ಟಿದ್ದೇಕೆ?]

'ಕಾರ್ತಿಕ್ ಕಾನೂನುಬದ್ಧವಾಗಿ ನನ್ನ ಪತಿಯಾಗಿದ್ದಾರೆ. ಹಿಂದೂ ಧರ್ಮದ ಪ್ರಕಾರ ನಮ್ಮಿಬ್ಬರ ಮದುವೆಯಾಗಿದೆ. ಅವರು ನನ್ನನ್ನು ಪತ್ನಿ ಎಂದು ಒಪ್ಪಿಕೊಂಡು ಪತ್ನಿಗೆ ಸೇರುವ ಎಲ್ಲಾ ಹಕ್ಕುಗಳನ್ನು ನೀಡತಕ್ಕದ್ದು, ಅಲ್ಲದೆ ಕಾರ್ತಿಕ್ ಅವರು ಬೇರೆ ಯಾವುದೇ ಯುವತಿ ಜೊತೆ ಮದುವೆಯಾಗುವುದು ಕಾನೂನು ಉಲ್ಲಂಘನೆಯಾಗುತ್ತದೆ. ಇಂಥ ಪ್ರಯತ್ನಕ್ಕೆ ತಡೆ ಒಡ್ಡಬೇಕು ಎಂದು ಮೈತ್ರಿಯಾ ಅರ್ಜಿ ಹಾಕಿದ್ದಾರೆ' ಎಂದು ಅವರ ಪರ ವಕೀಲೆ ಆಕರ್ಶ್ ಕಾನಡೆ ಹೇಳಿದ್ದಾರೆ.

ಅತ್ಯಾಚಾರ, ವಂಚನೆ ಆರೋಪ ಹೊತ್ತು ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ಕಾರ್ತಿಕ್ ಗೌಡ ಅವರಿಗೆ ಸೆಷನ್ಸ್ ನ್ಯಾಯಾಲಯ ಸೆ.8ರಂದು ಸಂಜೆ ನಿರೀಕ್ಷಣಾ ಜಾಮೀನು ಮಂಜೂರಾಗಿರುವುದನ್ನು ಇಲ್ಲಿ ಸ್ಮರಿಸಬಹುದು. [ಕಾರ್ತಿಕ್ ಗೌಡಗೆ ನಿರೀಕ್ಷಣಾ ಜಾಮೀನು]

English summary
A family court today adjourned hearing of the case filed by a Kannada film actress Mythriya against Karthik Gowda, son of Union Law Minister D.V. Sadananda Gowda. The next hearing of case is on Nov.26. Karthik got anticipatory bail in rape and cheating case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X