ಮೊದಲ ಪ್ರಕರಣದಲ್ಲಿ ಟೋಪಿರಾಜ್ ಜಾಮೀನು ಅರ್ಜಿ ವಜಾ !
ಬೆಂಗಳೂರು, ಜನವರಿ 07: ಉದ್ಯಮಿಗೆ ಕೆಎಸ್ ಅರ್ ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಸುಧೀಂದ್ರ ರೆಡ್ಡಿ ಅವರಿಂದ ಕೋಟ್ಯಂತರ ರೂ ವಂಚನೆ ಮಾಡಿದ ಪ್ರಕರಣದಲ್ಲಿ ಜಾಮೀನು ಕೋರಿ ನಕಲಿ ಆರ್‌ಎಸ್‌ಎಸ್ ನಾಯಕ ಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ಉದ್ಯಮಿ ಸುಧೀಂದ್ರ ರೆಡ್ಡಿಗೆ ವಂಚಿಸಿದ ಪ್ರಕರಣದಲ್ಲಿ ಸ್ವಾಮಿ ಬಂಧನಕ್ಕೆ ಒಳಗಾಗಿದ್ದ. ಇದಾದ ಬಳಿಕ ಎಂಟು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಮೊದಲ ವಂಚನೆ ಪ್ರಕರಣದಲ್ಲಿ ಜಾಮೀನು ಕೋರಿ ಸ್ವಾಮಿ ಅರ್ಜಿ ಸಲ್ಲಿಸಿದ್ದ.
ಸ್ವಾಮಿಗೆ ಜಾಮೀನು ನೀಡದಂತೆ ಸಿಸಿಬಿ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದರು. ಸ್ವಾಮಿ ವೃತ್ತಿಪರ ವಂಚನೆ ಮಾಡಿದ್ದಾನೆ. ಸುಮಾರು ಕೇಸು ದಾಖಲಾಗುತ್ತಿವೆ. ಈಗಾಗಲೇ ಬೇರೆ ಪ್ರಕರಣದಲ್ಲಿ ವುಚಾರಣೆ ಎದುರಿಸುತ್ತಿದ್ದಾನೆ. ಹೊರ ಬಂದಲ್ಲಿ ಸಾಕ್ಷಾದಸಾರಗಳ ಮೇಲೆ ಪ್ರಭಾವ ಬೀಳುತ್ತಾನೆ.

ಈತನಿಗೆ ಜಾಮೀನು ಸಿಕ್ಕಲ್ಲಿ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಈತನ ವಿರುದ್ಧ ಸಾಕಷ್ಟು ದೂರು ಬರುತ್ತಿವೆ. ಯಾವ ಕಾರಣಕ್ಕೂ ಜಾಮೀನು ನೀಡಬಾರದು ಎಂಬ ಸಿಸಿಬಿ ಪರ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು. ವಾದ ಪುರಸ್ಕರಿಸಿದ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದೆ. ಇನ್ನು ಮೊದಲ ವಂಚನೆ ಪ್ರಕರಣದಲ್ಲಿ ಇದೀಗ ಸ್ವಾಮಿ ಹೈಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ. ಉಳಿದ ಎಂಟಕ್ಕೂ ಹೆಚ್ಚು ಪ್ರಕರಣ ವಿಚಾರಣೆ ನಡೆಯಿತ್ತಿವೆ.











Click it and Unblock the Notifications