ನಿವೇಶನ ಪಡೆದವರಿಗೆ ಎಚ್ಚರಿಕೆ ಕೊಟ್ಟ ಬಿಡಿಎ

ಬೆಂಗಳೂರು, ನವೆಂಬರ್ 22 : ಬೆಂಗಳೂರು ನಗರದಲ್ಲಿ ನಿವೇಶನ ಹೊಂದಿರುವ ಜನರಿಗೆ ಬಿಡಿಎ ಎಚ್ಚರಿಕೆಯೊಂದನ್ನು ನೀಡಿದೆ. ಸಿಎ ಸೈಟ್, ಅಕ್ರಮ-ಸಕ್ರಮ ನಿವೇಶನ ಎಂದು ಜನರಿಂದ ಹಣವನ್ನು ವಸೂಲಿ ಮಾಡಲಾಗುತ್ತಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಕಲಿ ಸೀಲ್, ಸಹಿ ಬಳಸಿಕೊಂಡು ಸಿಎ ನಿವೇಶನ ಹೊಂದಿರುವ ಜನರಿಗೆ ಪತ್ರಗಳನ್ನು ಕಳಿಸಲಾಗುತ್ತಿದೆ. ಬಿಡಿಎ ಬೆಂಗಳೂರು ನಗರದಲ್ಲಿ ಹಲವಾರು ಸಂಘ ಸಂಸ್ಥೆಗಳಿಗೆ ಸಿಎ ಸೈಟ್ ನೀಡಿದೆ.

ಪಡೆದ ಉದ್ದೇಶಕ್ಕೆ ಸೈಟ್‌ಗಳನ್ನು ಬಳಕೆ ಮಾಡಿಕೊಳ್ಳದಿದ್ದಲ್ಲಿ ಅವುಗಳನ್ನು ವಾಪಸ್ ಪಡೆಯುವುದಾಗಿ ನಕಲಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಬಿಡಿಎಗೆ ಜನರು ದೂರು ನೀಡಿದ್ದಾರೆ.

Fake Letter To People In The Name Of BDA

ಅಕ್ರಮ-ಸಕ್ರಮ ಹೆಸರಿನಲ್ಲಿ ವಂಚನೆ ಮಾಡುವ ಪತ್ರಗಳನ್ನು ಸಹ ಕಳಿಸಲಾಗುತ್ತಿದೆ. ನಿಮ್ಮ ಸೈಟ್‌ಗಳನ್ನು ಈಗ ಸಕ್ರಮ ಮಾಡಿಕೊಳ್ಳಿ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದ್ದು, ಜನರಿಂದ ಹಣವನ್ನು ಸಹ ಸಂಗ್ರಹ ಮಾಡಲಾಗಿದೆ.

ಹಲವಾರು ಜನರಿಗೆ ದೂರವಾಣಿ ಕರೆ ಮಾಡಿ ಸೈಟ್‌ಗಳನ್ನು ಸಕ್ರಮ ಮಾಡಿಕೊಳ್ಳಿ, ಪತ್ರ ತಂದುಕೊಡಿ ಎಂದು ಕೇಳಲಾಗಿದ್ದು, ಬಿಡಿಎ ಗಮನಕ್ಕೆ ಬಂದಿದೆ. ಆದ್ದರಿಂದ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಮನವಿ ಮಾಡಲಾಗಿದೆ.

ಬಿಡಿಎ ತನಿಖಾದಳ ನಕಲಿ ಪತ್ರದ ಜಾಲದ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ. ಜನರಿಗೆ ಯಾವುದೇ ಪತ್ರ ಬಂದರೆ ಅದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬಿಡಿಎ ಆಯುಕ್ತರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+