Fake Cigarette: ನೀವು ಸೇದುವ ಸಿಗರೇಟ್‌ ಅಸಲಿಯೇ? ಬೆಂಗಳೂರಿನಲ್ಲಿ ಭಯಾನಕ ದಂಧೆ ಪತ್ತೆ

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ಸೂಚನೆ ಇದ್ರೂ ಕ್ಯಾರೇ ಅನ್ನದೆ, ಸ್ಟೈಲಾಗಿ ಸಿಗರೇಟ್‌ ಸೇದುವ ಮಂದಿಯೇ ಹೆಚ್ಚು. ದಿನಕ್ಕೆ ಹಲವು ಬಾರಿ ಸಿಗರೇಟ್‌ ಸೇದುವ ಹವ್ಯಾಸ ಜನರಿಗಿದೆ. ಇದೇ ಕಾರಣಕ್ಕೆ ಎಲ್ಲೆಂದರಲ್ಲಿ ಸಿಗರೇಟ್‌ ಮಾರಾಟ ಮಾಡುವ ಅಂಗಡಿಗಳು ತಲೆ ಎತ್ತಿವೆ. ಕೆಲವರು ತಮ್ಮ ನೆಚ್ಚಿನ ಬ್ರ್ಯಾಂಡ್‌ನ ಸಿಗರೇಟ್‌ ಮಾತ್ರವೇ ಖರೀದಿಸುತ್ತಿದ್ದಾರೆ. ಆದರೆ ನೀವು ಸೇದಿಸುವ ಸಿಗರೇಟ್‌ ಅಸಲಿಯೋ? ನಕಲಿಯೋ? ಎಂಬುದು ನಿಮಗೆ ಗೊತ್ತಿದೆಯೇ? ಅಂತಹ ಅನುಮಾನ ಮೂಡಿಸುವ ದಂಧೆಯೊಂದು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲೇ ಬೆಳಕಿಗೆ ಬಂದಿದೆ.

ಹೌದು, ಬೆಂಗಳೂರಿನಲ್ಲಿ ನಕಲಿ ಸಿಗರೇಟ್ ಜಾಲ ಪತ್ತೆಯಾಗಿದ್ದು, ಪೊಲೀಸರು ಭಾರೀ ಪ್ರಮಾಣದ ಫೇಕ್‌ ಸಿಗರೇಟ್‌ ವಶಪಡಿಸಿಕೊಂಡಿದ್ದಾರೆ. ಪ್ರಮುಖ ಬ್ರ್ಯಾಂಡ್‌ಗಳ ನಕಲಿ ಸಿಗರೇಟ್‌ ಮಾರಾಟ ಮಾಡುವ ದಂಧೆ ಇದರಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ಮಲ್ಲೇಶ್ವರ ಪೊಲೀಸರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇಬ್ಬರನ್ನು ಬಂಧಿಸಿದ್ದಾರೆ. ಗೋಲ್ಡ್ ಫ್ಲೇಕ್ ಕಿಂಗ್ಸ್ ಮತ್ತು ಮಾರ್ಲ್‌ಬೊರೊ ಗೋಲ್ಡ್ ಅಡ್ವಾನ್ಸ್ ಬ್ರ್ಯಾಂಡ್‌ಗಳ ಸುಮಾರು 14 ಲಕ್ಷ ರೂಪಾಯಿ ಮೌಲ್ಯದ ನಕಲಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Fake Cigarette Racket Busted In Bengaluru 14 Lakh Worth Fake Cigarettes Seized

ಪ್ರತಿಷ್ಠಿತ ಕಂಪನಿಯ ಹೆಸರಿನಲ್ಲಿ ನಕಲಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರೆಸ್ಟ್‌ ಮಾಡಲಾಗಿದೆ. ಇವರ ಬಳಿ ₹14 ಲಕ್ಷ ರೂಪಾಯಿ ಬೆಲೆ ಬಾಳುವ 5,950 ನಕಲಿ ಸಿಗರೇಟ್ ಪ್ಯಾಕ್‌ಗಳನ್ನು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ. ಮಲ್ಲೇಶ್ವರಂ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಕಂಪನಿಯಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುವ ವ್ಯಕ್ತಿ ದೂರು ನೀಡಿದ್ದರು. ಈ ಸಂಬಂಧ ದೂರಿನಲ್ಲಿ ಐ.ಟಿ.ಸಿ. ಕಂಪನಿಗೆ ಸಂಬಂದಪಟ್ಟಂತೆ, ನಕಲಿ ಐಟಿಸಿ ಸಿಗರೇಟ್‌ಗಳ ತಯಾರಿಕೆ, ವಿತರಣೆ ಮತ್ತು ಮಾರಾಟದಲ್ಲಿ ಕೆಲವು ವ್ಯಕ್ತಿಗಳು ಮತ್ತು ಕೆಲವು ಸಂಸ್ಥೆಗಳು ತೊಡಗಿರುವುದಾಗಿ ಆರೋಪಿಸಿದ್ದರು. ಈ ಕುರಿತು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹೊರ ರಾಜ್ಯಗಳಿಂದ ತರಿಸಿ ಮಾರಾಟ

ಈ ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು ಖಚಿತ ಮಾಹಿತಿಯನ್ನು ಕಲೆ ಹಾಕಿ ಬೆಂಗಳೂರು ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಬಳಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಹೊರ ರಾಜ್ಯ ಮತ್ತು ಹೊರ ದೇಶದಿಂದ ನಕಲಿ ಸಿಗರೇಟ್‌ಗಳನ್ನು ತರಿಸಿಕೊಂಡು, ಪ್ರತಿಷ್ಠಿತ ಐಟಿಸಿ ಕಂಪನಿಯ ಹೆಸರಿನಲ್ಲಿ ಅಸಲಿ ಸಿಗರೇಟ್‌ಗಳೆಂದು ನಂಬಿಸಿ, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.

ಆರೋಪಿಗಳ ಬಳಿ ನಕಲಿ ಗೋಲ್ಡ್ ಪ್ಯಾಕ್ ಕಿಂಗ್ಸ್ 205 ಬಂಡಲ್‌ಗಳಲ್ಲಿ ಒಟ್ಟು 4,100 ಸಿಗರೇಟ್ ಪ್ಯಾಕ್‌ಗಳು ಹಾಗೂ ನಕಲಿ ಮಾರ್ಲ್‌ಬೋರೋ ಗೋಲ್ಡ್‌ ಅಡ್ವಾನ್ಸ್‌ನ ಒಟ್ಟು 185 ಬಂಡಲ್‌ಗಳು ಪ್ರತಿ ಬಂಡಲ್‌ನಲ್ಲಿ 10 ಸಣ್ಣ ಸಣ್ಣ ಪ್ಯಾಕ್‌ಗಳಿರುತ್ತವೆ. ಒಟ್ಟು 1850 ಪ್ಯಾಕ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಅಂದಾಜು ಮೌಲ್ಯ 14 ಲಕ್ಷ ರೂಪಾಯಿ ಎಂದು ಮಾಹಿತಿ ನೀಡಿದ್ದಾರೆ. ಆರೋಪಿಗಳಿಬ್ಬರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಬ್ಬರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬೆಂಗಳೂರಿನಲ್ಲಿ ನಕಲಿ ಸಿಗರೇಟ್‌ ಜಾಲವನ್ನು ಪೊಲೀಸರು ಹತ್ತಿಕ್ಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+