ದುಬಾರಿ ಬೆಂಗಳೂರು: ಬರೀ ಒಂದು ಮಲಗುವ ಕೋಣೆಗೆ 12,000 ಬಾಡಿಗೆ, ಪೋಸ್ಟ್ ವೈರಲ್
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಿನಲ್ಲಿ ಬಾಡಿಗೆ ದರವು ಏರುತ್ತಿರುವ ವೇಗವು ಹೊರ ಊರುಗಳಿಂದ ಬಂದು ವಾಸಿಸುತ್ತಿರುವ ಜನರನ್ನು ಬೆಸ್ತು ಬೀಳಿಸಿದೆ. ಇತ್ತೀಚೆಗೆ ಬರೀ ಮಲಗುವ ಒಂದು ಕೋಣೆಗೆ (1 ಆರ್‌ಕೆ) ಬರೋಬ್ಬರಿ 12,000 ಬಾಡಿಗೆ ಕೇಳುತ್ತಿರುವ ಪೋಸ್ಟ್ ಒಂದು ವೈರಲ್ ಆಗಿದೆ.
ದೇಶದ ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಬಾಡಿಗೆ ದರವು ಆಶ್ಚರ್ಯ ತಂದಿದೆ. ಗಗನಕ್ಕೇರುತ್ತಿರುವ ಮನೆ ಬಾಡಿಗೆ ಎಷ್ಟು ಕಠೋರವಾಗಿದೆಯೆಂದರೆ, ಒಂದೇ ಹಾಸಿಗೆ ಮತ್ತು ಸಣ್ಣ ಬೀರುಗೆ ಮಾತ್ರ ಹೊಂದುವ ಅತಿ ಚಿಕ್ಕ ಕೋಣೆಗೆ ತಿಂಗಳಿಗೆ ಸುಮಾರು 12,000 ರೂಪಾಯಿ ಎಂದು ಹೇಳಿರುವುದು ಎಂತವರನ್ನು ಕಣ್ಣರಳಿಸುವಂತೆ ಮಾಡಿದೆ.

ಈಗ ವೈರಲ್ ಆಗುತ್ತಿರುವ ಪೋಸ್ಟ್ ಹೌಸ್ ಹಂಟಿಂಗ್ ಅಪ್ಲಿಕೇಶನ್ "ನೋ ಬ್ರೋಕರ್" ನಲ್ಲಿ ಕಾಣಿಸಿಕೊಂಡಿದೆ. 12,000 ರೂ.ಗೆ ಒಂದು ಹಾಸಿಗೆ ಮತ್ತು ಸಣ್ಣ ಬೀರುಗೆ ಹೊಂದಿಕೊಳ್ಳುವ ಸಣ್ಣ ಜಾಗವನ್ನು ಪೋಸ್ಟ್ ತೋರಿಸುತ್ತದೆ. @saiyaa ಎಂಬುವವರು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ ಪಟ್ಟಿಯು ಹಾಸಿಗೆಯನ್ನು ಇರಿಸಿದ ನಂತರ ಸ್ಥಳಾವಕಾಶವಿಲ್ಲದೆ ದಟ್ಟಣೆಯ ಕೊಠಡಿಯನ್ನು ತೋರಿಸಿದೆ.
ಪಟ್ಟಿಯು ಬೆಂಗಳೂರಿನ ಮಹದೇವಪುರ ಪ್ರದೇಶದಲ್ಲಿ ಕೊಠಡಿಯಲ್ಲಿ 1RK (ಒಂದು ಕೋಣೆಯ ಅಡುಗೆಮನೆ) ಇದಕ್ಕೆ ಕೊಠಡಿಗೆ ಠೇವಣಿ 50,000 ರೂ. ಎಂದು ವಿವರಿಸಲಾಗಿದೆ. ಇದು ರೆಡ್ಡಿಟ್ ಪೋಸ್ಟ್ "ಎ ರೂಮ್ ಫಾರ್ ಬೆಡ್ ಈಸ್ ಎ ಬೆಡ್ ರೂಮ್" ಎಂಬ ಶೀರ್ಷಿಕೆಯು ಕೆಲವೇ ಸಮಯದಲ್ಲಿ ವೈರಲ್ ಆಗಿದೆ. ಇದಕ್ಕೆ ಹಲವಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ. ಪೋಸ್ಟ್‌ನಲ್ಲಿನ ಒಂದು ಕಾಮೆಂಟ್‌ನಲ್ಲಿ, ನಿಮ್ಮ ಭಾವನೆಗಳನ್ನು ಹೊರಹಾಕಲು ಮತ್ತು ಸುದೀರ್ಘ ದಿನದ ಕೆಲಸದ ನಂತರ ವಿಶ್ರಾಂತಿ ಪಡೆಯಲು ಅತ್ಯಾಧುನಿಕ ಏರ್ ವೆಂಟ್ ಹೊಂದಿರುವ ಐಷಾರಾಮಿ 1RK" ಎಂದು ಬರೆಯಲಾಗಿದೆ.
ಮತ್ತೊಬ್ಬ ರೆಡ್ಡಿಟ್ ಬಳಕೆದಾರರು, "ಇದು ಶೌಚಾಲಯವನ್ನು ಮಲಗುವ ಕೋಣೆಯಾಗಿ ಪರಿವರ್ತಿಸಲಾಗಿದೆ" ಎಂದು ಹೇಳಿದ್ದಾರೆ. ಏತನ್ಮಧ್ಯೆ ಇನ್ನೊಬ್ಬ ವ್ಯಕ್ತಿ, "ಆದ್ದರಿಂದ 1ಆರ್‌ಕೆ ಮೊದಲು ಇದು 1ಟಿಕೆ ಆಗಿತ್ತು ಎಂದರೆ ಮತ್ತೊಂದು ಕಾಮೆಂಟ್‌ನಲ್ಲಿ "ಆರ್‌ಕೆ ಎಂದರೆ ರಡ್ಡಿ-ಖಾನಾ, ನಿಮ್ಮ ರಡ್ಡಿಯನ್ನು ಸಂಗ್ರಹಿಸಲು ಒಂದು ಸಣ್ಣ ಕೋಣೆ?" ಎಂದು ಬರೆಯಲಾಗಿದೆ.
ನಾಲ್ಕನೇ ಬಳಕೆದಾರರು, "ಇದು ಹಾಸಿಗೆ ಹೊಂದಿರುವ ಸ್ನಾನಗೃಹ" ಎಂದು ಟೀಕಿಸಿದ್ದಾರೆ. 'ನೋ ಬ್ರೋಕರ್' ಅಪ್ಲಿಕೇಶನ್‌ನಲ್ಲಿ ಪಟ್ಟಿ ಮಾಡಲಾದ ಕೋಣೆಯಲ್ಲಿ ಸ್ಟೌವ್, ಮಿನಿ ಫ್ರಿಜ್ ಮತ್ತು ವಾಟರ್ ಪ್ಯೂರಿಫೈಯರ್ ಮತ್ತು ಎರಡು ಸಣ್ಣ ಕಪಾಟುಗಳೊಂದಿಗೆ ಸಣ್ಣ ಅಡುಗೆ ಪ್ರದೇಶವೂ ಇತ್ತು. ಚಿಕ್ಕ ಜಾಗದಲ್ಲಿ ಎಲ್ಲ ಸಾಮಾನುಗಳನ್ನು ಬಲವಂತವಾಗಿ ತುಂಬಿದಂತೆ ತೋರುತ್ತಿತ್ತು. ನೆಟಿಜನ್‌ಗಳನ್ನು ಕಂಗೆಡಿಸಿದ ಸಂಗತಿಯೆಂದರೆ ಮಾಲೀಕರು ಪಟ್ಟಿಯಲ್ಲಿ ಸೇವಕನ ಕ್ವಾರ್ಟರ್ ಅನ್ನು ಸಹ ಉಲ್ಲೇಖಿಸಿದ್ದಾರೆ.












Click it and Unblock the Notifications