ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್‌ಬಾಗ್ ಸೌಂದರ್ಯ ಮುಕುಟಕ್ಕೆ ಶೀಘ್ರ ವಸ್ತು ಸಂಗ್ರಹಾಲಯ ಗರಿ

|
Google Oneindia Kannada News

Recommended Video

ಲಾಲ್‌ಬಾಗ್ ಸೌಂದರ್ಯ ಮುಕುಟಕ್ಕೆ ಶೀಘ್ರ ವಸ್ತು ಸಂಗ್ರಹಾಲಯ ಗರಿ | Oneindia Kannada

ಬೆಂಗಳೂರು, ಮಾರ್ಚ್ 13: ಲಾಲ್ ಬಾಗ್ ನ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸುವ ಉದ್ದೇಶದಿಂದ ವಸ್ತು ಸಂಗ್ರಹಾಲಯ ನಿರ್ಮಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ಗಾಜಿನ ಮನೆ ಹತ್ತಿರವಿರುವ ಲೆಕ್ಕಶಾಖೆ ಕಟ್ಟಡವನ್ನು ಇದಕ್ಕೆ ಬಳಸಲು ಚಿಂತಿಸಲಾಗಿದೆ. ಯೋಜನೆಯನ್ನು 2018-19ನೇ ಸಾಲಿನಲ್ಲಿ ಕಾರ್ಯಗತ ಮಾಡಲು ಉದ್ದೇಶಿಸಿರುವುದಾಗಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ ಜಗದೀಶ್ ತಿಳಿಸಿದ್ದಾರೆ.

ಲಾಲ್ ಬಾಗ್ ನಲ್ಲಿ ಪುಷ್ಪರಾಶಿಯ ಸೊಬಗು ಕಣ್ತುಂಬಿಕೊಂಡ ಜನರುಲಾಲ್ ಬಾಗ್ ನಲ್ಲಿ ಪುಷ್ಪರಾಶಿಯ ಸೊಬಗು ಕಣ್ತುಂಬಿಕೊಂಡ ಜನರು

ಉದ್ಯಾನ ನಿರ್ಮಾಣವಾದ ಬಗೆ, ಇದರ ಅಭಿವೃದ್ಧಿಗೆ ಸಹಕರಿಸಿದ ಮಹನೀಯರ ಮಾಹಿತಿ, ಹಳೆಯ ಛಾಯಾಚಿತ್ರಗಳು, ಗಾಜಿನ ಮನೆ ನಿರ್ಮಾಣದ ಹಿನ್ನೆಲೆ ಮುಂತಾದ ವಿವಿರಗಳನ್ನು ನೀಡುವ ಪ್ರಯತ್ನ ಇದಾಗಿದೆ. ಲೆಕ್ಕಶಾಖೆ ವಿಭಾಗ ಸ್ವತಂತ್ರವಾಗಿದ್ದು, ಅಲ್ಲಿನ ಸಿಬ್ಬಂದಿಗಾಗಿ ಪ್ರತ್ಯೇಕ ಸ್ಥಳ ನಿಯೋಜಿಸಬೇಕಿದೆ.

Exhibition centre will come up in Lalbagh soon

ಒಟ್ಟು 12 ಮಂದಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತ್ಯೇಕವಾಗಿ ಹೊಸ ಕಟ್ಟಡ ನಿರ್ಮಿಸಲು ಇಲ್ಲಿ ಸ್ಥಳವಿಲ್ಲ. ಹಾಗಾಗಿ ಈಗಿರುವ ಕಟ್ಟಡಗಳ ಮೇಲೆ ಹೊಸ ಕಟ್ಟಡ ನಿರ್ಮಿಸುವ ಅಥವಾ ಬಳಸದ ಕಟ್ಟಡದಲ್ಲಿ ಸ್ಥಳಾವಕಾಶ ಒದಗಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

250-300 ವರ್ಷಗಳ ಹಳೆಯ ಮರಗಳ ತುಂಡುಗಳನ್ನು ಸಂಗ್ರಹಿಸಿಟ್ಟಿದ್ದೇವೆ. ಅಪರೂಪದ ಛಾಯಾಚಿತ್ರಗಳಿವೆ. ಅವುಗಳನ್ನು ಇಲ್ಲಿ ಪ್ರದರ್ಶಿಸುತ್ತೇವೆ. ಇದು ನಮ್ಮ ಪ್ರಾಥಮಿಕ ಹಂತದ ಆಲೋಚನೆಯಷ್ಟೇ. ತಜ್ಞರ ಅಭಿಪ್ರಾಯ ಪಡೆದು ಮುಂದಿನ ರೂಪರೇಷೆ ಸಿದ್ಧಪಡಿಸುತ್ತೇವೆ ಎಂದು ಹೇಳಿದರು.

English summary
Department of horticulture had decided to construct an exhibition centre in Lalbagh botanical garden which will explore history and divercity of the park soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X