ಗುರುವಾರ ರಾತ್ರಿ ಅರ್ನಬ್ - ಮೋದಿ ಮುಖಾಮುಖಿ

ಬೆಂಗಳೂರು, ಮೇ 8 : ನಿಮ್ಮ ಮೆಚ್ಚಿನ ಅತ್ತೆ ಸೊಸೆ ಧಾರಾವಾಹಿ, ಬ್ಲಾಕ್ ಬಸ್ಟರ್ ಸಿನೆಮಾ, ರೋಚಕ ಐಪಿಎಲ್ ಮ್ಯಾಚು, ಬಗೆಬಗೆಯ ರಿಯಾಲಿಟಿ ಶೋ ಎಲ್ಲ ಬದಿಗಿಟ್ಟು, ಊಟಗೀಟ ಮುಗಿಸಿ ಗುರುವಾರ ರಾತ್ರಿ 9 ಗಂಟೆಗೆ ಈ ಎಲ್ಲ ಕಾರ್ಯಕ್ರಮಗಳನ್ನು ಮೀರಿಸುವಂಥ ಟಿವಿ ಕಾರ್ಯಕ್ರಮ ನೋಡಲು ಸಜ್ಜಾಗಿ.

ಟೈಮ್ಸ್ ನೌ ಸುದ್ದಿ ವಾಹಿನಿಯ ಎಡಿಟರ್-ಇನ್-ಚೀಫ್ ಅರ್ನಬ್ ಗೋಸ್ವಾಮಿ ಅವರು ಭಾವೀ ಪ್ರಧಾನಿ ಎಂದೇ ಬಿಂಬಿತವಾಗಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೊಂದಿಗೆ 'ಫ್ರಾಂಕ್ಲಿ ಸ್ಪೀಕಿಂಗ್' ಸಂದರ್ಶನದಲ್ಲಿ ಮುಖಾಮುಖಿಯಾಗಲಿದ್ದಾರೆ. 2014ರ ಚುನಾವಣೆಯ ಅತ್ಯಂತ ನಿರೀಕ್ಷೆಯ ಸಂದರ್ಶನ ಎಂದೇ ಈ ಕಾರ್ಯಕ್ರಮವನ್ನು ಬಿಂಬಿಸಲಾಗುತ್ತಿದೆ.

Exclusive interview of Narendra Modi with Arnab Goswami

ಹಿಂದೆ ಅರ್ನಬ್ ಗೋಸ್ವಾಮಿ ಅವರು ನಡೆಸಿರುವ ಸಂದರ್ಶನವನ್ನು ನೋಡಿದವರು ಮೋದಿ ಸಂದರ್ಶನವನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಮೋದಿ ಅವರು ಸ್ಪರ್ಧಿಸಿರುವ ವಾರಣಾಸಿಯಲ್ಲಿ ಚುನಾವಣೆ (ಮೇ 12) ಇನ್ನು ಕೆಲವೇ ದಿನಗಳಿರುವಾಗ ಮೋದಿ ಮತ್ತು ಗೋಸ್ವಾಮಿ ಮುಖಾಮುಖಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. [ಅರ್ನಬ್-ರಾಹುಲ್ ಕಾಮಿಡಿ ಶೋ]

ಕೆಲ ತಿಂಗಳ ಹಿಂದೆ ಅರ್ನಬ್ ಗೋಸ್ವಾಮಿ ಅವರು ಕಾಂಗ್ರೆಸ್ 'ಯುವರಾಜ' ರಾಹುಲ್ ಗಾಂಧಿ ಅವರನ್ನು ಸಂದರ್ಶಿಸಿದ್ದು ಭಾರೀ ಚರ್ಚೆಗೆ ಈಡಾಗಿತ್ತು. ರಾಹುಲ್ ಗಾಂಧಿಯವರನ್ನು ಗೋಸ್ವಾಮಿ ಅವರು ಸಾಕಷ್ಟು ಕೆಣಕುವ ಪ್ರಶ್ನೆಗಳನ್ನು ಕೇಳಿ ಬೇಸ್ತು ಬೀಳಿಸಿದ್ದರು. ಆದರೆ, ಕೆಲ ದಿನಗಳ ಹಿಂದೆ ರಾಜ್ ಠಾಕ್ರೆ ಜೊತೆ ನಡೆಸಿದ ಸಂದರ್ಶನದಲ್ಲಿ ಅರ್ನಬ್ ಅವರನ್ನೇ ರಾಜ್ ಗೇಲಿ ಮಾಡಿದ್ದರು.

ಆದರೆ, ನರೇಂದ್ರ ಮೋದಿ ಅವರು ಪೆದ್ದುಪೆದ್ದಾಗಿ ಉತ್ತರ ನೀಡುವಂಥವರೂ ಅಲ್ಲ, ಕೆಣಕುವ ಪ್ರಶ್ನೆಗಳಿಗೆ ಕೆರಳುವಂಥವರೂ ಅಲ್ಲ ಎಂಬುದು ಹಿಂದೆ ನಡೆದಿರುವ ಅನೇಕ ಸಂದರ್ಶನಗಳಲ್ಲಿ ಸಾಬೀತಾಗಿದೆ. ಕೆಲ ದಿನಗಳ ಹಿಂದೆ ಈಟಿವಿಗೆ ನೀಡಿದ ಸಂದರ್ಶನದಲ್ಲಿ ಮೋದಿ ಅವರು ಯಾವುದಕ್ಕೂ ಕಮಿಟ್ ಆಗದಂತೆ ಜಾಣತನದಿಂದ ಉತ್ತರಗಳನ್ನು ನೀಡಿದ್ದರು. [ಮೋದಿ ಈಟಿವಿ ಸಂದರ್ಶನ]

ಅರ್ನಬ್ ಅವರು ಮೋದಿ ಅವರಿಗೆ ಏನೇನು ಪ್ರಶ್ನೆ ಕೇಳಬಹುದು? ಮೋದಿ ಅವರು ನೀಚ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ವಧ್ರಾ ಅವರ ಟೀಕೆಯ ಮಾತಿಗೆ ಮೋದಿ ಉತ್ತರಿಸಲಿದ್ದಾರೆ ಎಂದು ಟೈಮ್ಸ್ ನೌ ಟ್ವೀಟ್ ಮಾಡಿದೆ. ಸಹಜವಾಗಿ 'ಶೆಹಜಾದೆ' ರಾಹುಲ್ ಗಾಂಧಿ ಬಗ್ಗೆಯೂ ಪ್ರಶ್ನೆ ನುಸುಳಬಹುದು. ಇನ್ನು ಗೋಧ್ರಾ ಹತ್ಯಾಕಾಂಡದ ಬಗ್ಗೆ ಪ್ರಸ್ತಾಪಿಸದೆ ಸಂದರ್ಶನ ಕೊನೆಯಾಗುವುದೇ ಇಲ್ಲ. ಮೋದಿ ಅವರ ಹೆಂಡತಿ ಜಶೋದಾಬೆನ್ ಬಗ್ಗೆ ಪ್ರಶ್ನೆ ಉದ್ಭವವಾದರೂ ಅಚ್ಚರಿಯಿಲ್ಲ.

ಭಾರತದ ಪ್ರಧಾನಿಯಾಗಲು ಯಾವ ರಾಜಕಾರಣಿ ಅತ್ಯಂತ ಸೂಕ್ತ ವ್ಯಕ್ತಿ? ಎಂಬ ಸಮೀಕ್ಷೆಯನ್ನು ಕೂಡ ಟೈಮ್ಸ್ ನೌ ಫೇಸ್ ಬುಕ್ ನಲ್ಲಿ ನಡೆಸಿತ್ತು. ಅದರಲ್ಲಿ ನರೇಂದ್ರ ಮೋದಿ ಅವರಿಗೆ 882 ಮತಗಳು ಬಿದ್ದಿದ್ದರೆ, ಅರವಿಂದ್ ಕೇಜ್ರಿವಾಲ್ ಅವರಿಗೆ 96, ರಾಹುಲ್ ಗಾಂಧಿ ಅವರಿಗೆ 34 ಮತ್ತು ರಾಜನಾಥ್ ಸಿಂಗ್ ಅವರಿಗೆ ಕೇವಲ 2 ಮತಗಳು ಬಿದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+