BMTC: ನಿತ್ಯ 4-5 ಬಸ್‌ಗಳು ಕೆಟ್ಟು ನಿಲ್ಲುತ್ತವೆ: ವಾರ್ಷಿಕ ವರದಿ ನೀಡಿದ ಸಂಚಾರ ಪೊಲೀಸ್

ಬೆಂಗಳೂರು, ನವೆಂಬರ್ 12: ಬೆಂಗಳೂರಿನ ಜನರಿಗೆ ದಶಕಗಳಿಂದಲೂ ಸೇವೆ ನೀಡುತ್ತಾ ಬಂದಿರುವ ಬಿಎಂಟಿಸಿ ಬಸ್‌ಗಳ ಕುರಿತು ಮಹತ್ವದ ಮಾಹಿತಿ ಬಹಿರಂಗವಾಗಿದೆ. ಪ್ರತಿನಿತ್ಯ ಒಂದಲ್ಲಾ ಒಂಡು ಕಡೆ ಸುಮಾರು 4-5 ಬಸ್‌ಗಳು ವಿವಿಧ ಕಾರಣಗಳಿಂದ ಕೆಟ್ಟು ನಿಲ್ಲುತ್ತವೆ. ಇದರಿಂದ ಪ್ರಯಾಣಿಕರಿಗೆ ಮಾತ್ರವಲ್ಲದೇ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ. ಕೆಟ್ಟು ನಿಲ್ಲುತ್ತಿರುವ ಬಸ್‌ಗಳ ಮಾಸಿಕ, ವಾರ್ಷಿಕ ಮಾಹಿತಿ ಇಲ್ಲಿ ತಿಳಿಯಿರಿ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸರಿಸುಮಾರು 1.2 ಕೋಟಿಗೂ ಹೆಚ್ಚು ಬಸ್‌ಗಳು ಸಂಚಾರ ನಡೆಸುತ್ತವೆ. ಈ ಪೈಕಿ ಅನೇಕ ಬಸ್‌ಗಳು ಕೆಟ್ಟು ನಿಲ್ಲುತ್ತವೆ. ಇದರಲ್ಲಿ ಬಿಎಂಟಿಸಿ ನಿಗಮ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನ ಕೊನೆಯ ಸ್ಥಳದವರೆಗೂ ಜನರಿಗೆ ಸೇವೆ ನೀಡುತ್ತಿರುವ ಬಿಎಂಟಿಸಿ ಬಸ್‌ಗಳು ನಿತ್ಯ ಒಂದಲ್ಲ ಒಂದು ಪ್ರದೇಶಗಳಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಸಂಚಾರ ಸಮಸ್ಯೆ, ಟ್ರಾಫಿಕ್ ಕಿರಿಕಿರಿ ಉಂಟುಮಾಡುತ್ತಿವೆ ಎಂದು ದಿ ಹಿಂದು ವರದಿ ಮಾಡಿದೆ.

Everyday 4-5 Bus Breakdown in Road, Annually 1478 Times buses Brokedown, says BTP Data

ಈ ವರ್ಷ ಕೆಟ್ಟುಹೋದ ವಾಹನಗಳ ಪಟ್ಟಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ಗಳ ಸಂಖ್ಯೆ 1,478 ಎಂದು ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ಅಂಕಿ ಅಂಶಗಳು ಬಹಿರಂಗಪಡಿಸಿವೆ. ಪ್ರತಿ ತಿಂಗಳು ಬಿಎಂಟಿಸಿ ಬಸ್ಸುಗಳ ಸಂಖ್ಯೆ 120 ರಿಂದ 170 ರಷ್ಟು ಸ್ಥಗಿತಗೊಳ್ಳುತ್ತದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ನಿತ್ಯ ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿವೆ 4-5 ಬಸ್‌ಗಳು

ಪ್ರತಿ ದಿನ ಕನಿಷ್ಠ ನಾಲ್ಕೈದು ಬಸ್‌ಗಳು ಕೆಟ್ಟು ನಿಲ್ಲುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ ಬಿಎಂಟಿಸಿ ಬಸ್‌ಗಳ ಸಾಮಾನ್ಯ ಪ್ರಯಾಣಿಕರಾದ ನಾನು ಪ್ರತಿ ವಾರಕ್ಕೊಮ್ಮೆಯಾದರೂ ಬಸ್ಸುಗಳು ಕೆಟ್ಟು ಹೋಗುವುದನ್ನು ನೋಡುತ್ತೇನೆ. ಕೆಟ್ಟು ನಿಂತಾದ ಅದೇ ಮಾರ್ಗ ಓಡಾಡುವ ಬೇರೆ ಬಸ್‌ಗಳಿಗೆ ನಮ್ಮನ್ನು ಹತ್ತಿಸುತ್ತಾರೆ.

ಹೀಗೆ ಬಸ್‌ಗಳು ಕೆಟ್ಟುನಿಂತಾಗ ಬೇರೆ ಬಸ್‌ಗಳಿಗಾಗಿ ಅದೇ ಮಾರ್ಗದಲ್ಲಿ ಬರಲು ಸುಮಾರು 10 ನಿಮಿಷ ಕಾಯಬೇಕಾಗುತ್ತದೆ. ಇಂತಹ ಘಟನೆಗಳು ಆಗಾಗ ಸಂಭವಿಸುವುದರಿಂದ ಸೇರಬೇಕಾದ ಸ್ಥಳ, ಊರು ಕಚೇರಿಗಳಿಗೆ ಅಡ್ಡಿ ಉಂಟಾಗುತ್ತದೆ ಎಂದು ಯಲಹಂಕ ನ್ಯೂ ಟೌನ್‌ ನಗರಕ್ಕೆ ಪ್ರವೇಶಿಸುವ ಪ್ರಯಾಣಿಕರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

Everyday 4-5 Bus Breakdown in Road, Annually 1478 Times buses Brokedown, says BTP Data

ಶೇಕಡಾ 30-50 ರಷ್ಟು ಸಂಚಾರ ದಟ್ಟಣೆ ಸಮಸ್ಯೆ

ನಗರದಲ್ಲಿ ನಿತ್ಯ ಅಲ್ಲಲ್ಲಿ ಬಸ್‌ಗಳು ಕೆಟ್ಟು ನಿಲ್ಲುವುದರಿಂದ ಸಂಚಾರಕ್ಕೆ ತೊಂದರೆ ಆಗುತ್ತದೆ. ಮುಖ್ಯರಸ್ತೆಯಲ್ಲಿಯೇ ಹೀಗಾಗುವುದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಇಡೀ ಕ್ಯಾರೇಜ್ ಬ್ಲಾಕ್ ಆಗುತ್ತದೆ. ಇದು ಮೂರು ಪಥದ ರಸ್ತೆಯಲ್ಲಿ ಶೇಕಡಾ 30ರಷ್ಟು ಮತ್ತು ದ್ವಿಪಥ ರಸ್ತೆಯಲ್ಲಿ ಶೇಕಡಾ 50 ರಷ್ಟು ಸಂಚಾರ ದಟ್ಟಣೆ ಸೃಷ್ಟಿಸುತ್ತದೆ ಎಂದು ಬೆಂಗಳೂರು ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂಎನ್ ಅನುಚೇತ್ ತಿಳಿಸಿದರು.

ಬಿಎಂಟಿಸಿ ಬಸ್‌ಗಳ್ಲಲಿ ಬಹುತೇಕ ಬಸ್‌ಗಳು ನ್ಯೂಮ್ಯಾಟಿಕ್ ಬ್ರೇಕ್‌ ವ್ಯವಸ್ಥೆ ಹೊಂದಿವೆ. ಇದರಿಂದ ಬ್ರೇಕ್‌ಗಳು ಜಾಮ್ ಆಗಿರುವಾಗ ನಾವು ಅವುಗಳನ್ನು ತಳ್ಳಲು ಸಹ ಸಾಧ್ಯವಾಗುವುದಿಲ್ಲ. ಬಿಎಂಟಿಸಿಯ ತಂತ್ರಜ್ಞರು ಬಂದು ಅವರೇ ದುರಸ್ತಿ ಮಾಡಬೇಕು. ಅಲ್ಲಿಯವರೆಗೆ ಅವುಗಳು ರಸ್ತೆಯಲ್ಲಿಯೇ ನಿಂತಿರುತ್ತವೆ.

ಲಕ್ಷ ಕಿಮೀ ಓಡಿದ ಬಸ್ ಸ್ಥಗಿತ: ಬಿಎಂಟಿಸಿ

ಬಿಎಂಟಿಸಿ ಅಧಿಕಾರಿಗಳು ಮಾತ್ರ ರಸ್ತೆಗಳಲ್ಲಿ ಒಂದು ಗಂಟೆಗೂ ಮಾತ್ರ ಬಸ್‌ಗಳು ಮುಂದೆ ಚಲಿಸದೇ ನಿಂತರೆ ಮಾತ್ರ ಅದು ಸ್ಥಗಿತ ಎಂದು ಹೇಳುತ್ತಾರೆ. ನಮ್ಮ ಬಸ್ಸುಗಳಲ್ಲಿ ಕೆಲವೊಮ್ಮೆ ಸಣ್ಣ ಸಮಸ್ಯೆಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಹೀಗಾದಾಗ ಕೇವಲ ಒಂದು ಗಂಟೆಯ ಒಳಗೆ ಸಮಸ್ಯೆ ಪರಿಹರಿಸಲಾಗುತ್ತದೆ.

ಖಾಸಗಿ ವಾಹನಗಳಿಗಿಂತ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತಿರುವ ಬಿಎಂಟಿಸಿ ಒಂದು ಲಕ್ಷ ಕಿಲೋಮೀಟರ್‌ ಓಡಿದ ಬಸ್‌ಗಳನ್ನು ಸೇವೆಯಿಂದ ಹೊರಗಿಡಲಾಗುತ್ತದೆ. ಪ್ರತಿ ದಿನ ರಾತ್ರಿ ಯಾವುದೇ ಬಸ್‌ಗಳು ನಿರ್ವಹಣೆ, ಮೇಲ್ವೀಚಾರಣೆ ಮಾಡದೇ ಡಿಪೋ ಹೊರಡದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.

ಸೇವೆಯಿಂದ ಹೊರಗುಳಿದ 4,500ಕ್ಕೂ ಹೆಚ್ಚು ವಾಹನಗಳು

ಬೆಂಗಳೂರು ಸಂಚಾರ ಪೊಲೀಸ್ ಮೂಲಗಳ ಪ್ರಕಾರ ವರ್ಷ ಬಿಎಂಟಿಸಿ ಸೇರಿದಂತೆ ಒಟ್ಟು 4,658 ವಾಹನಗಳು ಕೆಟ್ಟು ನಿಲುತ್ತವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಒಟ್ಟು 395 ಬಸ್‌, ಖಾಸಗಿ ಸಂಸ್ಥೆಗಳದ್ದು 327 ಬಸ್‌ಗಳು ಹಾಗೂ 713 ಲಘು ಮೋಟಾರು ವಾಹನ (LMV) ಮತ್ತು ಕಾರುಗಳು ಈ ಆಗಾಗ ಕೆಟ್ಟು ಹೋಗುವ ಬಸ್‌ಗಳ ಪಟ್ಟಿಗೆ ಸೇರಿವೆ.

ಬೆಂಗಳೂರಿನಲ್ಲಿ ಅಂದಾಜು 15-20 ವಾಹನಗಳು ಕೆಟ್ಟು ಹೋಗುತ್ತವೆ. ವಿಶೇಷವಾಗಿ ಹೆಬ್ಬಾಳ ಮತ್ತು ಟಿನ್ ಫ್ಯಾಕ್ಟರಿ ನಡುವಿನ ವಿಸ್ತರಣೆಯು ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚು ಎಂದು ನಗರ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+