ಟಿಪ್ಪು ಜಯಂತಿ ಆಚರಿಸಿದರೆ ತಕ್ಕ ಶಾಸ್ತಿ: ಸರ್ಕಾರಕ್ಕೆ ಈಶ್ವರಪ್ಪ ಎಚ್ಚರಿಕೆ
ಬೆಂಗಳೂರು, ಅಕ್ಟೋಬರ್ 16: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಜನರ ಪ್ರತಿರೋಧದ ನಡುವೆ ಟಿಪ್ಪು ಜಯಂತಿ ಆಚರಿಸಲು ಮುಂದಾದರೆ ತಕ್ಕಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಹಿರಿಯ ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಮಾಡಿದದವರು ಯಾವ ರೀತಿ ಅಧಿಕಾರ ಕಳೆದುಕೊಂಡರು ಎನ್ನುವುದು ನಮಗೆ ಗೊತ್ತಿದೆ, ಟಿಪ್ಪು ಖಡ್ಗ ತಂದವರು ಏನು ಆದರೂ ಎನ್ನುವುದೂ ತಿಳಿಸಿದೆ, ಟಿಪ್ಪು ಜಯಂತಿ ಆಚರಣೆಯಿಂದ ಕೊಡಗಿನಲ್ಲಿ ಜನರ ಮಾರಣಹೋಮವಾಗಿದೆ, ಹಿಂದುಗಳ ಮೇಲೆ ದೌರ್ಜನ್ಯವಾಗಿದೆ ಎಂದರು.
ಇದೆಲ್ಲವನ್ನು ನೋಡಿ ಸರ್ಕಾರ ಬುದ್ಧಿ ಕಲಿಯಬೇಕು, ಈ ವಿವಾದಾತ್ಮಕ ವ್ಯಕ್ತಿಯ ಜಯಂತಿ ಮಾಡಿ ಜನರ ಭಾವನೆಯನ್ನು ಕೆರಳಿಸಬಾರದು, ಇಷ್ಟೆಲ್ಲಾ ಆದರೂ ಟಿಪ್ಪು ಜಯತಿ ಆಚರಿಸಿದರೆ ಜೆಡಿಎಸ್ ಹಾಗೂ ಮೈತ್ರಿ ಸರ್ಕಾರದ ಪತನ ಆರಂಭವಾದಂತೆ ಎಂದು ಹೇಳಿದರು.

ಈ ಮಧ್ಯೆ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ತನ್ವೀರ್ ಸೇಠ್ ಟಿಪ್ಪು ಸುಲ್ತಾನ್ ಒಬ್ಬ ದೇಶಭಕ್ತ ಅವರ ಜಯಂತಿ ಜಯಂತಿಯಲ್ಲಿ ಯಾರು ರಾಜಕಾರಣ ಮಾಡಬಾರದು ಎಂದು ಮನವಿ ಮಾಡಿದರು.












Click it and Unblock the Notifications