ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್ ಬಿಕ್ಕಟ್ಟು: ಆಸ್ಪತ್ರೆ ನಿರ್ದೇಶಕನ ಬದಲಾವಣೆ, ಯಾರ ಹಿತಾಸಕ್ತಿಗಾಗಿ?

|
Google Oneindia Kannada News

ಬೆಂಗಳೂರು, ಜುಲೈ 9: ಇಡೀ ರಾಜ್ಯ ಕೊವಿಡ್ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಪ್ರಮುಖ ಆಸ್ಪತ್ರೆಯೊಂದರ ನಿರ್ದೇಶಕರಿಗೆ ಆರು ವಾರಗಳ ಕಾಲ ರಜೆ ನೀಡಿರುವ ಕ್ರಮವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಖಂಡಿಸಿದ್ದಾರೆ.

Recommended Video

Bengaluru has no more ICU beds , patients cry | Oneindia Kannada

''ಕೋವಿಡ್ ಸಮಸ್ಯೆ ಇರುವಾಗಲೇ ನಿರ್ದೇಶಕರನ್ನ ರಜೆಗೆ ಕಳುಹಿಸಿದ್ದು ಯಾಕೆ? ಏಕಾಏಕಿ ನಿರ್ದೇಶಕರನ್ನ ಬದಲಾಯಿಸೋದು ಯಾಕೆ? ಇದರ ಹಿಂದೆ ಯಾರ ಹಿತಾಸಕ್ತಿ ಇದೆ ಸ್ವಾಮಿ? ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರನ್ನು ಪ್ರಶ್ನಿಸಿದ್ದಾರೆ.

ಮೊದಲು ಉತ್ತರ ಕೊಡಿ, ಅಂಜಿಕೆ ಯಾಕೆ? ಸಿದ್ದರಾಮಯ್ಯಮೊದಲು ಉತ್ತರ ಕೊಡಿ, ಅಂಜಿಕೆ ಯಾಕೆ? ಸಿದ್ದರಾಮಯ್ಯ

ಈಗಾಗಲೇ ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಪಕ್ಷದವರು ಆರೋಪಿಸಿದ್ದಾರೆ. ಇಂತಹ ಸಮಯದಲ್ಲಿ ಪ್ರಮುಖ ಆಸ್ಪತ್ರೆಯ ನಿರ್ದೇಶಕರ ಬದಲಾವಣೆ ಮತ್ತಷ್ಟು ಟೀಕೆಗೆ ಗುರಿಯಾಗಿದೆ. ಈ ಕುರಿತು ಈಶ್ವರ್ ಖಂಡ್ರೆ ಸರಣಿ ಟ್ವೀಟ್ ಮಾಡಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಮುಂದೆ ಓದಿ.....

ಬೌರಿಂಗ್ ಆಸ್ಪತ್ರೆ ನಿರ್ದೇಶಕರಿಗೆ ರಜೆ

ಬೌರಿಂಗ್ ಆಸ್ಪತ್ರೆ ನಿರ್ದೇಶಕರಿಗೆ ರಜೆ

ರಾಜ್ಯದ ಪ್ರಮುಖ ಕೊವಿಡ್ ಆಸ್ಪತ್ರೆಯಾದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ದೇಶಕ ಡಾ ಮಂಜುನಾಥ್ ಅವರನ್ನು ಆರು ವಾರಗಳ ಕಾಲ ಧಿಡೀರ್ ರಜೆ ಮೇಲೆ ಕಳುಹಿಸಲಾಗಿದೆ. ಅವರ ಜಾಗಕ್ಕೆ ಮನೋಜ್ ಕುಮಾರ್ ಎಂಬ ಮತ್ತೊಬ್ಬರಿಗೆ ಜವಾಬ್ದಾರಿ ವಹಿಸಲಾಗಿದೆ.

ಡಾ ಸುಧಾಕರ್ ಏಕೆ ಸುಮ್ಮನಿದ್ದಿರಿ?

ಡಾ ಸುಧಾಕರ್ ಏಕೆ ಸುಮ್ಮನಿದ್ದಿರಿ?

''ಆಸ್ಪತ್ರೆಗೆ ಸಂಬಂಧವೇ ಇಲ್ಲದವರನ್ನ ನಿರ್ದೇಶಕರನ್ನಾಗಿಸುವ ಪ್ರಯತ್ನ ನಡೆದಿದೆ. ಸ್ವತಃ ಬೌರಿಂಗ್ ಆಸ್ಪತ್ರೆ ವೈದ್ಯರೇ ಸಚಿವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾನ್ಯ ಸುಧಾಕರ್ ಅವರೇ ನಿಮ್ಮ ಮೂಗಿನ ಕೆಳಗೆ ಎಲ್ಲಾ ನಡಿತಾ ಇದ್ರೂ ಏಕೆ ಸುಮ್ಮನಿದ್ದಿರಿ?'' ಎಂದು ಈಶ್ವರ್ ಖಂಡ್ರೆ ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ ಅಯೋಗ್ಯತೆಗೆ ಇದಕ್ಕಿಂತ ಸಾಕ್ಷಿ ಬೇಕೇ? ಸಿದ್ದರಾಮಯ್ಯರಾಜ್ಯ ಸರ್ಕಾರದ ಅಯೋಗ್ಯತೆಗೆ ಇದಕ್ಕಿಂತ ಸಾಕ್ಷಿ ಬೇಕೇ? ಸಿದ್ದರಾಮಯ್ಯ

ಯಾರ ಹಿತಾಸಕ್ತಿಗಾಗಿ ಇಂತಹ ಕೆಲಸ?

ಯಾರ ಹಿತಾಸಕ್ತಿಗಾಗಿ ಇಂತಹ ಕೆಲಸ?

''ಕೋವಿಡ್ ಸಮಸ್ಯೆ ಇರುವಾಗಲೇ ನಿರ್ದೇಶಕರನ್ನ ರಜೆಗೆ ಕಳುಹಿಸಿದ್ದು ಯಾಕೆ? ಏಕಾಏಕಿ ನಿರ್ದೇಶಕರನ್ನ ಬದಲಾಯಿಸೋದು ಯಾಕೆ? ಇದರ ಹಿಂದೆ ಯಾರ ಹಿತಾಸಕ್ತಿ ಇದೆ ಸ್ವಾಮಿ? ರಾಜ್ಯದ ಜನ ಪ್ರಶ್ನೆ ಕೇಳ್ತಿದ್ದಾರೆ...ಉತ್ತರಿಸಿ...'' ಎಂದು ಆಗ್ರಹಿಸಿದ್ದಾರೆ.

ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ

ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ

ವೆಂಟಿಲೇಟರ್, ಪಿಪಿಇ ಕಿಟ್, ಸ್ಯಾನಿಟೈಸರ್, ಮಾಸ್ಕ್, ಆಕ್ಸಿಜನ್ ಸಿಲಿಂಡರ್ ಸೇರಿದಂತೆ ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಮಾರುಕಟ್ಟೆ ಬೆಲೆಗಿಂತ ಅಧಿಕ ಹಣ ನೀಡಿ ಖರೀದಿಸಿ 2200 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ದೂರಿದ್ದಾರೆ.

English summary
Bowring Hospital director was sent 6 week leave amid COVID 19 crisis. now, manoj kumar is taking in charge of duty in the absence of dr manjunath. Kpcc working president Eshwar khandre opposed the Director's leave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X