ಶೀಘ್ರವೇ ಏರಲಿದೆ ಲಾಲ್‌ಬಾಗ್ ಪ್ರವೇಶ, ಪಾರ್ಕಿಂಗ್ ಶುಲ್ಕ
ಬೆಂಗಳೂರು, ಅಕ್ಟೋಬರ್ 9: ಲಾಲ್‌ಬಾಗ್‌ನ ಪ್ರವೇಶ ಹಾಗೂ ಪಾರ್ಕಿಂಗ್ ಶುಲ್ಕ ಏರಿಕೆಗೆ ಸಿದ್ಧತೆ ನಡೆದಿದೆ. ಲಾಲ್‌ಬಾಗ್‌ಗೆ ಬರುವ ಪ್ರವಾಸಿಗರು ಇನ್ನುಮುಂದೆ ಹೆಚ್ಚಿನ ಶುಲ್ಕ ನೀಡುವುದಷ್ಟೇ ಅಲ್ಲದೆ ಪಾರ್ಕಿಂಗ್ ಗೂ ಹೆಚ್ಚಿನ ದರ ನೀಡಬೇಕಾಗುತ್ತದೆ.
ತೋಟಗಾರಿಕೆ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗೆ ಕರ್ನಾಟಕ ಉದ್ಯಾನಗಳ ಪರಿಷತ್ ಒಪ್ಪಿಗೆ ನೀಡಿದೆ. ಲಾಲ್ ಬಾಗ್ ನಿರ್ವಹಣಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ . ಹೀಗಾಗಿ ಪ್ರವೇಶ ಹಾಗೂ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿದೆ. ದ್ವಿಚಕ್ರ ವಾಹನಕ್ಕೆ 20 ರೂ.ನಿಂದ 25ರೂಗೆ ಏರಲಿದೆ. ಕಾರು ಸಹಿತ ನಾಲ್ಕು ಚಕ್ರದ ವಾಹನಕ್ಕೆ 25ರೂನಿಂದ 30ರೂ ಗೆ ವ್ಯಾನ್ 50 ರೂನಿಂದ 60 ರೂ ಹಾಗೂ ಬಸ್‌ಗೆ 100ರಿಂದ 120ರೂಗೆ ಏರಿಕೆಯಾಗಲಿದೆ.
ಪ್ರತಿ ವರ್ಷ ಲಾಲ್‌ಬಾಗ್ ಪುಷ್ಪ ಪ್ರದರ್ಶನದ ವೇಳೆ ಸಾಮಾನ್ಯವಾಗಿ ಪ್ರವೇಶ ಶುಲ್ಕವನ್ನು ಏರಿಕೆ ಮಾಡಲಾಗುತ್ತಿತ್ತು. ಆದರೆ ಇದೀಗ ದಿನಗಳನ್ನು ಹೊರತುಪಡಿಸಿ ಸಾಮಾನ್ಯ ದಿನಗಳಂದೂ ಹೆಚ್ಚುವರಿ ಹಣವನ್ನು ತೆರಬೇಕಾಗುತ್ತದೆ.

ಸಸ್ಯಕಾಶಿಗೆ ಏಳರಿಂದ ಎಂಟು ಸಾವಿರ ವಾರಾಂತ್ಯದಲ್ಲಿ 15 ಕ್ಕೂ ಹೆಚ್ಚು ಜನ ಭೇಟಿ ನೀಡುತ್ತಾರೆ, ಇವರಿಂದ ಶುಲ್ಕದ ರೂಪದಲ್ಲಿ ಸಂಗ್ರಹವಾಗುವ ಹಣ ಉದ್ಯಾನದ ನಿರ್ವಹಣೆ, ಸ್ವಚ್ಛತೆ, ಸಿಬ್ಬಂದಿ ವೆಚ್ಚ ಭರಿಸಲು ಖರ್ಚಾಗುತ್ತಿದೆ.
ಹೀಗಾಗಿ ಅನಿವಾರ್ಯವಾಗಿ ಶುಲ್ಕ ಏರಿಸಬೇಕಿದೆ ಎನ್ನುವುದು ಅಧಿಕಾರಿಗಳ ವಾದವಾಗಿದೆ. ಲಾಲ್ ಬಾಗ್ ಪ್ರವೇಶ ಶುಲ್ಕದ ಮೇಲೆ ಶೇ.18ರಷ್ಟು ಜಿಎಸ್ ಸ್ಟಿ ವಿಧಿಸಿರುವ ಕಾರಣ ಪ್ರವೇಶ ಶುಲ್ಕವನ್ನು ಏರಿಸಲಾಗುತ್ತಿದೆ. ಪ್ರವೇಶ ಶುಲ್ಕ 50ರಿಂದ 60 ರೂ ಏರಿಕೆ ಮಾಡಲಾಗಿದೆ.












Click it and Unblock the Notifications