ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಾಥನೆಂದು ಮನೆ ಸೇರಿಕೊಂಡ, ಮನೆ ಮಗಳನ್ನೇ ಓಡಿಸಿಕೊಂಡು ಹೋದ

|
Google Oneindia Kannada News

ಬೆಂಗಳೂರು, ಡಿಸೆಂಬರ್ 1: ಅನಾಥನೆಂದು ಹೇಳಿಕೊಂಡು ಮಹಿಳೆಯ ಮನೆಯಲ್ಲಿ ಆಶ್ರಯ ಪಡೆದಿದ್ದ ಯುವಕನೊಬ್ಬ ಮನೆಯ ಮಗಳನ್ನೇ ಪ್ರೇಮಿಸಿ ಓಡಿಸಿಕೊಂಡು ಹೋದ ಘಟನೆಗೆ ಹೈಕೋರ್ಟ್ ಶುಕ್ರವಾರ ಸಾಕ್ಷಿಯಾಗಿದೆ.

ಅನಾಥ ಎಂದು ಹೇಳಿಕೊಂಡವನಿಗೆ ಆಶ್ರಯ ಕೊಟ್ಟು ಮಗನಂತೆ ಆರೈಕೆ ಮಾಡಿ ಕೊನೆಗೆ ಆತನಿಂದಲೇ ಕರುಳ ಕುಡಿಯನ್ನು ತಾಯಿ ದೂರ ಮಾಡಿಕೊಂಡಿದ್ದಾಳೆ.

ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ತಾಯಿ-ಮಗಳು ಕಿಡ್ನ್ಯಾಪ್ ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ತಾಯಿ-ಮಗಳು ಕಿಡ್ನ್ಯಾಪ್

ಅನಾಥ ನನಗೆ ಯಾರೂ ದಿಕ್ಕಿಲ್ಲ ಹ ಹೇಳಿ ಮಹಿಳೆಯೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದ, ಮಗಳು ತಾಯಿಯ ಹತ್ತಿರ ಆತನನ್ನು ಬಿಟ್ಟು ನಾನು ಇರಲಾರೆ ಎಂದು ಕೂಡ ಹೇಳಿದ್ದಳು, ತಾಯಿ ಮಗಳ ಸಂಬಂಧದ ಮುಂದೆ ಪ್ರೀತಿಯೇ ಗೆದ್ದಿದ್ದು ಇದೀಗ ಮಗಳನ್ನು ಕಳೆದುಕೊಂಡು ತಾಯಿ ಅನಾಥಳಾಗಿದ್ದು ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

Entered home as orphan, ran away with owner daughter

ಹೇಬಿಯಸ್ ಕಾರ್ಪಸ್ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ನ್ಯಾ. ಕೆ.ಎನ್ ಫಣೀಂದ್ರ ನೇತೃತ್ವದ ನ್ಯಾಯಪೀಠದಲ್ಲಿ ಶುಕ್ರವಾರ ಈ ವೃತ್ತಾಂತ ನಡೆಯಿತು.

ಸಾಲ ವಾಪಸ್ ನೀಡದ್ದಕ್ಕೆ ಸ್ನೇಹಿತನ ಹೆಂಡತಿಯನ್ನೇ ಮದುವೆಯಾದ ಭೂಪ ಸಾಲ ವಾಪಸ್ ನೀಡದ್ದಕ್ಕೆ ಸ್ನೇಹಿತನ ಹೆಂಡತಿಯನ್ನೇ ಮದುವೆಯಾದ ಭೂಪ

ಡಿಸೆಂಬರ್‌ನಲ್ಲಿ ಆಕೆಯ ಮದುವೆ ನಿಶ್ಚಯವಾಗಿತ್ತು: ದೂರದ ಸಂಬಂಧಿ ಜೊತೆಗೆ ಡಿಸೆಂಬರ್ 1 ಹಾಗೂ 2 ರಂದು ಮದುವೆ ನಿಶ್ಚಯವಾಗಿತ್ತು, ಈ ನಡುವೆ ಆಕೆ ಮನೆ ಬಿಟ್ಟು ಹೋಗಿದ್ದಳು, ಕೋರ್ಟ್‌ಗೆ ಬಂದ ಮಗಳು, ತಾನು ಪ್ರೀತಿಸಿದ ಯುವಕನ ಜೊತೆಗೇ ಹೋಗುವುದಾಗಿ ಹೇಳಿದಾಗ ತಾಯಿ ಅಸಹಾಯಕಳಾಗಿ ನಿಂತಿದ್ದಳು.

ಯುವತಿ ತಾನು ಆತನನ್ನು ಪ್ರೀತಿಸುತ್ತಿದ್ದೇನೆ ಸ್ವ ಇಚ್ಛೆಯಿಂದಲೇ ಆತನ ಜೊತೆಗೆ ಹೋಗಿದ್ದೇನೆ ಎಂದು ಹೇಳಿದಾಗ ಬಲವಂತವಾಗಿ ಆಕೆಯನ್ನು ತಾಯಿಯ ಜೊತೆಗೆ ಕಳುಹಿಸಿಕೊಡಲು ಸಾಧ್ಯವಿಲ್ಲ ಎಂದು ಮೌಖಿಕವಾಗಿ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಮಗಳನ್ನು ಯುವಕನ ಜೊತೆಗೆ ಹೋಗಲು ಅವಕಾಶ ಮಾಡಿಕೊಟ್ಟಿತು.

English summary
A orphan entered to old couple home, later he ran away with their daughter for marriage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X