ನ.29ರೊಳಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಿ

ಬೆಂಗಳೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ, ಇದುವರೆಗೂ 100 ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಪಡೆಯಲಾಗಿದೆ ಎಂದರು, ನ.30ರಂದು ಮತದಾರರ ಪಟ್ಟಿಯ ಕರಡು ಪ್ರತಿಯನ್ನು ಪ್ರಕಟಿಸಲಾಗುತ್ತದೆ. ಆಯೋಗದ ವೆಬ್ ಸೈಟ್ ನಲ್ಲಿಯೂ ಇದು ಲಭ್ಯವಿರಲಿದೆ ಎಂದರು. (ಪಟ್ಟಿಗೆ ಹೆಸರು ನೋಂದಾವಣೆ ಮಾಡುವುದು ಹೇಗೆ)
ವೆಬ್ ಸೈಟ್ ನಲ್ಲಿ ನಿಮ್ಮ ಹೆಸರು ಹುಡುಕಲು ವಿಫಲವಾದರೆ, ಜನರು ತಮ್ಮ ಸಮೀಪದ ಬೆಂಗಳೂರು ಒನ್ ಕೇಂದ್ರ ಅಥವ ಬಿಬಿಎಂಪಿ ವಾರ್ಡ್ ಕಚೇರಿಗಳಿಗೆ ಭೇಟಿ ನೀಡಿ, ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಬೆಂಗಳೂರು ಒನ್ ಕೇಂದ್ರ ಮತ್ತು ಬಿಬಿಎಂಪಿ ವಾರ್ಡ್ ಕಚೇರಿಗಳಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಾವಣೆ ಮಾಡಬಹುದಾಗಿದೆ ಎಂದರು. ನೋಂದಣಿ ಮುಗಿದ ಬಳಿಕ ಅಧಿಕಾರಿಗಳು ಅದರ ಪರಿಶೀಲನೆ ನಡೆಸಲಿದ್ದಾರೆ. ಒಬ್ಬರು ವ್ಯಕ್ತಿಯ ಹೆಸರು ಎರಡು ಕಡೆ ನೋಂದಣಿ ಆಗಿದ್ದರೆ, ಪರಿಶೀಲನೆ ಬಳಿಕ ಒಂದು ಕಡೆ ತೆಗೆದುಹಾಕಲಾಗುವುದು ಎಂದರು.
ಆಲ್ ಲೈನ್ ಮೂಲಕವು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ. http://www.voterreg.kar.nic.in/ತಾಣದಲ್ಲಿ ಅರ್ಜಿ ನಮೂನೆಗಳು ಲಭ್ಯವಿದೆ.












Click it and Unblock the Notifications