ಎನ್‌ಕೌಂಟರ್; ರೌಡಿ ಭರತನ ಗ್ಯಾಂಗ್‌ಗೆ ಪೊಲೀಸರ ಶೋಧ

ಬೆಂಗಳೂರು, ಫೆಬ್ರವರಿ 27: ಸ್ಲಂ ಭರತನ ಎನ್‌ಕೌಂಟರ್ ಬೆನ್ನಲ್ಲೆ ಪೊಲೀಸರು ರೌಡಿ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಸ್ಲಂ ಭರತನ ಸಹಚರರು ಭರತನ ಮೃತದೇಹ‌ ನೋಡಲು ಆಗಮಿಸುವ ಹಿನ್ನೆಲೆಯಲ್ಲಿ ನಗರದ ಸಪ್ತಗಿರಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ಗುರುವಾರ ಬೆಳಿಗ್ಗೆ ಪೊಲೀಸ್ ವಾಹನ ಅಡ್ಡಗಟ್ಟಿ ಸ್ಲಂ ಭರತನನ್ನು ಅಪಹರಿಸಲು ಭಾಗಿಯಾದ 50 ಕ್ಕೂ ಹೆಚ್ಚು ಭರತನ ಸಹಚರರನ್ನು ಲಿಸ್ಟ್ ಔಟ್ ಮಾಡಿರುವ ಉತ್ತರ ವಿಭಾಗದ ಪೊಲೀಸರು ಅವರಿಗಾಗಿ ಶೋಧ ನಡೆಸಿದ್ದಾರೆ.

ಸದ್ಯ ಸಪ್ತಗಿರಿ ಆಸ್ಪತ್ರೆಯಲ್ಲಿರುವ ಸ್ಲಂ ಭರತನ ಮೃತದೇಹ‌ ಇಡಲಾಗಿದೆ. ಈ ವೇಳೆ ಆಸ್ಪತ್ರೆ ಬಳಿ ಬಂದ ಸ್ಲಂ ಭರತನ ಸಹಚರರು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಸುಮಾರು 10 ಕ್ಕೂ ಅಧಿಕ ರೌಡಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

Encounter On Rowdy Slum Bharath Police Investigating His Rowdy Friends

ಸ್ಥಳಕ್ಕೆ ಭೇಟಿ ನೀಡಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್, ಸ್ಲಂ ಭರತನ ನೋಡಲು ಬಂದ ಪ್ರತಿಯೊಬ್ಬರ ವಿಚಾರಣೆ ನಡೆಸಿ ಠಾಣೆಗೆ ಕರೆದೊಯ್ಯವಂತೆ ಸೂಚನೆ ನೀಡಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಗೆ ಆರೋಪಿಗಳನ್ನು ಕರೆದೊಯ್ದ ಪೊಲೀಸರು ಭರತನನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರ ಕುರಿತು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+