• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಟ್ಟಹಲಸೂರು ಮೆಟ್ರೊ ಸ್ಟೇಷನ್‍ ಅಭಿವೃದ್ಧಿಗೆ 140 ಕೋಟಿ ರೂ.ಗಳ ಹೂಡಿಕೆ

|

ಬೆಂಗಳೂರು, ಸೆಪ್ಟೆಂಬರ್ 09: ಭಾರತದ ಮುಂಚೂಣಿಯ ರಿಯಲ್ ಎಸ್ಟೇಟ್ ಅಭಿವೃದ್ದಿದಾರ ಸಂಸ್ಥೆಗಳಲ್ಲಿ ಒಂದಾಗಿರುವ ಎಂಬೆಸ್ಸಿ ಗ್ರೂಪ್ ಈಗ ಬೆಂಗಳೂರಿನ ಅಭಿವೃದ್ದಿಗೆ ತನ್ನ ಬದ್ಧತೆಯ ನೈಜ ಉತ್ಸಾಹದ ಜೊತೆಗೆ ಹಾಗೂ ವಿಮಾನ ನಿಲ್ದಾಣಕ್ಕೆ ಕ್ಷಿಪ್ರಗತಿಯ ಹಾಗೂ ಸೀಮಾತೀತ ಸಂಪರ್ಕವನ್ನು ನಿರ್ಮಿಸುವುದಕ್ಕಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ(ಬಿಎಂಆರ್‍ಸಿಎಲ್)ದೊಂದಿಗೆ ಪರಸ್ಪರ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದೆ.

   ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ನೋಡೋ ಕಾಲ ಬಂದಾಯ್ತು | Oneindia Kannada

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ಸುಮಾರು 140 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಬೆಟ್ಟಹಲಸೂರು ಮೆಟ್ರೊ ಸ್ಟೇಷನ್ ನಿರ್ಮಿಸಲಾಗುತ್ತಿದೆ. ಈ ಒಡಂಬಡಿಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹಾಜರಿಯಲ್ಲಿ ಸಹಿ ಹಾಕಲಾಗಿದ್ದು, ಇದು ಮತ್ತೊಂದು ಗಮನಾರ್ಹ ಸಾರ್ವಜನಿಕ ಖಾಸಗಿ ಪಾಲುದಾರಿಕೆಯ ಒಪ್ಪಂದವಾಗಿರುತ್ತದೆ.

   ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ; ಟೆಂಡರ್‌ ಆಹ್ವಾನ

   ಎಂಬೆಸ್ಸಿ ಸಮೂಹ ಬೆಂಗಳೂರು ನಗರ ಮೂಲಸೌಕರ್ಯದಲ್ಲಿ ನಡೆಸಿರುವ ಹೂಡಿಕೆ 450 ಕೋಟಿ ರೂ.ಗಳಷ್ಟಾಗಿದ್ದು, ಇದರಲ್ಲಿ ಕಾಡುಬೀಸನಹಳ್ಳಿ ಮತ್ತು ಬೆಟ್ಟಹಲಸೂರು ಮೆಟ್ರೊ ಸ್ಟೇಷನ್‍ಗಳು, ಸ್ಕೈವಾಕ್ ಹಾಗೂ ಥಣಿಸಂದ್ರ ಮತ್ತು ನಾಗವಾರ ಕೆರೆ ಜಂಕ್ಷನ್ ನಡುವಿನ ಫ್ಲೈಒವರ್ ಗಳು ಸೇರಿರುತ್ತವೆ. ವಾಣಿಜ್ಯ ಕಾರ್ಯಾಚರಣೆಗಳು ಆರಂಭವಾದ ದಿನಾಂಕದಿಂದ 30 ವರ್ಷಗಳವರೆಗಿನ ಆರಂಭದ ರಿಯಾಯಿತಿ ಅವಧಿಯನ್ನು ಈ ಪರಸ್ಪರ ತಿಳುವಳಿಕಾ ಒಡಂಬಡಿಕೆ ಒಳಗೊಂಡಿರುತ್ತದೆ.

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

    ಯಾವ ಪ್ರದೇಶದಲ್ಲಿ ಕಾಮಗಾರಿಗಳು

   ಯಾವ ಪ್ರದೇಶದಲ್ಲಿ ಕಾಮಗಾರಿಗಳು

   ಬಾಗಲೂರು ಕ್ರಾಸ್ ಮತ್ತು ಟ್ರಂಪೆಟ್ ಜಂಕ್ಷನ್‍ಗಳ ನಡುವೆ ಬೆಟ್ಟಹಲಸೂರಿನಲ್ಲಿ ನಿರ್ಮಾಣವಾಗಲಿರುವ ಮೆಟ್ರೊ ನಿಲ್ದಾಣ ಮತ್ತೊಂದು ಪ್ರಮುಖ ಹೆಗ್ಗುರುತಾಗಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಹೆಬ್ಬಾಳಕ್ಕೆ ಕೆಆರ್ ಪುರಂ ಮೂಲಕ ಮತ್ತು ರಾಷ್ಟ್ರೀಯ ಹೆದ್ದಾರಿ 44 ರ ಮೇಲೆ ಟ್ರಂಪೆಟ್ ಸ್ಟೇಷನ್‍ವರೆಗೆ ಸಾಗುವ ಹಾಗೂ ಅಂತಿಮವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಗರಕ್ಕೆ ಜೋಡಿಸುವ ಹೊರವರ್ತುಲ ರಸ್ತೆಯ ಮೇಲಿನ ಬಿಎಂಆರ್‍ಸಿಎಲ್ ಪ್ರಸ್ತಾಪಿತ ನೂತನ ಮಾರ್ಗ ''ಒಆರ್‍ಆರ್-ಏರ್‍ಪೋರ್ಟ್ ಮೆಟ್ರೊ'' ಭಾಗ ಇದಾಗಿರುತ್ತದೆ.

    ಬೆಟ್ಟಹಲಸೂರು ಮೆಟ್ರೊ ಸ್ಟೇಷನ್‍ ಅಭಿವೃದ್ಧಿ

   ಬೆಟ್ಟಹಲಸೂರು ಮೆಟ್ರೊ ಸ್ಟೇಷನ್‍ ಅಭಿವೃದ್ಧಿ

   ಸೆಪ್ಟೆಂಬರ್ 08, 2020ರಂದು ಸಹಿ ಹಾಕಲಾದ ಎಂಬೆಸ್ಸಿ ಬುಲೆವಾರ್ಡ್ - ಬೆಟ್ಟಹಲಸೂರು ಮೆಟ್ರೊ ಸ್ಟೇಷನ್‍ಗಾಗಿ ಬಿಎಂಆರ್‍ಸಿಎಲ್ ಜೊತೆಗೆ ಕೈಗೊಳ್ಳಲಾದ ತನ್ನ ಪರಸ್ಪರ ತಿಳುವಳಿಕಾ ಒಡಂಬಡಿಕೆಗೆ ತಕ್ಕಂತೆ ಮೆಟ್ರೊ ಸ್ಟೇಷನ್‍ಗೆ ಹೆಚ್ಚುವರಿಯಾಗಿ ಪಾದಚಾರಿಗಳು ನಡೆಯಲು 5-6 ಮೀಟರ್ ಗಳ ಅಗಲದ ಫೂಟ್ ಒವರ್ ಬ್ರಿಡ್ಜ್ ಅನ್ನು ನಿರ್ಮಿಸಲಾಗುತ್ತಿದೆ. ಈ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ 44ರ ಇನ್ನೊಂದು ಭಾಗದ ಕಡೆಗೆ ಮೆಟ್ರೊ ವಯಾಡಕ್ಟ್ ಅಡಿಯಲ್ಲಿ ಬರುವಂತೆ ಬಿಎಂಆರ್‍ಸಿಎಲ್ ನಿರ್ಮಿಸಲಿದೆ. ಒಡಂಬಡಿಕೆಯ ಭಾಗವಾಗಿ ಒಳಾಂಗಣ ವಿನ್ಯಾಸ, ಫಿಟ್ಟಿಂಗ್‍ಗಳು ಮತ್ತು ಇತರೆ ಸೌಲಭ್ಯಗಳನ್ನು ಬಿಎಂಆರ್‍ಸಿಎಲ್‍ನ ಸಲಹೆ ಪಡೆದು ಅಳವಡಿಸುವ ಸಂಪೂರ್ಣ ಅಧಿಕಾರವನ್ನು ಎಂಬೆಸ್ಸಿ ಸಮೂಹ ಹೊಂದಿರುತ್ತದೆ. ಇದಕ್ಕಾಗಿ ಸುಮಾರು 7 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

   ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ ಹೆಸರಿಡಿ: ಎಎಪಿ

    ಬ್ರಾಂಡಿಂಗ್ ಹಾಗೂ ಜಾಹೀರಾತು

   ಬ್ರಾಂಡಿಂಗ್ ಹಾಗೂ ಜಾಹೀರಾತು

   ಎಂಬೆಸ್ಸಿ ಸಮೂಹ ತನ್ನ ಬ್ರಾಂಡಿಂಗ್ ಹಾಗೂ ಜಾಹೀರಾತು ಚಟುವಟಿಕೆಗಳಿಗಾಗಿ ಈ ನಿಲ್ದಾಣದಲ್ಲಿನ ಸಾವಿರ ಚದರ ಅಡಿ ಗೋಡೆಯ ಪ್ರದೇಶವನ್ನು ಬಳಸಿಕೊಳ್ಳಲು ಅವಕಾಶ ಇರುತ್ತದೆ. ಅಲ್ಲದೆ, 3000 ಚದರ ಅಡಿ ಪ್ರದೇಶವನ್ನು ವಾಣಿಜ್ಯ ಅಭಿವೃದ್ದಿಗಾಗಿ ಬಳಸಿಕೊಳ್ಳಬಹುದಾಗಿದ್ದು, ಇದರಲ್ಲಿ ರಿಟೇಲ್ ಮಳಿಗೆಗಳು, ಆಹಾರ, ಪೇಯ ಮತ್ತು ಇತರೆ ಕಿಯಾಸ್ಕ್ ಗಳು ಸೇರಿರಬಹುದು.

   ಈ ಎರಡನೇ ಮೆಟ್ರೊ ಯೋಜನೆಗಾಗಿ ಬಿಎಂಆರ್‍ಸಿಎಲ್ ಜೊತೆಗೆ ಸಹಯೋಗ ಹೊಂದಲು ನಾವು ಬಹಳ ಹರ್ಷಗೊಂಡಿದ್ದೇವೆ. ಅಲ್ಲದೆ, ಬೆಂಗಳೂರಿನಲ್ಲಿ ವಿಶ್ವಮಟ್ಟದ ಸಾರ್ವಜನಿಕ ಸಾರಿಗೆ ನಿರ್ಮಾಣಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸುವುದನ್ನು ನಾವು ಎದುರು ನೋಡುತ್ತೇವೆ ಎಂದು ಎಂಬೆಸ್ಸಿ ಗ್ರೂಪ್ ಹೇಳಿದೆ.

    ಎಂಬೆಸ್ಸಿ ಸಮೂಹದ ಆದಿತ್ಯಾ ವಿರ್ವಾಣಿ

   ಎಂಬೆಸ್ಸಿ ಸಮೂಹದ ಆದಿತ್ಯಾ ವಿರ್ವಾಣಿ

   ಬಿಎಂಆರ್‍ಸಿಎಲ್ ಜೊತೆಗಿನ ಒಪ್ಪಂದ ಸಹಿ ಕುರಿತು ಎಂಬೆಸ್ಸಿ ಸಮೂಹದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಆದಿತ್ಯಾ ವಿರ್ವಾಣಿ ಅವರು ಮಾತನಾಡಿ, ''ನಮ್ಮ ನಾಗರಿಕರ ಕಲ್ಯಾಣಕ್ಕಾಗಿ ಬೆಂಗಳೂರು ನಗರ ಮೂಲಸೌಕರ್ಯ ಸುಧಾರಣೆಯ ಕಡೆಗೆ ಹಣಕಾಸು ಹೂಡಿಕೆಗಳನ್ನು ನಡೆಸುವುದು ಮತ್ತು ಕೊಡುಗೆಗಳನ್ನು ನೀಡುವಲ್ಲಿ ಎಂಬೆಸ್ಸಿ ಸಮೂಹದಲ್ಲಿ ನಾವು ಬದ್ಧರಾಗಿದ್ದೇವೆ. ನಮ್ಮ ಮೆಟ್ರೊ ನಗರದಲ್ಲಿ ಅತ್ಯುತ್ತಮ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ. ಪ್ರತಿದಿನ ಪ್ರಯಾಣ ನಡೆಸುವ ಸಾವಿರಾರು ಪ್ರಯಾಣಿಕರಿಗಾಗಿ ವಾಹನದಟ್ಟಣೆ ಕಡಿಮೆ ಮಾಡಲು ನೆರವಾಗುವಂತೆ ಇದನ್ನು ಯೋಜಿಸಲಾಗಿದೆ. ಜೊತೆಗೆ ನಗರದಲ್ಲಿ ಕಚೇರಿಗಳಿಗೆ ಹೋಗುವವರು ಸಾರ್ವಜನಿಕ ಸಾರಿಗೆಯನ್ನು ಬಳಸುವುದಕ್ಕೆ ಪ್ರೋತ್ಸಾಹಿಸಲು ಈ ಯೋಜನೆ ಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಮಾರ್ಗದಲ್ಲಿ ಈ ಮೆಟ್ರೊ ನಿಲ್ದಾಣ ಹೊರವರ್ತುಲ ರಸ್ತೆಯ ಮೇಲಿನ ಸಂಚಾರ ಸ್ಥಿತಿಯನ್ನು ಸಡಿಲಗೊಳಿಸಲಿದೆ'' ಎಂದರು.

   English summary
   The Embassy Group has signed a Memorandum of understanding (MoU) with Bangalore Metro Rail Corporation Limited (BMRCL) for construction of Bettahalasuru Metro Station with an investment of Rs. 140 cr.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X