ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಅಕ್ಟೋಬರ್ 13ರಿಂದ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 07: ಬೆಂಗಳೂರಲ್ಲಿ ಅಕ್ಟೋಬರ್ 13ರಿಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ನಡೆಸಲಿದೆ.

ಬೆಂಗಳೂರಿನ ರಸ್ತೆಗಳಿಗೆ ಎಲೆಕ್ಟ್ರಿಕ್‌ ಬಸ್‌ ಹೊಂದಿಕೊಳ್ಳುತ್ತವೆಯೇ ಎಂಬುದನ್ನು 4 ಬಸ್‌ಗಳನ್ನ ನಗರದ ಒಳಗಡೆ ಮತ್ತು 4 ಬಸ್‌ಗಳನ್ನ ನಗರದ ಹೊರಗಡೆ ಓಡಿಸಲು ನಿರ್ಧರಿಸಲಾಗಿದೆ. 12 ಮೀಟರ್ ಉದ್ದದ ಎಲೆಕ್ಟ್ರಿಕ್‌ ಬಸ್‌ಗಳು ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸಲಿವೆ.

ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳುಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರದ 4 ಮಾರ್ಗಗಳು

15 ದಿನಗಳ ಕಾಲ ಮರಳಿನ ಮೂಟೆಗಳನ್ನು ಬಸ್ಸಿನಲ್ಲಿ ಇರಿಸಿ ಸಂಚರಿಸುವ ಮೂಲಕ ಕಾರ್ಯಕ್ಷಮತೆ ಪರಿಶೀಲಿಸಲಾಗುತ್ತದೆ. ಕೆಂಗೇರಿ ಮತ್ತು ಯಶವಂತಪುರ ಡಿಪೊದಲ್ಲೂ ಚಾರ್ಜಿಂಗ್‌ ಘಟಕವನ್ನು ಅಳವಡಿಸಲು ತೀರ್ಮಾನಿಸಲಾಗಿದೆ. ಬಳಿಕ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಅದರ ಸಾಮರ್ಥ್ಯ ಮತ್ತು ಒಮ್ಮೆ ಚಾರ್ಜಿಂಗ್‌ ಮಾಡಿದ ಬಳಿಕ ಎಷ್ಟು ಕಿ.ಮೀ. ಸಂಚರಿಸುತ್ತದೆ ಎಂಬುದನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.

ಬಸ್‌ಗಳಲ್ಲಿವೆ 37 ಆಸನಗಳು

ಬಸ್‌ಗಳಲ್ಲಿವೆ 37 ಆಸನಗಳು

ಟೆಸ್ಟ್‌ ಡ್ರೈವ್‌ ಯಶಸ್ವಿಯಾದರೆ ಮತ್ತಷ್ಟು ಬಸ್ಸುಗಳು ರಸ್ತೆಗಿಳಿಯಲಿವೆ. ಹಲವು ಬಸ್‌ ತಯಾರಿಕಾ ಸಂಸ್ಥೆಗಳು ಈಗಾಗಲೇ ಬಿಎಂಟಿಸಿಯನ್ನು ಸಂಪರ್ಕಿಸಿವೆ. ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿರುವ ಬಸ್ಸಿನಲ್ಲಿ 37 ಆಸನಗಳ ಸಾಮರ್ಥ್ಯವಿದ್ದು, ಅದನ್ನ 60 ಸೀಟುಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.

ಈ ಪ್ರಾಯೋಗಿಕ ಸಂಚಾರ ಎಷ್ಟು ದಿನ?

ಈ ಪ್ರಾಯೋಗಿಕ ಸಂಚಾರ ಎಷ್ಟು ದಿನ?

ಪ್ರಸ್ತುತ, ಡೀಸೆಲ್ ಬಸ್‌ಗಳ ಪ್ರಯಾಣದ ವೆಚ್ಚ 43 ರೂ / ಕಿ.ಮೀ ಮತ್ತು ಎಸಿ ಬಸ್‌ಗಳಿಗೆ 69 / ಕಿ.ಮೀ ರೂ.ಗೆ ಇದ್ದರೆ ಎಲೆಕ್ಟ್ರಿಕ್‌ ಬಸ್‌ ವೆಚ್ಚ 89 ಕಿಮೀ ರೂ. ಎನ್ನಲಾಗಿದೆ. ಇದನ್ನು ತಗ್ಗಿಸುವ ಆಶಯವನ್ನು ನಿಗಮ ಹೊಂದಿದೆ.

ಒಂದು ತಿಂಗಳವರೆಗೆ ಪ್ರಾಯೋಗಿಕ ಸಂಚಾರ ನಡೆಯಲಿದ್ದು, ಆರಂಭದಲ್ಲಿ ಮರಳು ಚೀಲಗಳನ್ನು ಪ್ರಯಾಣಿಕರ ಜಾಗದಲ್ಲಿ ಇರಿಸಲಾಗುತ್ತದೆ. ಬಳಿಕ ಟೆಂಡರ್‌ ಪೂರ್ಣಗೊಳಿಸಲಾಗುತ್ತದೆ.
ಫೇಮ್ ಇಂಡಿಯಾ ಯೋಜನೆ

ಫೇಮ್ ಇಂಡಿಯಾ ಯೋಜನೆ

ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆದು ಕಾರ್ಯಾಚರಣೆಗೊಳಿಸುವ ಷರತ್ತಿನ ಮೇಲೆ ಕೇಂದ್ರವು ಸಬ್ಸಿಡಿ ನೀಡುತ್ತಿದೆ. ಹೀಗಾಗಿ, ಬಿಎಂಟಿಸಿಯು ಎರಡು ಬಾರಿ ಟೆಂಡರ್‌ ಆಹ್ವಾನಿಸಿತ್ತು. ಮೊದಲ ಸಲ ಪ್ರತಿ ಕಿ.ಮೀ. ಗೆ 105 ರೂ. ನಮೂದಿಸಿ ಕಂಪೆನಿಗಳು ಬಿಡ್‌ ಸಲ್ಲಿಸಿದ್ದವು.

ಕೇಂದ್ರದ ಭಾರಿ ಕೈಗಾರಿಕೆಗಳ ಸಚಿವಾಲಯವು ಫೇಮ್‌ ಇಂಡಿಯಾ ಯೋಜನೆಯಡಿ ಕರ್ನಾಟಕದಲ್ಲಿ 400 ಇ-ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ಸಬ್ಸಿಡಿ ನೀಡುತ್ತಿದೆ. ಇದರಲ್ಲಿ 300 ಬಸ್‌ಗಳು ರಾಜಧಾನಿಗೆ ಲಭಿಸಿವೆ.
ಹೈದರಾಬಾದ್‌ನ ಒಲೆಕ್ಟ್ರಾ ಕಂಪನಿ

ಹೈದರಾಬಾದ್‌ನ ಒಲೆಕ್ಟ್ರಾ ಕಂಪನಿ

ಎರಡನೇ ಸಲ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಒಲೆಕ್ಟ್ರಾ ಕಂಪೆನಿ ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ಗಳಿಗೆ ಪ್ರತಿ ಕಿ.ಮೀ. ಗೆ 89.64 ರೂ. ನಮೂದಿಸಿ ಬಿಡ್‌ ಸಲ್ಲಿಸಿತ್ತು. ದರ ಸಂಧಾನದ ಬಳಿಕ 69 ರೂ. ಗಳಿಗೆ ಒಪ್ಪಿಕೊಂಡಿತ್ತು. ಇದು ಕೂಡ ದುಬಾರಿ ಎನಿಸಿದ್ದರಿಂದ ರದ್ದುಪಡಿಸಲಾಯಿತು.

ಹೈದರಾಬಾದ್‌ ಮೂಲದ ಒಲೆಕ್ಟ್ರಾ ಕಂಪನಿಯು ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್‌ ಬಸ್‌ ಅನ್ನು ಓಡಿಸಲಿದೆ. ಇದಕ್ಕಾಗಿ ಮೆಜೆಸ್ಟಿಕ್‌ ಡಿಪೊ 7ರಲ್ಲಿ ಚಾರ್ಜಿಂಗ್‌ ಘಟಕವನ್ನು ಸ್ಥಾಪಿಸಲಾಗಿದೆ.

Recommended Video

Gayle ಈಗಲೂ RCB ಗೆ ಸೇರಬಹುದು | Oneindia Kannada

English summary
From October 13, a sleek 12-metre electric bus will ply on the city roads, as part of a trial run by the Bangalore Metropolitan Transport Corporation (BMTC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X