ಈಜಿಪುರದ ಕಟ್ಟಡ ದುರಂತ, ಮನೆಯ ಮಾಲೀಕನ ಬಂಧನ

ಬೆಂಗಳೂರು, ಅಕ್ಟೋಬರ್ 17 : ಬೆಂಗಳೂರಿನ ಈಜಿಪುರದಲ್ಲಿ ನಡೆದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕನನ್ನು ಬಂಧಿಸಲಾಗಿದೆ. ಕಟ್ಟಡ ಕುಸಿತ ದುರಂತದಲ್ಲಿ 7 ಜನರು ಮೃತಪಟ್ಟಿದ್ದರು.

ವಿವೇಕನಗರ ಪೊಲೀಸರು ಮನೆಯ ಮಾಲೀಕ ಗಣೇಶ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಐಪಿಸಿ ಸೆಕ್ಷನ್ 304ಎ, 336 ಮತ್ತು 339ರ ಅಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು.

bengaluru story

ಮಂಗಳವಾರ ಗಣೇಶ್‌ನನ್ನು ಬಂಧಿಸಲಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಬಾಡಿಗೆಗೆ ನೀಡಿದ್ದು, ಅನುಮತಿ ಇಲ್ಲದೇ 3ನೇ ಮಹಡಿ ಕಟ್ಟಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಸೋಮವಾರ ಮುಂಜಾನೆ ಮೂರು ಅಂತಸ್ತಿನ ಕಟ್ಟಡ ಕುಸಿದುಬಿದ್ದಿತ್ತು. ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ 5 ಲಕ್ಷ ಪರಿಹಾರ, ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ದುರಂತದಲ್ಲಿ ಮೃತಪಟ್ಟ ಅಶ್ವಿನಿ ಮತ್ತು ಶರವಣ ದಂಪತಿಯ ಮೂರು ವರ್ಷದ ಮಗು ಸಂಜನಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುಟ್ಟ ಗಾಯಗಳಾಗಿರುವ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+