Breaking: ಈದ್ಗಾ ಮೈದಾನ, ವಕ್ಫ್ ಮಂಡಳಿಗೆ ಬಿಬಿಎಂಪಿ 2ನೇ ನೋಟಿಸ್

ಬೆಂಗಳೂರು, ಜುಲೈ01: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ವಿಚಾರ ತಾರ್ಕಿಕ ಅಂತ್ಯವಂತೂ ಕಂಡಿಲ್ಲ. ಈದ್ಗಾ ಮೈದಾನ ವಕ್ಫ್ ಮಂಡಳಿ ಆಸ್ತಿ ಎಂದರೂ ನೀಡಿರುವ ದಾಖಲೆ ಪೂರಕವಾಗಿಲ್ಲ. ಇದರಿಂದಾಗಿ ಪೂರಕ ದಾಖಲೆಯನ್ನು ನೀಡುವಂತೆ ಬಿಬಿಎಂಪಿ ವಕ್ಛ್ ಬೋರ್ಡ್‌ಗೆ ಮತ್ತೊಂದು ನೋಟಿಸ್ ನೀಡಿದೆ.

ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೋಟಿಸ್ ನೀಡಿದ್ದಾರೆ. ಚಾಮರಾಜಪೇಟೆ ಮೈದಾನ ವಕ್ಛ್ ಬೋರ್ಡ್ ಸ್ವತ್ತು ಎಂದ ಇಂಡೀಕರಣ ಮಾಡಿಕೊಡುವಂತೆ ಮಾಡಿದ್ದ ವಕ್ಛ್ ಬೋರ್ಡ್ ಮನವಿಯನ್ನು ಮಾಡಿತ್ತು. ಇದಕ್ಕಾಗಿ ಮತ್ತಷ್ಟು ದಾಖಲೆಗಳನ್ನು ನೀಡಿ ಅಂತಾ ನೋಟಿಸ್ ನೀಡಲಾಗಿದೆ.

ಬಿಬಿಎಂಪಿ 7 ದಿನಗಳ ಒಳಗೆ ಈ ಕೆಳಗಿನ ದಾಖಲೆಗಳನ್ನು ನೀಡಿ ಅಂತಾ ವಕ್ಛ್ ಬೋರ್ಡ್‌ಗೆ ನೋಟಿಸ್ ಜಾರಿ ಮಾಡಲಾಗಿದೆ. ಎಂಟು ದಾಖಲೆಗಳನ್ನು‌ ನೀಡುವಂತೆ ನೋಟಿಸ್ ನೀಡಿ, ಯಾವ ದಾಖಲೆಗಳನ್ನು ನೀಡಬೇಕು ಎಂದು ಪಟ್ಟಿಯನ್ನು ಸಹ ಮಾಡಿ ಕಳುಹಿಸಿದೆ. ಇದರಿಂದಾಗಿ ಚಾಮರಾಜಪೇಟೆ ಆಟದ ಮೈದಾನ ಅಥವಾ ಈದ್ಗಾ ಮೈದಾನದ ವಿವಾದಕ್ಕೆ ತೆರೆ ಬೀಳುವ ಲಕ್ಷಣವಂತು ಕಾಣುತ್ತಿಲ್ಲ. ಅಸ್ಪಷ್ಟ ದಾಖಲೆಗಳಿಂದಾಗಿ ಗೊಂದಲವಿನ್ನು ಮುಂದುವರೆದಿದೆ.

Eidgah field Controversy: BBMP issued 2nd Notice for wakf board to produce important Document

ವಕ್ಫ್ ಬೋರ್ಡ್‌ನಿಂದ ಕೇಳಿರುವ ದಾಖಲೆಗಳೇನು

1. In the supreme Court of India civil appellate jurisdiction civil appeal no 479 of 1962 ನ್ಯಾಯಾಲಯದಿಂದ ಆದೇಶದ ದೃಢಿಕರಣ ಪತ್ರ.

2. In the court of the principal civil judge Bangalore D 30-06-1958 R.A NO 643 OF 1956 ನ್ಯಾಯಾಲಯದಿಂದ ಅಧಿಕೃತ ಪ್ರತಿ

3.ಸ್ವತ್ತಿನ‌ ಮೂಲಪತ್ರ/ ಕ್ರಯಪತ್ರ ದೃಢೀಕರಣ ಪತ್ರಿ

4.ಸ್ವತ್ತಿನ‌ ಪಹಣಿ 1968 ರಿಂದ ತಹಲ್ ವರೆವಿಗೂ ತಹಶೀಲ್ದಾರ ಅವರಿಂದ ದೃಢೀಕರಣ ಪತ್ರ

5. ಬೆಂಗಳೂರು ಡೆವೆಲಪ್ಮೆಂಟ್ ಬೋರ್ಡ್ ಅವರ ರಚಿಸಿರುವ ಲೇಔಟ್ ನಕ್ಷೆ ದೃಢೀಕರಣ ಪತ್ರ

6.ಖೇತವಾರು ಪತ್ರಿಕೆ/ ಪೈಸಲ್ ಪತ್ರಿಕೆ‌ ತಹಶಿಲ್ದಾರ ಅವರಿಂದ ದೃಢೀಕರಣ ಪ್ರತಿ

7.ಸರ್ಕಾರದಿಂದ ಬಂದಿರುವ ಆಸ್ತಿಪ್ರಕಟಣ ಪತ್ರ ಭೂಮಾಪನ ಇಲಾಖೆಯಿಂದ ದೃಢೀಕರಣ ಪ್ರತಿ

8. ಇಸಿ ಫಾರಂ 15 ರ 1968 ರಿಂದ ಈ ತಹಲ್ ವರೆವಿಗೂ ದೃಢೀಕರಣ ಪ್ರತಿ

ಈ ದಾಖಲೆಗಳನ್ನು ಒದಗಿಸುವಂತೆ ಬಿಬಿಎಂಪಿ ವಕ್ಫ್ ಮಂಡಳಿಗೆ ನೊಟೀಸ್ ನೀಡಿದೆ.

Recommended Video

      Bill Gates ಹಂಚಿಕೊಂಡ ವಿಶೇಷ ಫೋಟೋ ನೋಡಿ ಗಾಬರಿಗೊಂಡ ಜನ | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+