ಸರ್ಕಾರಕ್ಕೆ ಕೋಟ್ಯಾಂತರ ರೂ. ಬಾಕಿ ಪಾವತಿಸಬೇಕಾದ ಶಿಕ್ಷಣ ಸಂಸ್ಥೆಗಳು

ಬೆಂಗಳೂರು, ಮೇ 22 : ಕರ್ನಾಟಕ ಸರ್ಕಾರ ಲಾಕ್ ಡೌನ್‌ನಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ಆದಾಯದ ಮೂಲಕ್ಕಾಗಿ ಹುಡುಕಾಟ ನಡೆಸುತ್ತಿದೆ. ಮತ್ತೊಂದು ಕಡೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಪಾವತಿ ಮಾಡಬೇಕಿದೆ.

Recommended Video

      ಜಿ ಪರಮೇಶ್ವರ್ ಗೆ ಬಿಡಿಎ ಅಧ್ಯಕ್ಷ ಸ್ಥಾನದ ಭಾಗ್ಯ | ಸಿದ್ದರಾಮಯ್ಯಗೆ ಹಿನ್ನಡೆ | Oneindia Kannada

      ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ( ಬಿಡಿಎ) ಬಾಕಿ ಉಳಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳ ಹೆಸರನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಪ್ರಭಾವಿ ವ್ಯಕ್ತಿಗಳಿಗೆ ಸೇರಿದ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳೇ ಬಾಕಿ ಮೊತ್ತವನ್ನು ಪಾವತಿ ಮಾಡಿಲ್ಲ.

      ಶಿಕ್ಷಣ ಸಂಸ್ಥೆಗಳು ನವೀಕರಣ ಶುಲ್ಕವನ್ನು ಸರ್ಕಾರಕ್ಕೆ ಪಾವತಿ ಮಾಡಿಲ್ಲ. ಸಿಎ ನಿವೇಶನ ಪಡೆದ 34 ಸಂಸ್ಥೆಗಳು ನವೀಕರಣ ಮಾಡಿಕೊಂಡಿಲ್ಲ. ಇದರಿಂದಾಗಿ ಸರ್ಕಾರಕ್ಕೆ ಬರೋಬ್ಬರಿ 152 ಕೋಟಿ ಬಾಕಿ ಹಣ ಬರಬೇಕಿದೆ.

      Education Institutions To Pay 152 Crore To Karnataka Govt

      ಸಿಎ ನಿವೇಶನ ಪಡೆದು ನವೀಕರಣ ಶುಲ್ಕವನ್ನು ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿರುವ ಸಂಸ್ಥೆಯಲ್ಲಿ ರಾಜ್ಯ ಒಕ್ಕಲಿಗ ಸಂಘ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 15 ದಿನದಲ್ಲಿ ಬಾಕಿ ಮೊತ್ತ ಪಾವತಿ ಮಾಡದಿದ್ದರೆ ನಿವೇಶನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

      ಬಿಡಿಎ ವೆಬ್ ಸೈಟ್ ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಶಿಕ್ಷಣ ಸಂಸ್ಥೆಗಳ ಮಾನ ಹರಾಜು ಹಾಕಲಾಗಿದೆ. ಕೊರೊನಾ ಲಾಕ್ ಡೌನ್‌ನಿಂದಾಗಿ ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದು, ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.

      ನವೀಕರಣ ಶುಲ್ಕ ಕಟ್ಟಬೇಕಾದ ಸಂಸ್ಥೆಗಳ ವಿವರ
      1. ರಾಜ್ಯ ಒಕ್ಕಲಿಗರ ಸಂಘ : 81 ಕೋಟಿ 27 ಲಕ್ಷ ಬಾಕಿ

      2. ಪೀಪಲ್ ಎಜುಕೇಶನ್ ಸೊಸೈಟಿ 15 ಕೋಟಿ 84 ಲಕ್ಷ ಬಾಕಿ

      3. ಗೋಮಟೇಶ ವಿದ್ಯಾಪೀಠ 14 ಕೋಟಿ 91 ಲಕ್ಷ ಬಾಕಿ

      4. ಆಕ್ಸ್ ಫರ್ಡ್ ಇಂಗ್ಲಿಷ್ ಮತ್ತು ಕನ್ನಡ ಶಾಲೆ 4 ಕೋಟಿ 32 ಲಕ್ಷ ಬಾಕಿ

      5. ದಂಡಪಾಣಿ ಜ್ಞಾನ ಮಂದಿರ 3 ಕೋಟಿ 1 ಲಕ್ಷ ಬಾಕಿ

      6. ಜಗದ್ಗುರು ರೇಣುಕಾಚಾರ್ಯ ಎಜುಕೇಶನ್ ಸೊಸೈಟಿ 2 ಕೋಟಿ 95 ಲಕ್ಷ ಬಾಕಿ

      7. ಕಾಸ್ಮೋಪಾಲಿಟಿನ್ ಎಜುಕೇಷನ್ ಟ್ರಸ್ಟ್ 2 ಕೋಟಿ 75 ಲಕ್ಷ ಬಾಕಿ

      8. ಕಾರ್ನಲ್ ಎಜುಕೇಶನ್ ಸೊಸೈಟಿ 2 ಕೋಟಿ 16 ಲಕ್ಷ ಬಾಕಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+