ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ನೀತಿ ಸಂಹಿತೆ ಸಡಿಲಿಸಿದ ಆಯೋಗ

|
Google Oneindia Kannada News

ಬೆಂಗಳೂರು, ಏ. 22 : ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ನೀತಿ ಸಂಹಿತೆಯನ್ನು ಸಡಿಲಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಕರ್ನಾಟಕದಲ್ಲಿ ನೀತಿ ಸಂಹಿತೆ ಸಡಿಲಿಸಲು ಒಪ್ಪಿಗೆ ನೀಡಿದೆ. ನೀತಿ ಸಂಹಿತೆಯಲ್ಲಿನ ಕೆಲವು ಅಂಶಗಳನ್ನು ಸಡಿಲಿಸಲಾಗಿದೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅನಿಲ್ ಕುಮಾರ್ ಝಾ, ಕರ್ನಾಟಕದಲ್ಲಿ ಏ.17ರಂದು ಮತದಾನ ಮುಗಿದಿದ್ದು ಫಲಿತಾಂಶ ಪ್ರಕಟಗೊಳ್ಳಲು 1 ತಿಂಗಳ ಸಮಯವಿದೆ. ಆದ್ದರಿಂದ ನೀತಿ ಸಂಹಿತೆ ಸಡಿಲಿಸಿ ರಾಜ್ಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ವಿವಿಧ ಪಕ್ಷಗಳು ಮನವಿ ಮಾಡಿದ್ದವು ಎಂದು ಹೇಳಿದರು.

Anil Kumar Jha

ಕೇಂದ್ರ ಚುನಾವಣಾ ಆಯೋಗದೊಂದಿಗೆ ಸರ್ಕಾರ ಮತ್ತು ವಿವಿಧ ಪಕ್ಷಗಳ ಮನವಿ ಬಗ್ಗೆ ಮಾತುಕತೆ ನಡೆಸಿದ್ದು, ಚುನಾವಣಾ ನೀತಿ ಸಂಹಿತೆಯಲ್ಲಿ ಕೆಲವು ಅಂಶಗಳನ್ನು ಸಡಿಲಿಸಲು ಒಪ್ಪಿಗೆ ನೀಡಲಾಗಿದೆ ಎಂದು ಝಾ ವಿವರಿಸಿದರು. ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತಿಲ್ಲ ಎಂದು ಅನಿಲ್ ಕುಮಾರ್ ಝಾ ತಿಳಿಸಿದರು. [ನೀತಿ ಸಂಹಿತೆ ಸಡಿಲಿಸಲು ಮನವಿ ]

ಸಡಿಲಿಸಲಾದ ಅಂಶಗಳು
* ಸಂಪುಟ ಸಚಿವರು ರಾಜ್ಯ ಪ್ರವಾಸ ಮಾಡಬಹುದು
* ಇಲಾಖಾ ಸಭೆಗಳನ್ನು ನಡೆಸಬಹುದು [ಕರ್ನಾಟಕದಲ್ಲಿ ಎಷ್ಟು ಮತದಾನವಾಗಿದೆ]
* ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವಂತಿಲ್ಲ
* ತುರ್ತು ಸಂದರ್ಭದಲ್ಲಿ ಅಗತ್ಯ ಕ್ರಮ ಕೈಗೊಳ್ಳಬಹುದು
* ಆರಂಭವಾಗಿರುವ ಕಾಮಗಾರಿಗಳ ಪರಿಶೀಲನೆಯನ್ನು ನಡೆಸಬಹುದು
* ಚುನಾವಣೆಗೆ ನಿಯೋಜಿತವಾಗಿರುವ ಅಧಿಕಾರಿಗಳು ಯಾವ ಸಭೆಯಲ್ಲೂ ಭಾಗವಹಿಸುವಂತಿಲ್ಲ

English summary
Elections 2014 : The Election Commission has relaxed the model code of conduct in Karnataka after polling has been completed in all 28 Lok Sabha seats in the state said, chief electoral officer Anil Kumar Jha on Tuesday, April 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X