ಕುಮಾರಸ್ವಾಮಿಯನ್ನು ಮನಮೋಹನ್ ಸಿಂಗ್‌ಗೆ ಹೋಲಿಸಿದ ಡಿವಿಎಸ್
ಬೆಂಗಳೂರು, ಜನವರಿ 15: ಕಾಂಗ್ರೆಸ್ ಹೈಕಮಾಂಡ್‌ನ ಕೈಗೊಂಡಬೆಯಾಗಿ ಯುಪಿಎ ಸರ್ಕಾರದಲ್ಲಿ ಹತ್ತು ವರ್ಷ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‌ರಂತೆ ಕರ್ನಾಟಕದಲ್ಲೂ ಕಾಂಗ್ರೆಸ್‌ನ ಕೈಗೊಂಬೆಯಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಲೇವಡಿ ಮಾಡಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸದಾನಂದ ಗೌಡ, ಕೇಂದ್ರದಲ್ಲಿ ಹತ್ತು ವರ್ಷಗಳು ಒಂದು ಕೈಗೊಂಬೆಯಿತ್ತು, ಈಗ ಕರ್ನಾಟಕದಲ್ಲಿ ಇನ್ನೊಂದು ಕೈಗೊಂಬೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರ ಹತಾಶೆಯ ಹೇಳಿಕೆಗಳು ಅವರ ಮೈ ಪರಚಿಕ್ಕೊಳ್ಳುವ ಪರಿಸ್ಥಿತಿಯನ್ನು ತೋರಿಸುತ್ತಿದೆ. ನಿಮ್ಮ ಮನೆಯ ಜವಾಬ್ಧಾರಿ ನಿಮ್ಮದು.ಅದು ಬಿಟ್ಯಾಕೆ ಈ ಅಸಂಭದ್ದ ಮಾತು ? ನಮ್ಮ ಪ್ರಧಾನಿ ನಮ್ಮ ಹೆಮ್ಮೆ . ಹೌದು ಅವರೇ ನಮ್ಮ ಚೌಕಿದಾರ .ಅವರು ಕೈಗೊಂಭೆಯಲ್ಲ . ಆಗ ೧೦ ವರ್ಷ ಕೇಂದ್ರದಲ್ಲೊಂದು ಕೈಗೊಂಬೆ ,ಈಗ ಕರ್ನಾಟಕದಲ್ಲಿ ಹೊಸ ಕೈಗೊಂಬೆ
— Sadananda Gowda (@DVSBJP) January 15, 2019

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿ ಮೋದಿ ಚೌಕಿದಾರ್ ಆಗಿದ್ದರೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಂಡಿರುವುದು ಏಕೆ ಎಂದು ಪ್ರಶ್ನಿಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸದಾನಂದ ಗೌಡ, ''ನಮ್ಮ ಪ್ರಧಾನಿ ನಮ್ಮ ಹೆಮ್ಮೆ' ಅವರೇ ನಮ್ಮ ಚೌಕೀದಾರ್ ಎಂದು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications