ಭರ್ಜರಿ ಪ್ರಚಾರ ಆರಂಭಿಸಿದ ಸದಾನಂದ ಗೌಡರು
ಬೆಂಗಳೂರು, ಮಾ.11 : ಲೋಕಸಭೆ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿವಿ ಸದಾನಂದ ಗೌಡ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಮಂಗಳವಾರ ಯಶವಂತಪುರದಲ್ಲಿ ಚುನಾವಣಾ ಕಚೇರಿ ಆರಂಭಿಸಿರುವ ಸದಾನಂದ ಗೌಡರು, ದಾಸರಹಳ್ಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಂಗಳವಾರ ಪ್ರಚಾರ ನಡೆಸಿದರು, ಉತ್ತರ ಕ್ಷೇತ್ರದ ಹಲವು ಬಿಜೆಪಿ ಶಾಸಕರು ಗೌಡರ ಜೊತೆಗಿದ್ದರು.
ಸೋಮವಾರ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನೂತನ ಚುನಾವಣಾ ಕಚೇರಿಯನ್ನು ಮಾಜಿ ಸಿಎಂ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಸದಾನಂದ ಗೌಡರು ತೆರೆದಿದ್ದು, ಮಂಗಳವಾರದಿಂದಲೇ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಹಲವು ಬಿಜೆಪಿ ಮುಖಂಡರು ಗೌಡರ ಜೊತೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. [ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ನಾಯಕರು] (ಚಿತ್ರಕೃಪೆ ಸದಾನಂದ ಗೌಡ face book)

ಕಚೇರಿ ಉದ್ಘಾಟನೆ
ಡಿವಿ ಸದಾನಂದ ಗೌಡರು ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನೂತನ ಚುನಾವಣಾ ಕಚೇರಿಯನ್ನು ತೆರೆದಿದ್ದು, ಸಂಸದ ಡಿ.ಬಿ. ಚಂದ್ರೇಗೌಡ ಕಚೇರಿಯನ್ನು ಉದ್ಘಾಟಿಸಿದರು

ಒಂದಾದ ಬಿಜೆಪಿ ನಾಯಕರು
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದ ಆರ್ ಅಶೋಕ್, ಡಿವಿ ಸದಾನಂದ ಗೌಡ ಒಂದಾಗಿದ್ದು, ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದ್ದಾರೆ.

ಒಟ್ಟಾದ ಉಭಯ ನಾಯಕರು
ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಡಿಬಿ ಚಂದ್ರೇಗೌಡ ಮತ್ತು ಲೋಕಸಭೆ ಚುನಾವಣೆ ಅಭ್ಯರ್ಥಿ ಡಿವಿ ಸದಾನಂದ ಗೌಡ ಒಟ್ಟಾಗಿದ್ದಾರೆ. ನಾನು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ ಎಂದು ಚಂದ್ರೇಗೌಡರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಕಾರ್ಯಕರ್ತರ ಸಮಾವೇಶ
ಬೆಂಗಳೂರು ಉತ್ತರ ಕ್ಷೇತ್ರದ ಕಾರ್ಯಕರ್ತರ ಸಮಾವೇಶವನ್ನು ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಸೋಮವಾರ ಏರ್ಪಡಿಸಲಾಗಿತ್ತು. ಸಮಾವೇಶ ಉದ್ದೇಶಿಸಿ ಮಾತನಾಡಿದ ಗೌಡರು ಕಾರ್ಯಕರ್ತರ ಬೆಂಬಲ ಕೋರಿದರು.

ದಾಸರಹಳ್ಳಿಯಲ್ಲಿ ಪ್ರಚಾರ
ಮಂಗಳವಾರ ಡಿವಿ ಸದಾನಂದ ಗೌಡರು ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯ ಕೈಗೊಂಡರು. ಹಲವು ಬಿಜೆಪಿ ನಾಯಕರು ಈ ಸಂದರ್ಭದಲ್ಲಿ ಅವರ ಜೊತೆಗಿದ್ದರು.

ಯಾವ ವಿಧಾನಸಭೆ ಕ್ಷೇತ್ರಗಳು
ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಯಶವಂತಪುರ, ಮಹಾಲಕ್ಷ್ಮೀ ಲೇ ಔಟ್, ಕೆ.ಆರ್.ಪುರಂ, ಹೆಬ್ಬಾಳ, ಬ್ಯಾಟರಾಯನಪುರ, ಮಲ್ಲೇಶ್ವರಂ, ಪುಲಕೇಶಿ ನಗರ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ.

ಜನರ ವಿಶ್ವಾಸ ಗಳಿಸುತ್ತೇನೆ
ಕರ್ನಾಟಕದ ಜನರು ನನ್ನ ಮೇಲೆ ಮೇಲಿಟ್ಟ ವಿಶ್ವಾಸವನ್ನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉಳಿಸಿಕೊಂಡಿದ್ದೇನೆ. ಈಗ ಸಂಸದನಾಗಿ ಬೆಂಗಳೂರಿಗರ ವಿಶ್ವಾಸ ಗೆಲ್ಲುತ್ತೇನೆ ಎಂದು ಸದಾನಂದ ಗೌಡರು ಹೇಳಿದರು. [ಗೌಡರ ಪ್ರಚಾರದ ಚಿತ್ರ]












Click it and Unblock the Notifications