ಮಾಡದ ಅಪಘಾತಕ್ಕೆ ಬರೋಬ್ಬರಿ 8.7 ಲಕ್ಷ ಕಳೆದುಕೊಂಡ
ಬೆಂಗಳೂರು, ಮಾರ್ಚ್ 23: ಮಾಡದ ಅಪಘಾತಕ್ಕೆ ವ್ಯಕ್ತಿಯೊಬ್ಬರು 8.7 ಲಕ್ಷ ರೂ ಕಳೆದುಕೊಂಡ ಘಟನೆ ಬೆಂಗಳೂರಲ್ಲಿ ನಡೆದಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಫಾರೆಕ್ಸ್ ಫರ್ಮ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಮೊಹಮ್ಮದ್ ಅಬ್ದುಲ್ಲಾ 35 ಸಾವಿರ ಸೌದಿಯ ರಿಯಲ್(6.5) ಲಕ್ಷ ರೂ ಹಾಗೂ ಇನ್ನೂ 2.3 ಲಕ್ಷ ರೂ ನಗದು ಹಣ ಜೇಬಿನಲ್ಲಿಟ್ಟುಕೊಂಡು ಶಿವಾಜಿನಗರದಲ್ಲಿರುವ ಕಚೇರಿಗೆ ತೆರಳುತ್ತಿದ್ದರು.
ಆಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಂದು ಅವರ ಬೈಕ್‌ಗೆ ಡಿಕ್ಕಿ ಹೊಡೆಸಿದರು, ಆದರೂ ಮೊಹಮ್ಮದ್ ಅವರು ಬೈಕ್ ನಿಲ್ಲಿಸದೆ ಮುಂದೆ ಹೋದರು ಬಳಿಕ ಮತ್ತೆ ಎರಡು ಬಾರಿ ಬೈಕ್‌ಗೆ ಡಿಕ್ಕಿ ಹೊಡೆದರು.

ಆಗ ಮೊಹಮ್ಮದ್ ಗಾಡಿ ನಿಲ್ಲಿಸಿ ಏನು ಎಂದು ಕೇಳಿದಾಗ ನನ್ನ ಬೈಕ್‌ಗೆ ನೀನು ಡಿಕ್ಕಿ ಹೊಡೆದಿದ್ದೀಯಾ ಹಣ ಕೊಡು ಎಂದು ಜಗಳವಾಡಿದರು ಕೊನೆಗೆ ಅವರ ಬಳಿ ಇದ್ದ 8.7 ಲಕ್ಷ ರೂ ದೋಚಿಕೊಂಡು ಪರಾರಿಯಾಗಿದ್ದಾರೆ. ಬಳಿಕ ಇವರು ಜೇಬು ನೋಡಿಕೊಂಡಾಗ ಹಣ ಇರಲಿಲ್ಲ. ಈ ಕುರಿತು ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಳಿಕ ಸಿಸಿಟಿವಿ ವೀಕ್ಷಿಸಿದಾಗ ಕೆಲವು ದೃಶ್ಯಗಳು ದೊರೆತಿವೆ ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications