ಬೆಳ್ಳಂಬೆಳಗ್ಗೆ ನಮ್ಮ ಮೆಟ್ರೋ ಒಂದೂವರೆ ಗಂಟೆ ಸ್ಥಗಿತ

ಬೆಂಗಳೂರು, ಆಗಸ್ಟ್ 22: ನಮ್ಮ ಮೆಟ್ರೋ ಬೆಳ್ಳಂಬೆಳಗ್ಗೆ ಒಂದೂವರೆ ಗಂಟೆಗಳ ಕಾಲ ಸೇವೆ ಸ್ಥಗಿತಗೊಳಿಸಿದ ಘಟನೆ ಯಲಚೇನಹಳ್ಳಿ-ನಾಗಸಂದ್ರ ಹಸಿರು ಮೆಟ್ರೋ ಮಾರ್ಗದಲ್ಲಿ ಬುಧವಾರ ನಡೆದಿದೆ.

ಯಲಚೇನಹಳ್ಳಿ ಹಾಗೂ ಆರ್‌ವಿ ರಸ್ತೆ ಮಾರ್ಗದಲ್ಲಿ ಮೂರನೇ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ ಬೆಳಗ್ಗೆ 5ಗಂಟೆಗೆ ಆರಂಭಗೊಳ್ಳಬೇಕಿದ್ದ ನಮ್ಮ ಮೆಟ್ರೋ 6.30ಕ್ಕೆ ಸಂಚಾರ ಆರಂಭಿಸಿತ್ತು. ಸುಮಾರು 6.30ರವೇಳೆಗೆ ಮೆಟ್ರೋ ಸಿಬ್ಬಂದಿಗಳು ರೈಲನ್ನು ಸರಿಪಡಿಸಿದ ನಂತರ ಮೆಟ್ರೋ ಸಂಚಾರ ಆರಂಭಗೊಳಿಸಲಾಯಿತು ಎಂದು ಬಿಎಂಆರ್‌ಸಿಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಬಕ್ರೀದ್‌ ಹಬ್ಬದ ಕಾರಣ ಹೆಚ್ಚು ಮಂದಿ ಮೆಟ್ರೋ ಸಂಚರಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಿರುವ ಅವಧಿಯಲ್ಲಿ ಪ್ರತಿ 5 ನಿಮಿಷದ ಬದಲಾಗಿ ಪ್ರತಿ 3.5 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ನಮ್ಮ ಮೆಟ್ರೋ ಕಳೆದ ಎರಡು ತಿಂಗಳಲ್ಲಿ ಎರಡರಿಂದ ಮೂರು ಬಾರಿ ತಾಂತ್ರಿಕ ದೋಷಗಳು ಕಂಡುಬಂದಿದೆ.

Due to damage in rail, metro service was interrupted for one and half hour

ಆಗಸ್ಟ್ 20ರಂದು ನಮ್ಮ ಮೆಟ್ರೋದಲ್ಲಿ ಒಟ್ಟು 4,28,249 ಮಂದಿ ಪ್ರಯಾಣಿಸಿದ್ದು ಮತ್ತೊಂದು ದಾಖಲೆ ನಿರ್ಮಿಸಿದೆ. ನೇರಳೆ ಮಾರ್ಗದಲ್ಲಿ 2,30,980 ಮಂದಿ ಪ್ರಯಾಣಿಸಿದರೆ ಹಸಿರು ಮಾರ್ಗದಲ್ಲಿ 1,97,269 ಮಂದಿ ಪ್ರಯಾಣಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+