• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಂಬ್ಯುಲೆನ್ಸ್, ಶಾಲಾ ವಾಹನಗಳಲ್ಲಿ ಹೆಚ್ಚಾದ ಕುಡುಕ ಚಾಲಕರ ಸಂಖ್ಯೆ!

|

ಬೆಂಗಳೂರು, ಫೆಬ್ರವರಿ 24 : ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವ ಶಾಲಾ ವಾಹನ, ಆಂಬ್ಯುಲೆನ್ಸ್ ಚಾಲಕರ ಸಂಖ್ಯೆ ನಗರದಲ್ಲಿ ಹೆಚ್ಚಾಗಿದೆ. ಅಂತಹ ಚಾಲಕರು ತಮ್ಮ ಜೀವವನ್ನು ತೊಂದರೆಗೆ ಸಿಲಿಸುವುದರ ಜತೆಗೆ ಮಕ್ಕಳು ಹಾಗೂ ರೋಗಿಗಳ ಜೀವವನ್ನು ಬಲಿತೆಗೆದುಕೊಳ್ಳುತ್ತಿದ್ದಾರೆ.

ಸಂಚಾರ ಪೊಲೀಸರು ನೀಡಿದ ಅಂಕಿ ಅಂಶಗಳ ಪ್ರಕಾರ, ಕುಡುದು ವಾಹನ ಚಲಾಯಿಸುವವರ ಸಂಖ್ಯೆ 2015 ರಲ್ಲಿ 12 ಪ್ರಕರಣಗಳು, 2016 ರಲ್ಲಿ 17 ಪ್ರಕಣಗಳು ದಾಖಲಾಗಿದ್ದರೆ 2017 ರಲ್ಲಿ ಬರೋಬ್ಬರಿ 55 ಪ್ರಕರಣಗಳು ದಾಖಲಾಗಿವೆ.

2018 ಪ್ರಾರಂಭವಾಗಿ ಇನ್ನು ಎರಡು ತಿಂಗಳೂ ಪೂರ್ಣವಾಗಿಲ್ಲ ಈ ಅವಧಿಯಲ್ಲಿ ಈಗಾಗಲೇ 6 ಪ್ರಕರಣಗಳು ದಾಖಲಾಗಿವೆ. ಈ ಕುರಿತು ಮುಂಜಾಗೃತೆ ವಹಿಸುವ ದೃಷ್ಟಿಯಿಂದ ಎಲ್ಲಾ ಶಾಲೆ ಹಾಗೂ ಆಸ್ಪತ್ರೆಗೆ ಪತ್ರವೊಂದನ್ನು ಬರೆದಿದ್ದು ನಗರದಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಪರೀಕ್ಷಿಸಲು ಪೊಲೀಸರಿಗೆ ಸಾಧ್ಯವಿಲ್ಲ ಹಾಗಾಗಿ ಆಸ್ಪತ್ರೆಯಿಂದ ಹೊರಡುವ ಆಂಬುಲೆನ್ಸ್ ಹಾಗೂ ಶಾಲಾ ವಾಹನಗಳ ಚಾಲಕರನ್ನು ಪರೀಕ್ಷಿಸಿಯೇ ಕಳುಹಿಸಬೇಕು ಎಂದು ತಿಳಿಸಲಾಗಿದೆ.

ಚಾಲಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮೊದಲು ಅವರ ಹಿನ್ನೆಲೆ ಯನ್ನು ತಿಳಿದುಕೊಳ್ಳಬೇಕು. ಶಾಲಾ ವಾಹನಗಳನ್ನು ತಡೆದು ಮಕ್ಕಳ ಮುಂದೆ ಅವರನ್ನು ಪರಿಶೀಲಿಸುವುದು ಕಷ್ಟ ಅದಷ್ಟೇ ಅಲ್ಲದೆ ಆಂಬ್ಯುಲೆನ್ಸ್ ಗಳನ್ನು ನಿಲ್ಲಿಸಿ ಚಾಲಕರ ಪರೀಕ್ಷೆ ಮಾಡುವುದರಿಂದ ರೋಗಿಗಳಿಗೆ ತೊಂದರೆಯಾಗಲಿದೆ.

ಶಾಲಾ ಬಸ್ ಚಾಲಕರು ಆಂಬ್ಯುಲೆನ್ಸ್ ಚಾಲಕರು
ವರ್ಷ ಪ್ರಕರಣಗಳು ವರ್ಷ ಪ್ರಕರಣಗಳು
2015 10 2015 2
2016 14 2016 3
2017 31 2017 24
2018 ಫೆಬ್ರವರಿ (3ನೇ ವಾರ) 3 2018 ಫೆಬ್ರವರಿ (3ನೇ ವಾರ) 3

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There has been a sharp increase in case of drivers of School bus, Ambulances getting caught for drunken driving. These carring drivers are not only risking their lives, but also that of school children and patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more