ಡ್ರಗ್ಸ್ ಕೇಸ್: ''ಇಡಿ'' ಮುಂದೆ ಕೈಕಟ್ಟಿ ನಿಂತ ಕೇರಳದ ಪ್ರಭಾವಿ ಬಿನೀಶ್
ಬೆಂಗಳೂರು, ಅ. 6: ನಟಿ ರಾಗಿಣಿ, ಸಂಜನಾ ಅವರನ್ನು ಜೈಲಿಗೆ ಕಳುಹಿಸಿರುವ ಡ್ರಗ್ಸ್ ಕೇಸಿನ ಮೂಲ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆಯಾಗಿದೆ. ಡ್ರಗ್ ಡೀಲರ್ ಅನಿಕಾ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಬಂಧಿತ ಪೆಡ್ಲರ್ ಅನೂಪ್ ಬೆಂಗಳೂರಿನ ಕಮ್ಮನಹಳ್ಳಿಯನ್ನು ಡ್ರಗ್ ಮಾಫಿಯಾ ಹಬ್ ಸೃಷ್ಟಿಸಲು ಯತ್ನಿಸಿದ್ದ ಎಂಬ ಲೇಖನ ಒನ್ಇಂಡಿಯಾದಲ್ಲಿ ಓದಿರುತ್ತೀರಿ. ಈ ಪೆಡ್ಲರ್ ಅನೂಪ್ ಮೊಹಮ್ಮದ್ ಆಪ್ತ ಗೆಳೆಯ ಬಿನೀಶ್ ಕೋಡಿಯೇರಿ ಇಂದು ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದಾರೆ.
ತಮಿಳುನಾಡಿನ ಸೇಲಂ ಬಳಿಕ ಯೆರ್ಕಾಡ್ ಮೂಲದ ಅನಿಕಾ, ಪೆಡ್ಲರ್ಸ್ ಕೊಚ್ಚಿ ಮೂಲದ ಅನೂಪ್ ಹಾಗೂ ಚೆನ್ನೈ ನಿವಾಸಿ ರಿಜೇಶ್ ವಿ ರವಿಚಂದ್ರನ್ ಅವರ ಮೂಲಕ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು, ಉದ್ಯಮಿಗಳು, ಟೆಕ್ಕಿಗಳು, ರಾಜಕಾರಣಿಗಳ ಪುತ್ರರಿಗೆ ಡ್ರಗ್ಸ್ ಪೂರೈಕೆಯಾಗುತ್ತಿತ್ತು. ಈ ಪ್ರಕರಣ ಮೊದಲಿಗೆ ಸಿಸಿಬಿಯಿಂದ ಆರಂಭವಾಗಿ ಈಗ ಜಾರಿ ನಿರ್ದೇಶನಾಲಯದ ಕೈ ತಲುಪಿದೆ.
ಕೇರಳದ ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಸಿಪಿಐ ಎಂ ಮುಖಂಡ ಬಾಲಕೃಷ್ಣನ್ ಕೋಡಿಯೇರಿ ಪುತ್ರ ಬಿನೀಶ್ ಕೋಡಿಯೇರಿ ಇಂದು ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ NCB ಕಚೇರಿಗೆ ಆಗಮಿಸಿದ್ದಾರೆ. ಆಗಸ್ಟ್ ನಲ್ಲಿ ಬಂಧಿತರಾದ ಅನಿಕಾ, ಅನೂಪ್ ಹಾಗೂ ರಿಜೇಶ್ ಜೊತೆ ಸಂಪರ್ಕ ಹೊಂದಿದ್ದು, ಬೆಂಗಳೂರಿನ ಡ್ರಗ್ಸ್ ಜಾಲ, ಅನೂಪ್ ಹೋಟೆಲ್ ವಹಿವಾಟಿಗೆ ಬಿನೀಶ್ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮವಾಗಿ ಹಣ ವರ್ಗಾವಣೆ, ಪಿಎಂಎಲ್ ಎ ಕಾಯ್ದೆ ಉಲ್ಲಂಘನೆ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಮೂಲಗಳ ಪ್ರಕಾರ, ಎನ್ ಸಿಬಿ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ಕೈಗೊಳ್ಳಲಿದ್ದು, ಸದ್ಯಕ್ಕೆ ಬಂಧನ ಮಾಡುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಗತ್ಯ ದಾಖಲೆ ಪಡೆದುಕೊಳ್ಳುವ ಸಾಧ್ಯತೆ ಮಾತ್ರ ಇದೆ ಎಂದು ತಿಳಿದು ಬಂದಿದೆ.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಯುಗಾದಿ, ರಂಜಾನ್ ಹಬ್ಬಕ್ಕೆ 2000 ವಿಶೇಷ ಬಸ್: ಮುಂಗಡ ಟಿಕೆಟ್ ಗೆ ರಿಯಾಯ್ತಿ ಘೋಷಿಸಿದ KSRTC -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು












Click it and Unblock the Notifications