ರಾಜ್ಯದಲ್ಲಿ ಮುಂಗಾರು ಮುಂದುವರಿಕೆ, ಬೆಂಗಳೂರಲ್ಲಿ 2 ದಿನ ತುಂತುರು ಮಳೆ
ಬೆಂಗಳೂರು, ಜೂನ್ 26: ರಾಜ್ಯದಲ್ಲಿ ಮುಂಗಾರು ಮುಂದುವರೆದಿದ್ದು ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರಲ್ಲಿ ಇನ್ನೆರೆಡು ದಿನ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದಲ್ಲಿ ಮುಂಗಾರಿನ ಪರಿಣಾಮ ಇನ್ನೂ ಎರಡು ದಿನ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಮುಂಗಾರು ಸ್ವಲ್ಪ ಮಟ್ಟಿಗೆ ದುರ್ಬಲವಾಗಿದೆ. ಹೀಗಾಗಿ ನಗರದ ಹೊರವಲಯಗಳಲ್ಲಿ ತುಂತುರು ಮಳೆಯಾಗಿದ್ದು ಬಿಟ್ಟರೆ ಹಿಂದಿನಂತೆ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿಲ್ಲ.
ಆದರೂ ನಗರದ ಕೇಂದ್ರ ಭಾಗಗಳಲ್ಲಿ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಎಚ್‌ಎಎಲ್‌ನಲ್ಲಿ 30.2 ಡಿಗ್ರಿ ಸೆಲ್ಸಿಯಸ್, ಕೆಐಎಎಸಲ್‌ನಲ್ಲಿ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಗದಗದ ನರಗುಂದದಲ್ಲಿ 7 ಸೆಂ.ಮೀನಷ್ಟು ಮಳೆಯಾಗಿದೆ.

ಬಾಗಲಕೋಟೆಯ ಜಮಖಂಡಿ 6 ಸೆಂ.ಮೀ, ಸೌಂದತ್ತಿ, ಇಂಡಿ, ಖಜೂರಿಯಲ್ಲಿ ತಲಾ 5 ಸೆಂ.ಮೀ, ಕೊಪ್ಪಳ, ಲೋಕಾಪುರದಲ್ಲಿ 4 ಸೆಂ.ಮೀ, ಬೀದರ್ 3 ಸೆಂ.ಮೀ, ಕೋಟಾ, ಯಲಬುರ್ಗಾ, ಬಬಲೇಶ್ವರ, ಚಿತ್ತಾಪುರ, ಲಿಂಗನಮಕ್ಕಿಯಲ್ಲಿ ತಲಾ 2ಸೆಂ.ಮೀನಷ್ಟು ಮಳೆಯಾಗಿದೆ.












Click it and Unblock the Notifications