ನಮ್ಮ ಮೆಟ್ರೋ ಪಿಲ್ಲರ್ ಗೆ ಲಾರಿ ಡಿಕ್ಕಿ ಚಾಲಕ ಸಾವು

ಬೆಂಗಳೂರು, ಜನವರಿ 31 : ನಮ್ಮ ಮೆಟ್ರೋ ಪಿಲ್ಲರ್ ಗೆ ಲಾರಿ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಂಗಳೂರು-ಮೈಸೂರು ಮುಖ್ಯರಸ್ತೆಯಲ್ಲಿರುವ ಆರ್ ವಿ ಕಾಲೇಜು ಬಳಿ ಬುಧವಾರ ನಡೆದಿದೆ.

ನಿರ್ಮಾಣಹಂತದಲ್ಲಿರುವ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಶಿವಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Driver dies as lorry crash metro pillar

ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಇಂತಹ ಘಟನೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಸಂಭವಿಸಿದೆ. ಡಿಸೆಂಬರ್ 30 ರಂದು ನಾಯಂಡಹಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ಪಿಲ್ಲರ್ ಗೆ ಭಾರಿ ಎತ್ತರದ ಟ್ರಕ್ ಒಂದು ತಗುಲಿ ಮೇಲ್ಛಾವಣಿ ಧ್ವಂಸ ಗೊಂಡಿತ್ತು. ಇದರಿಂದಾಗಿ ಮೆಟ್ರೋ ನಿಲ್ದಾಣದ ಬ್ರಿಡ್ಜ್ ಕುಸಿದಿದೆ ಎಂಬ ಸುಳ್ಳು ವದಂತಿ ಹರಿದಾಡಿತ್ತು. ಆದರೆ ಮತ್ತದೇ ಘಟನೆ ಮರುಕಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+