ಕಲುಷಿತ ನೀರಿನ ಸಮಸ್ಯೆ: ನೀರಿನ ಗುಣಮಟ್ಟದ ಸಮಸ್ಯೆ ಪರಿಹಾರ ಕ್ರಮಕ್ಕೆ ಮುಂದಾದ ಡ್ರಿಂಕ್‌ಪ್ರೈಮ್
ಬೆಂಗಳೂರು, ಆಗಸ್ಟ್. 04: ಕಳೆದ ಜೂನ್ ತಿಂಗಳಲ್ಲಿ ಕಲುಷಿತ ನೀರು ಕುಡಿದು ಮಕ್ಕಳು ಮತ್ತು ಹಿರಿಯ ನಾಗರಿಕರು ಸೇರಿದಂತೆ 130ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದ ಘಟನೆ ಪರಪ್ಪನ ಅಗ್ರಹಾರದಲ್ಲಿರುವ ಸಾಯಿಶ್ರೀ ಬಡಾವಣೆಯ ಮಹಾವೀರ್ ರಾಂಚಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಕುಡಿಯುವ ನೀರಿನ ಬಗ್ಗೆಯೂ ಅನೇಕ ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಬೆಂಗಳೂರು ಮೂಲದ ಟೆಕ್ ಚಾಲಿತ ಸ್ಟಾರ್ಟ್‌ಅಪ್ ಮತ್ತು ನೀರಿನ ಗುಣಮಟ್ಟ ಮತ್ತು ಸುರಕ್ಷತೆಯ ತಜ್ಞ ಡ್ರಿಂಕ್‌ಪ್ರೈಮ್ ಸಂಸ್ಥೆ ತನ್ನದೆ ಆದ ಪರಿಹಾರವನ್ನು ಹುಡುಕಿದೆ.
ನೀರಿನ ಮಾಲಿನ್ಯದ ಸಮಸ್ಯೆಯಿಂದಾಗಿ ಮಹಾವೀರ್ ರಾಂಚಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಘಟನೆಯನ್ನು ನೀರಿನ ಗುಣಮಟ್ಟ ಮತ್ತು ಸುರಕ್ಷತೆಯ ತಜ್ಞ ಡ್ರಿಂಕ್‌ಪ್ರೈಮ್ ಸಂಸ್ಥೆ ಈ ಸಮಸ್ಯೆ ಪರಿಹರಿಸುವ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿತು. ಸುರಕ್ಷಿತ ಕುಡಿಯುವ ನೀರಿನ ಜೀವನಾಧಾರ ಮತ್ತು ನಿರಂತರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯ ನಿರ್ವಹಿಸುವ ಸಂಸ್ಥೆ, ಇಲ್ಲಿಯೂ ತಕ್ಷಣವೇ ಕಾರ್ಯಪ್ರವೃತ್ತವಾಗಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಪಾರ್ಟ್ಮೆಂಟ್‌ನಲ್ಲಿ ವಾಸಿಸುವ ತನ್ನ ಗ್ರಾಹಕರನ್ನು ಭೇಟಿ ಮಾಡಿತ್ತು.

ನೀರಿನ ಗುಣಮಟ್ಟದ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದ ನಂತರ, ಸಂಸ್ಥೆಯ ವರದಿಯು ಕೆಲವು ಆತಂಕಕಾರಿ ಅಂಶಗಳನ್ನು ಹೊರಹಾಕಿದೆ. "ನೀರಿನ ಮಾಲಿನ್ಯದ ಸಮಯಲ್ಲಿ, ನಮ್ಮ ಸರ್ವರ್‌ಗಳಲ್ಲಿ ಒಳಬರುವ ನೀರಿನ ಗುಣಮಟ್ಟದಲ್ಲಿ ಕುಸಿತ ಆಗಿರುವುದನ್ನು ಗಮನಿಸಿದ್ದೇವೆ. ನಮ್ಮ ತಂಡವು ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ 40ಕ್ಕೂ ಅಧಿಕ ಡ್ರಿಂಕ್‌ಪ್ರೈಮ್ ಚಂದಾದಾರರನ್ನು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಡ್ರಿಂಕ್ಸ್ ಪ್ರೈಮ್ ಕಂಸ್ ಹೋಮ್ (#DrinkPrimeComesHome) ಉಪಕ್ರಮದ ಭಾಗವಾಗಿ ನಿಗದಿತ ನೀರಿನ ಗುಣಮಟ್ಟ ಮತ್ತು ನಿರ್ವಹಣಾ ತಪಾಸಣೆಯನ್ನು ಖಚಿತಪಡಿಸಿಕೊಳ್ಳಲು ಅಪಾರ್ಟ್‌ಮೆಂಟ್‌ಗೆ ತೆರಳಿದೆ" ಎಂದು ಡ್ರಿಂಕ್ಸ್ ಪ್ರೈಮ್ ನ ಸಹ-ಸ್ಥಾಪಕ ಮತ್ತು ಸಿಇಒ ವಿಜೇಂದರ್ ರೆಡ್ಡಿ ಮುತ್ಯಾಲ ಹೇಳಿದ್ದಾರೆ.
"ನೀರಿನ ಗುಣಮಟ್ಟದ ತಪಾಸಣೆ ವರದಿಯಿಂದ, ಒಟ್ಟು ಕರಗಿದ ಘನವಸ್ತುಗಳು (ಟಿಡಿಎಸ್) ಮತ್ತು ಗಡಸುತನವು ನಿರೀಕ್ಷೆಯ ಮಿತಿಗಳಿಗಿಂತ ಹೆಚ್ಚಾಗಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ. ಇದರರ್ಥ ನೀರಿನ ಗುಣಮಟ್ಟವು ಎರಡು ನಿಯತಾಂಕಗಳಿಗಾಗಿ IS 10500:2012 ಕುಡಿಯುವ ನೀರಿನ ಮಟ್ಟಕ್ಕೆ ಅನುಗುಣವಾಗಿ ಇರಲಿಲ್ಲ. ನಮ್ಮ ಐಒಟಿ-ಸಕ್ರಿಯಗೊಳಿಸಿದ ವಾಟರ್ ಪ್ಯೂರಿಫೈಯರ್‌ಗಳ ಡೇಟಾದೊಂದಿಗೆ ಕಾರ್ಯನಿರ್ವಹಿಸುವ ನಮ್ಮ ಐಒಟಿ ಸರ್ವರ್‌ಗಳು ಮತ್ತು ನಮ್ಮ ಗ್ರಾಹಕರ ಮನೆಗಳಿಂದ ಸಂಗ್ರಹಿಸಿದ ಮಾದರಿಗಳಿಂದ ನಾವು ಪಡೆದ ನೀರಿನ ಗುಣಮಟ್ಟದ ಡೇಟಾ ಇದೇ ರೀತಿಯ ಫಲಿತಾಂಶಗಳನ್ನು ತೋರಿಸಿದೆ ಎಂಬ ಮಾಹಿತಿ ನೀಡಲಾಗಿದೆ" ಎಂದಿದೆ.
ಡ್ರಿಂಕ್ ಪ್ರೈಮ್ ತಂಡವು ತಮ್ಮ ಗ್ರಾಹಕರನ್ನು ಭೇಟಿ ಮಾಡಿ ತಮ್ಮ ಸಹಕಾರ ನೀಡಿದಾಗ ಅವರು ಗ್ರಾಹಕರಲ್ಲದವರಿಗೂ ಉಚಿತ ನೀರಿನ ಗುಣಮಟ್ಟದ ತಪಾಸಣೆಗಳನ್ನು ಒದಗಿಸಲು ಮುಂದಾಗಿದ್ದರು. ಇದರೊಂದಿಗೆ, ಕಲುಷಿತ ನೀರಿನಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕದಲ್ಲಿದ್ದ ಪ್ರತಿಯೊಬ್ಬರಿಗೂ ಉಚಿತ ನೀರಿನ ಗುಣಮಟ್ಟ ಪರೀಕ್ಷೆಯನ್ನು ನಡೆಸಿದೆ.

ಡ್ರಿಂಕ್ ಪ್ರೈಮ್ ನೀರಿನ ಗುಣಮಟ್ಟ ಮತ್ತು ಅವುಗಳ ನೀರಿನ ಶುದ್ಧೀಕರಣದ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಐಒಟಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಅವಲಂಬಿಸಿದೆ. ಇದರ ಪ್ರಕಾರ, ಇದು ತಮ್ಮ ಎಲ್ಲಾ ಚಂದಾದಾರರಿಗೆ ಶುದ್ಧ, ಸುರಕ್ಷಿತ ಮತ್ತು ಆರೋಗ್ಯಕರ ಕುಡಿಯುವ ನೀರನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ತಂತ್ರಜ್ಞಾನ ಚಾಲಿತ ವಿಧಾನವಾಗಿದೆ. ಅವರು ಅಪಾರ್ಟ್ಮೆಂಟ್‌ನಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸುತ್ತಾರೆ ಮತ್ತು ಉಚಿತ ನೀರಿನ ಗುಣಮಟ್ಟದ ತಪಾಸಣೆ ನಡೆಸಲು ಉಳಿದ ಗ್ರಾಹಕರ ಬಳಿಯು ತೆರಳುತ್ತಿದ್ದಾರೆ.












Click it and Unblock the Notifications