ಡಾ. ರಾಜ್‌ ಕುಮಾರ್ ರೇಖಾ ಚಿತ್ರ ಸ್ಪರ್ಧೆ, ನೀವೂ ಪಾಲ್ಗೊಳ್ಳಿ

ಬೆಂಗಳೂರು, ಜನವರಿ 11: ಕನ್ನಡ ಚಿತ್ರರಂಗ ಕಂಡ ಧೀಮಂತ ನಟ ಡಾ. ರಾಜ್‌ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅಂತರಾಳ ಸಂಸ್ಥೆಯು ಕರ್ನಾಟಕ ಮತ್ತು ದೇಶದ ಕಲಾವಿದರೆಲ್ಲರಿಗೂ ಅಣ್ಣಾವ್ರ ಕುರಿತ ರೇಖಾ ಚಿತ್ರಗಳನ್ನು ಆಹ್ವಾನಿಸಿದೆ.

ವಿವರಗಳು: ಡಾ. ರಾಜ್‌ಕುಮಾರ್ ಅಂದರೆ ಸರಳ ನಡೆ, ನುಡಿ ಹಾಗೂ ಬದುಕಿನ, ಅತೀ ವಿರಳ ಮತ್ತು ಶ್ರೇಷ್ಠ ವ್ಯಕ್ತಿತ್ವದ ಪ್ರತಿರೂಪ. ಅವರ ವ್ಯಕ್ತಿತ್ವವನ್ನು ಅತ್ಯಂತ ಕಡಿಮೆ ರೇಖೆಗಳಲ್ಲಿ, ಸರಳವಾಗಿ ಚಿತ್ರಿಸಿ ಕಳುಹಿಸಬೇಕು.

ಡಾ.ರಾಜ್‌ಕುಮಾರ್ ಅವರ ಹುಟ್ಟು ಹಬ್ಬದ ಸಮಾರಂಭದಲ್ಲಿ ಆಯ್ಕೆಯಾದ ಕೃತಿಗೆ ಸೂಕ್ತ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಗುವುದಲ್ಲದೇ ಸಮಾರಂಭದಲ್ಲಿ ಚಿತ್ರಗಳನ್ನು ಪ್ರದರ್ಶಿಸಲಾಗುವುದು.

Dr Rajkumar Line Drawing Competition

ನಿಬಂಧನೆಗಳು: ರಾಜ್‌ಕುಮಾರ್ ಅವರ ಘನತೆಯನ್ನು ಎತ್ತಿಹಿಡಿಯುವ ಕಪ್ಪು-ಬಿಳುಪು ರೇಖಾ ಚಿತ್ರವಾಗಿರಬೇಕು. ವ್ಯಂಗ್ಯಚಿತ್ರ ಅಥವಾ ಹಾಸ್ಯಚಿತ್ರವಾಗಿರಬಾರದು. ಸ್ವರಚಿತ ಕೃತಿಯಾಗಿದ್ದು ಎಲ್ಲಿಯೂ ಪ್ರಕಟವಾಗಿರಬಾರದು. ಚಿತ್ರವನ್ನು ಸ್ಕ್ಯಾನ್ ಮಾಡಿ ಕಳುಹಿಸಬೇಕು. A4 ಅಳತೆಯಲ್ಲಿ 300 DPI ರೆಸಲ್ಯೂಶನ್ ಜೆಪೆಗ್ ರೂಪದಲ್ಲಿರಬೇಕು.

ಫೋಟೋ ತೆಗೆದು ಕಳುಹಿಸಬಾರದು. ವೆಕ್ಟರ್ ರೂಪದಲ್ಲಿದ್ದರೆ ಉತ್ತಮ. ರೇಖಾಚಿತ್ರಗಳನ್ನು ಜನವರಿ 25ನೇ ತಾರೀಖಿನೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಫೇಸ್‌ಬುಕ್‌ ಅಂತರಾಳ ಪೇಜ್‌ ನೋಡಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+