Siddaramaiah v/s Sudhakar: ಕೊರೊನಾ ಅವ್ಯವಹಾರದ ದಾಖಲೆ ಇದ್ದರೆ ಜನರ ಮುಂದಿಡಿ: ಸುಧಾಕರ್ ಕಿಡಿ

ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷಗಳ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪ ಆರಂಭವಾಗುತ್ತಿದೆ. ಈ ಪ್ರಕ್ರಿಯೆ ಆರಂಭಕ್ಕೆ ಇದೀಗ ಆರೋಗ್ಯ ಸಚಿವ ಸುಧಾಕರ್ ಮತ್ತು ವಿರೋಧ ಪಕ್ಷದ ನಾಯಕರು ಮುನ್ನೂಡಿ ಬರೆದಂತಿದೆ.

ಬೆಂಗಳೂರು, ಜನವರಿ 25: ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷಗಳ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪ ಆರಂಭವಾಗುತ್ತಿದೆ. ಈ ಪ್ರಕ್ರಿಯೆ ಆರಂಭಕ್ಕೆ ಇದೀಗ ಆರೋಗ್ಯ ಸಚಿವ ಸುಧಾಕರ್ ಮತ್ತು ವಿರೋಧ ಪಕ್ಷದ ನಾಯಕರು ಮುನ್ನೂಡಿ ಬರೆದಂತಿದೆ.

ಕೊರೊನಾ ಕಾಲದ ಕಳೆದ ಮೂರು ವರ್ಷಗಳ ಆರೋಗ್ಯ ಇಲಾಖೆ ಅವ್ಯವಹಾರ ಕುರಿತು ಹಾಗೂ ಸಚಿವ ಡಾ.ಕೆ.ಸುಧಾಕರ್ ಜ್ಞಾನದ ವಿಚಾರವಾಗಿಯೂ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಟೀಕಾಪ್ರಹಾರ ಮಾಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಸಚಿವ ಸುಧಾಕರ್, ಕೋಲಾರದಲ್ಲಿ ಸಿದ್ದರಾಮಯ್ಯನವರು ಗೆಲ್ಲುವುದಿಲ್ಲ. ಅವರ ವಿರುದ್ಧದ ಬಿಜೆಪಿ ನಾಯಕನ ಗೆಲುವಿಗಾಗಿ ಶ್ರಮಿಸುತ್ತೇನೆ. ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೇಳಿಕೆ ಮಾತುಗಳನ್ನು ಉಲ್ಲೇಖಿಸಿ ಭವಿಷ್ಯ ನುಡಿದಿದ್ದರು. ಇದೀಗ ಮತ್ತ ಸರಣಿ ಟ್ವಿಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಪ್ರಜಾಧ್ವನಿ ಯಾತ್ರೆ ಹೆಸರಿನಲ್ಲಿ ನಮ್ಮ ಚಿಕ್ಕಬಳ್ಳಾಪುರಕ್ಕೆ ಬಂದಿದ್ದ ನೀವು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು, ಭರವಸೆಯನ್ನು ಜನರ ಮುಂದಿಡಬೇಕು. ಆದರೆ ನೀವು ಅದೆಲ್ಲವನ್ನು ಬಿಟ್ಟು ನನ್ನನ್ನು ಮಾಡಿ ಈ ಭಾಗದಲ್ಲಿ ಸೋಲಿಸಿ ಎಂದು ಜನರ ಬಳಿ ಅಂಗಲಾಚಿದ್ದೀರಿ. ನೀವು ಹತಾಶರಾಗಿದ್ದು, ಹತಾಶ ಪರಿಸ್ಥಿತಿ ನಿಮ್ಮನ್ನು ಕಾಡುತ್ತಿರುವ ಬಗ್ಗೆ ನನಗೆ ಕನಿಕರವಿದೆ ಎಂದು ಸುಧಾಕರ್ ಹೇಳಿದರು.

Dr. K. Sudhakar hit back at Siddaramaiah, leader of the opposition, who allegations him of misdeeds.

ದಾಖಲೆಗಳಿದ್ದರೆ ಜನರ ಮುಂದಿಡಿ

ಕೊರೊನಾ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಳೆದ 3 ವರ್ಷಗಳಿಂದ ಹಾದಿ ಬೀದಿಯಲ್ಲಿ, ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯನವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಿಮ್ಮ ಆರೋಪಗಳಿಗೆ ಸದನದಲ್ಲಿ ಉತ್ತರ ನೀಡಲು ಮುಂದಾದಾಗ ಸತ್ಯ ಕೇಳುವ ಧೈರ್ಯವಿಲ್ಲದೆ ಕಾಂಗ್ರೆಸ್‌ ನಾಯಕರೆಲ್ಲರು ಪಲಾಯನ ಮಾಡಿದ್ದರು.

ಕೊರೊನಾ ವೈರಸ್‌ನಂತಹ ಶತಮಾನದ ಭೀಕರ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ನಿರ್ವಹಿಸಿ ನಾಡಿನ ಜನರನ್ನು ರಕ್ಷಿಸಿದ ಸಂತೃಪ್ತಿ ಬಿಜೆಪಿಗೆ ಇದೆ. ಕೋವಿಡ್ ನಿರ್ವಹಣೆಯ ಖರ್ಚು ವೆಚ್ಚದ ಬಗ್ಗೆ ಪ್ರತೀ ಪೈಸೆಗೂ ಲೆಕ್ಕ ನೀಡಬಲ್ಲೆ. ಈ ಕುರಿತು ಶ್ವೇತ ಪತ್ರ ಹೊರಡಿಸಲೂ ಸಹ ನಮ್ಮ ಸರ್ಕಾರ ಸಿದ್ದವಿದೆ ಎಂದು ಅವರು ತಿಳಿಸಿದರು.

Dr. K. Sudhakar hit back at Siddaramaiah, leader of the opposition, who allegations him of misdeeds.

ಆರೋಪ ಮಾಡುತ್ತಿರುವ ನಿಮ್ಮ ಬಳಿ ಏನಾದರೂ ದಾಖಲೆ ಇದ್ದರೆ ಅದನ್ನ ಜನರ ಮುಂದಿಡಿ ಎಂದು ಸಿದ್ದರಾಮಯ್ಯ ಅವರಿಗೆ ಸಚಿವ ಸುಧಾಕರ್ ಸವಾಲೆಸೆದರು. ನಿಮ್ಮ ಆರೋಪಗಳಲ್ಲಿ ಕೊಂಚವಾದರೂ ಹುರುಳಿದ್ದರೆ ಸಕ್ಷಮ ಸಂಸ್ಥೆಗಳಿಗೆ ದೂರು ಸಲ್ಲಿಸಿ. ಅದು ಬಿಟ್ಟು ಹೀಗೆ ಹಿಟ್ ಅಂಡ್ ರನ್ ರಾಜಕೀಯ ಮಾಡುವುದು ನಿಮ್ಮ ಘನತೆಗೆ ಸರಿ ಹೊಂದುವಂಥದ್ದಲ್ಲ ಎಂದು ಅವರು ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+