ನಾನು ಜಾತಿವಾದಿಯಾಗಿದ್ದರೆ ನನ್ನ ವಂಶ ನಿರ್ನಾಮವಾಗಲಿ: ಜಮೀರ್ ಅಹಮದ್ ಡೈಲಾಗ್!
ಬೆಂಗಳೂರು, ಏ. 14: 'ನಾನು ಜಾತಿ ಮಾಡಿದ್ದರೆ, ನನ್ನ ವಂಶ ನಿರ್ನಾಮವಾಗಲಿ, ನಾನು ಸತ್ಯ ಹೇಳುತ್ತಿದ್ದೇನೆ. ರಾಜಕೀಯಕ್ಕೆ ಬಂದ ಮೇಲೆ ನನಗೆ ಜಾತಿ ಗೊತ್ತಾಗಿರೋದು. ಅದಕ್ಕಿಂತ ಮುಂಚೆ ನನಗೆ ಅದು ಗೊತ್ತಿಲ್ಲ..!
ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಚಾಮರಾಜಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಶಾಸಕ ಜಮೀರ್ ಅಹಮದ್ ಖಾನ್ ಹೊಡೆದ ಡೈಲಾಗ್ ಇದು.
ನಮಗೆ ಜಾತಿ ಬೇಡ, ನೆಮ್ಮದಿ ಬೇಕು. ನಾನು ಮುಸ್ಲಿಂ ಆಗಿರಬಹುದು. ಆದರೆ, ಅದಕ್ಕೂ ಮುಂಚೆ ನಾನು ಭಾರತೀಯ, ಹಿಂದೂಸ್ತಾನಿ, ನಾನು ಕನ್ನಡಿಗ ಎಂದು ಚಾಮರಾಜಪೇಟೆ ಶಾಸಕ ಬಿ. ಝಡ್ ಜಮೀರ್ ಅಹಮದ್ ಖಾನ್ ಹೇಳಿದರು.

ನಿಮ್ಮ ತೊಂದರೆ, ನಿಮ್ಮ ಕಷ್ಟ ಎಲ್ಲವೂ ನನ್ನದು ಎಂದು ತಿಳಿದಿದ್ದೇನೆ. ಅದರಂತೆಯೇ ನಾನು ಬಾಳುತ್ತಿದ್ದೇನೆ. ಯಾರಲ್ಲೂ ಜಾತಿ ಬರುವುದು ಬೇಡ. ನಾನು ನೀವು ಆಯ್ಕೆ ಮಾಡಿದ ಸೇವಕ ನಿಮ್ಮ ಸೇವೆಯಲ್ಲಿ ಪ್ರತಿದಿನನೂ ಕಳೆಯುತ್ತಿದ್ದೇನೆ ಎಂದು ಇದೇ ವೇಳೆ ತಿಳಿಸಿದರು.
ಚಾಮರಾಜಪೇಟೆ ಶಾಸಕ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಬೆಂಬಲಿಗರು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಇಂದು ಚಾಮರಾಜಪೇಟೆ ಕ್ಷೇತ್ರದ ಕೆ.ಆರ್ ಮಾರ್ಕೆಟ್ ವಾರ್ಡ್ ನ ಟಿಸಿಎಂ ಗ್ರ್ಯಾಂಡ್ ರಸ್ತೆಯಲ್ಲಿರೋ ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

Recommended Video
ಸಂವಿಧಾನ ಶಿಲ್ಪಿಗೆ ಗೌರವ ನಮನಗಳನ್ನು ಸಲ್ಲಿಸಿದರು. ಬಳಿಕ ವಾರ್ಡ್ ಸಂಖ್ಯೆ 136ರ ಜಗಜೀವನರಾಮ್ ನಗರದಲ್ಲಿ ಮುಖಂಡರಾದ ಪಿ.ಕೆ ಅಲ್ತಾಫ್ ಅವರು ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ವಂದನೆ ಸಲ್ಲಿಸಿದರು.












Click it and Unblock the Notifications