ಅಪಾರ್ಟ್ ಮೆಂಟ್ ಗಳ ಮೇಲೆ ಜಲಮಂಡಳಿಯ ಮಲತಾಯಿ ಧೋರಣೆ

ಬೆಂಗಳೂರು, ನವೆಂಬರ್ 18 : ನಗರದ ಅಪಾರ್ಟ್ ಮೆಂಟ್ ನಿವಾಸಗಳಿಗೆ ಡಬ್ಬಲ್ ಪೈಪಿಂಗ್ ಸಿಸ್ಟಂ ಮತ್ತು ಎಸ್.ಟಿ.ಪಿ(ಕೊಳಚೆ ನೀರು ಸಂಸ್ಕರಣಾ ಘಟಕ) ಅಳವಡಿಕೆ ಕಡ್ಡಾಯಗೊಳಿಸಲು ಮುಂದಾಗಿರುವ ಜಲಮಂಡಳಿ ವಿರುದ್ಧ ಅಪಾರ್ಟ್ ಮೆಂಟ್ ನಿವಾಸಿಗಳ ಅಸೋಸಿಯೇಷನ್ ಆನ್‌ ಲೈನ್ ಮೂಲಕ ಸಹಿ ಸಂಗ್ರಹಣ ಚಳವಳಿ ಆರಂಭಿಸಿದೆ.

ಈಗಾಗಲೇ ಹಲವು ಬಗೆಯ ಸೆಸ್ ಹಾಗೂ ತೆರಿಗೆಗಳಿಂದ ತತ್ತರಿಸಿ ಹೋಗಿರುವ ಬೆಂಗಳೂರು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಈಗ ಬೆಂಗಳೂರು ಜಲಮಂಡಳಿ ಮತ್ತೊಂದು ಬರೆ ಎಳೆದಿದೆ. ಜಲಮಂಡಳಿ ನಿಲುವಿನಿಂದ ನಿವಾಸಿಗಳನ್ನು ತೀವ್ರ ಸಂಕಷ್ಟಕ್ಕೀಡುಮಾಡಿದೆ. ಈಗಾಗಲೇ ಅಪಾರ್ಟ್ ಮೆಂಟ್ ನಿವಾಸಿಗಳು ಆಸ್ತಿ ತೆರಿಗೆ, ನೀರಿನ ಬಿಲ್, ವಿದ್ಯುತ್ ಶುಲ್ಕ, ತ್ಯಾಜ್ಯ ಸಂಸ್ಕರಣಾ ಶುಲ್ಕ ಹೀಗೆ ವಿವಿಧ ರೀತಿಯಿಂದ ಹಣವನ್ನು ಕಟ್ಟಿಸಿಕೊಳ್ಳಲಾಗುತ್ತಿದೆ.

Double pipeline,STP imposing on Apartments: petition to CM

ಮೂರು ವರ್ಷಗಳ ಹಿಂದೆ ಶೇ. 300ರಷ್ಟು ನೀರಿನ ತೆರಿಗೆ ಹೆಚ್ಚಿಸಲಾಗಿತ್ತು. ಆಗಲೂ ನಾವು ವಿರೋಧಿಸಿದ್ದವು. ನಾವು ಹೆಚ್ಚು ಪ್ರಮಾಣದಲ್ಲಿ ನೀರಿನ ಬಳಕೆದಾರರು ಎಂಬ ಕಾರಣಕ್ಕೆ ಶೇ.300ರಷ್ಟು ಹೆಚ್ಚಳ ಮಾಡಲಾಗಿತ್ತು ಎಂದು ಅಸೋಸಿಯೇಷನ್ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.

ಈಗ ಆನ್ ಲೈನ್ ಮೂಲಕ ಸಹಿ ಸಂಗ್ರಹಣ ಚಳವಳಿ ಆರಂಭಿಸಿದೆ. ಬೆಂಗಳೂರು ಅಪಾರ್ಟ್ ಮೆಂಟ್ ನಿವಾಸಿಗಳು ಈಗಾಗಲೇ ನಿರ್ಮಾಣಗೊಂಡ ಕಟ್ಟಡಗಳಿಗೆ ವಿನಾಯಿತಿ ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+