ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಬೀದಿಗಳಿಗೆ ಮತ್ತೊಮ್ಮೆ ಇಳಿಯುವುದು ಯಾವಾಗ ಡಬಲ್ ಡೆಕ್ಕರ್ ಬಸ್?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಬಸ್ಸಿನ ಮೇಲೊಂದು ಬಸ್ ಎಂದರೆ ಅದು ಬೆಂಗಳೂರಿಗರ ಭಾಷೆಯಲ್ಲಿ ಡಬಲ್ ಡೆಕ್ಕರ್. ಒಂದು ಕಾಲದಲ್ಲಿ ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ರೌಂಡ್ ಹೊಡೆಯುತ್ತಿದ್ದ ಅಂಥದ್ದೇ ಬಸ್‌ಗಳು ರಸ್ತೆಗೆ ಇಳಿಯುವುದಕ್ಕೆ ಸಜ್ಜಾಗಿವೆ.

1970-80ರ ದಶಕದಲ್ಲಿ ಬೆಂಗಳೂರಿನ ಹಲವಾರು ಭಾಗಗಳಲ್ಲಿ ಡಬಲ್ ಡೆಕ್ಕರ್ ಬಸ್‌ಗಳು ಸರ್ವೇಸಾಮಾನ್ಯವಾಗಿ ಬಿಟ್ಟಿದ್ದವು. ಅದೇ ಬಸ್‌ಗಳನ್ನು 1997ರ ಹೊತ್ತಿಗೆ ಹಂತ ಹಂತವಾಗಿ ಸ್ಥಗಿತಗೊಳಿಸಲಾಯಿತು. ಆದರೆ ಅಂಥದ್ದೇ ಬಸ್‌ಗಳನ್ನು ಹೊಸ ಅವತಾರದಲ್ಲಿ ಮತ್ತೊಮ್ಮೆ ಬೀದಿಗೆ ಇಳಿಸಲು ನಿರ್ಧರಿಸಲಾಗಿದೆ.

ಇ-ಬಸ್ ಒಪ್ಪಂದದಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಚಾಲಕ, ನಿರ್ವಾಹಕರಿಗೆ ಆಪತ್ತು!?ಇ-ಬಸ್ ಒಪ್ಪಂದದಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಚಾಲಕ, ನಿರ್ವಾಹಕರಿಗೆ ಆಪತ್ತು!?

ಮುಂಬೈನ ಬೆಸ್ಟ್(BEST) ನಂತರ, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ) 10 ಡಬಲ್ ಡೆಕ್ಕರ್ ಎಸಿ ಇ-ಬಸ್‌ಗಳನ್ನು ಪರಿಚಯಿಸಲು ಯೋಜನೆ ಹಾಕಿಕೊಂಡಿದೆ. ಡಬಲ್ ಡೆಕ್ಕರ್ ಬಸ್‌ಗಳಿಗೆ ಮೀಸಲಿಟ್ಟಿರುವ ಅನುದಾನ ಎಷ್ಟು? ಬೆಂಗಳೂರಿನ ಯಾವ ಮಾರ್ಗದಲ್ಲಿ ಈ ಬಸ್‌ಗಳು ಸಂಚರಿಸಲಿದೆ?, ಈ ಬಸ್‌ಗಳಲ್ಲಿ ಸಂಚರಿಸುವುದಕ್ಕೆ ಟಿಕೆಟ್ ದರ ಹೇಗಿರುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಪರಿಸರ ಸ್ನೇಹಿ ಬಸ್‌ಗಾಗಿ 140 ಕೋಟಿ ರೂಪಾಯಿ

ಪರಿಸರ ಸ್ನೇಹಿ ಬಸ್‌ಗಾಗಿ 140 ಕೋಟಿ ರೂಪಾಯಿ

ಪರಿಸರ ಸ್ನೇಹಿ ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್‌ಗಳ ಸೇರ್ಪಡೆಯು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (ಎನ್‌ಸಿಎಪಿ) ಅಡಿಯಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಬಿಬಿಎಂಪಿಗೆ 140 ಕೋಟಿ ರೂಪಾಯಿ ಮಂಜೂರಾಗಿದೆ. 2021-2022ರ ವಾಯು ಗುಣಮಟ್ಟ ಸುಧಾರಣೆಗಾಗಿ ಕೇಂದ್ರವು 15ನೇ ಹಣಕಾಸು ಆಯೋಗದ ಅನುದಾನದಡಿ 140 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

'ಸಾರಿಗೆ, ಕೆಎಸ್‌ಪಿಸಿಬಿ, ಟ್ರಾಫಿಕ್‌ ಪೊಲೀಸ್‌ನಂತಹ ಇಲಾಖೆಗಳ ಕಾಮಗಾರಿಗಳ ಅನುಷ್ಠಾನಕ್ಕೆ ಸೂಕ್ಷ್ಮ ಮಟ್ಟದ ಕ್ರಿಯಾ ಯೋಜನೆಯಂತೆ ಈ ಮೊತ್ತವನ್ನು ನಿಗದಿಪಡಿಸಲಾಗಿದೆ' ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು. ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ (FAME ) ಯೋಜನೆ ಅಡಿಯಲ್ಲಿ ಸೇರ್ಪಡೆಗೊಂಡ ಇ-ಬಸ್‌ಗಳಿಗಾಗಿ 15 ಬಸ್ ಡಿಪೋಗಳ ವಿದ್ಯುದ್ದೀಕರಣಗೊಳಿಸಲಾಗುತ್ತಿದ್ದು, ಅದಕ್ಕೆ 20 ಕೋಟಿ ರೂಪಾಯಿ ಮೀಸಲಿಡಲಾಗಿದೆ.

10 ಕೋಟಿ ರೂಪಾಯಿ ಬಸ್‌ಗಾಗಿ ಮೀಸಲು

10 ಕೋಟಿ ರೂಪಾಯಿ ಬಸ್‌ಗಾಗಿ ಮೀಸಲು

ಸರ್ಕಾರದ 140 ಕೋಟಿ ರೂಪಾಯಿಗಳಲ್ಲಿ ಐದು ಡಬಲ್ ಡೆಕ್ಕರ್ ಇ-ಬಸ್ ಗಳಿಗೆ ರೂ.10 ಕೋಟಿ ಮೀಸಲಿಡಲಾಗಿದೆ. ಐದು ಇ-ಬಸ್‌ಗಳನ್ನು ಖರೀದಿಸಲು ಯೋಜಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚುವರಿಯಾಗಿ, ಅವರು ಇನ್ನೂ ಐದು ಅಂತಹ ಬಸ್‌ಗಳಿಗೆ ಹಣವನ್ನು ಕೋರಿ ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ನಗರದ ಹೊರ ವರ್ತುಲದಲ್ಲಿ ಡಬಲ್ ಡೆಕ್ಕರ್

ನಗರದ ಹೊರ ವರ್ತುಲದಲ್ಲಿ ಡಬಲ್ ಡೆಕ್ಕರ್

ನಾವು ಒಟ್ಟು 10 ಎಸಿ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸಲು ಯೋಜಿಸುತ್ತಿದ್ದೇವೆ. 10ರಲ್ಲಿ ಐದಕ್ಕೆ ಮೊತ್ತ ಮಂಜೂರಾಗಿದೆ. ನಾವು ಮಾರ್ಗಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿದ್ದೇವೆ. ವೈಮಾನಿಕ ಕ್ಲಿಯರೆನ್ಸ್ ಅಗತ್ಯವಿರುವ ಕಾರಣ ಅವುಗಳನ್ನು ಹೊರ ವರ್ತುಲ ರಸ್ತೆ ಮತ್ತು ಇತರ ಬಾಹ್ಯ ರಸ್ತೆಗಳು/ಹೊರವಲಯಗಳಲ್ಲಿ ನಿರ್ವಹಿಸುವ ಸಾಧ್ಯತೆಯಿದೆ, "ಎಂದು ಹೇಳಿದರು.

ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಅನ್ನು 500ಡಿ (ಸೆಂಟ್ರಲ್ ಸಿಲ್ಕ್ ಬೋರ್ಡ್-ಹೆಬ್ಬಾಳ) ಮಾರ್ಗದಲ್ಲಿ ನಿಯೋಜಿಸುವ ಸಾಧ್ಯತೆಯಿದೆ. ಕಿರಿದಾದ ರಸ್ತೆಗಳು ಮತ್ತು ಫ್ಲೈಓವರ್‌ಗಳು, ಓವರ್‌ಹೆಡ್ ವಿದ್ಯುತ್ ಲೈನ್‌ಗಳು, ಟೆಲಿಕಾಂ ಕೇಬಲ್‌ಗಳು ಮತ್ತು ಮರದ ಕೊಂಬೆಗಳು ಪ್ರಮುಖ ಅಡೆತಡೆಗಳನ್ನು ಉಂಟು ಮಾಡಬಹುದು. ರಸ್ತೆಗಳ ಕಳಪೆ ಸ್ಥಿತಿ, ಗ್ರೇಡಿಯಂಟ್ ಮತ್ತು ವಕ್ರತೆಯು ಇತರ ಕಾಳಜಿ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1980ರ ದಶಕದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಡಬಲ್ ಡೆಕ್ಕರ್ ಬಸ್ ದಕ್ಷಿಣ ಬೆಂಗಳೂರಿನ ರಾಮಕೃಷ್ಣ ಮಿಷನ್ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಡಬಲ್ ಡೆಕ್ಕರ್ ಬಸ್‌ಗಳಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸುವುದಕ್ಕೆ ಸಾಧ್ಯವಾಗುತ್ತದೆ, ಆದರೆ ಈ ಬಸ್‌ಗಳಿಗೆ ಹೆಚ್ಚುವರಿ ಸಿಬ್ಬಂದಿ ಅಗತ್ಯವಿಲ್ಲ ಎಂದಿದ್ದಾರೆ.

6 ಡೀಸಲ್ ಆಧಾರಿತ ಡಬಲ್ ಡೆಕ್ಕರ್ ಬಸ್

6 ಡೀಸಲ್ ಆಧಾರಿತ ಡಬಲ್ ಡೆಕ್ಕರ್ ಬಸ್

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 6 ಡೀಸೆಲ್ ಡಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸಿದೆ. ಇವುಗಳನ್ನು ಬೆಂಗಳೂರು ಮೂಲದ ಕೆಎಂಎಸ್ ಕೋಚ್ ಬಿಲ್ಡರ್ಸ್ ನಿರ್ಮಿಸಿದೆ. ಒಂದು ಬಸ್ 40 ಸೀಟ್ ಅನ್ನು ಹೊಂದಿದ್ದು, ಪ್ರಾಥಮಿಕವಾಗಿ ಮೈಸೂರಿನಲ್ಲಿ ಸಂಚರಿಸಲಿದೆ ಎಂದು ಗೊತ್ತಾಗಿದೆ.

English summary
Bangalore Metropolitan Transport Corporation is planning to induct 10 Double-decker AC Electric buses. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X