• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಮಳೆ ಬಂದರೆ ಈ ರಸ್ತೆಗಳಲ್ಲಿ ಮಾತ್ರ ಹೋಗ್ಬೇಡಿ

|

ಬೆಂಗಳೂರು, ಜೂನ್ 24 : ಒಂದು ದಿನದ ಮಳೆಗೆ ನದಿಯಂತಾಗುವ ಬೆಂಗಳೂರು ರಸ್ತೆಗಳನ್ನು ಸರಿಮಾಡುವವರ್ಯಾರು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

ಕೆಲವೊಂದು ರಸ್ತೆಗಳು ಸಣ್ಣ ಮಳೆಗೂ ನೀರು ನಿಂತು ವಾಹನ ಸವಾರರನ್ನು ಪೇಚಿಗೆ ಸಿಲುಕಿಸುತ್ತಿದೆ. ಮಳೆ ಬಂದರೆ ಕೆಂಪೇಗೌಡ ಹಾಗೂ ರಾಜಾಜಿನಗರ ಅಂಡರ್ ಪಾಸ್, ಹೆಬ್ಬಾಳ ಮೇಲ್ಸೇತುವೆ , ಲಗ್ಗೆರೆ, ವಿಜಿನಾಪುರ ಅಥವಾ ವಿಮಾನ ನಿಲ್ದಾಣ ರಸ್ತೆ ಕಡೆಗೆ ಹೋಗಲೇಬೇಡಿ.

ಚುರುಕುಗೊಂಡ ಮುಂಗಾರು, ಎಲ್ಲೆಲ್ಲಿ ಮಳೆಯಾಗ್ತಿದೆ?ಚುರುಕುಗೊಂಡ ಮುಂಗಾರು, ಎಲ್ಲೆಲ್ಲಿ ಮಳೆಯಾಗ್ತಿದೆ?

ಪೊಲೀಸರು ಕೆಲವು ಪ್ರದೇಶಗಳಲ್ಲಿ ಅವರೇ ರಸ್ತೆಗಳನ್ನು ಸರಿ ಮಾಡುತ್ತಾ, ಬಿಬಿಎಂಪಿಗೆ ವರದಿ ನೀಡುತ್ತಿದ್ದಾರೆ, ನೀರು ನಿಲ್ಲುವ ಪ್ರದೇಶಗಳು, ಪ್ರಯಾಣಿಕರಿಗೆ ತೊಂದರೆ ಮಾಡುವ ಕೆಲವು ರಸ್ತೆಗಳು, ರಸ್ತೆ ಗುಂಡಿಗಳ ಬಗ್ಗೆ ಟ್ರಾಫಿಕ್ ಪೊಲೀಸರು ವರದಿ ನೀಡಿ ಮೂರ್ನಾಲ್ಕು ತಿಂಗಳುಗಳು ಕಳೆದರೂ ಬಿಬಿಎಂಪಿ ಅತ್ತ ಗಮನ ಕೊಡುತ್ತಿಲ್ಲ.

ಬಿಬಿಎಂಪಿ ಎಲ್ಲೆಲ್ಲಿ ಕ್ರಮ ಕೈಗೊಂಡಿದೆ?

ಬಿಬಿಎಂಪಿ ಎಲ್ಲೆಲ್ಲಿ ಕ್ರಮ ಕೈಗೊಂಡಿದೆ?

ರಾಜಾಜಿನಗರ ಅಂಡರ್ ಪಾಸ್, ಜಯಮಹಲ್ ರಸ್ತೆ, ವಾಟರ್ ಟ್ಯಾಂಕ್ ರಸ್ತೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಹತ್ತು ಕಡೆ ಚರಂಡಿ ಹೂಳು ತೆಗೆದು ನೀರು ಹರಿದು ಹೋಗುವಂತೆ ಬಿಬಿಎಂಪಿ ಕ್ರಮ ಕೈಗೊಂಡಿದೆ. ಆದರೆ ಉಳಿದ 33 ಸ್ಥಳಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಕ್ರಮ ಕೈಗೊಳ್ಳಬೇಕಿದೆ.

ಮಳೆ ಬಂದರೆ ನೀರು ನಿಂತು ವಾಹನ ಸವಾರರಿಗೆ ತಲೆ ನೋವು

ಮಳೆ ಬಂದರೆ ನೀರು ನಿಂತು ವಾಹನ ಸವಾರರಿಗೆ ತಲೆ ನೋವು

ಮಳೆ ಬಂದರೆ ನೀರು ನಿಂತು ವಾಹನ ಸವಾರರಿಗೆ ತಲೆನೋವು ಉಂಟು ಮಾಡುವಂತಹ ಪ್ರಮುಖ ರಸ್ತೆ, ಅಂಡರ್ ಪಾಸ್ ಹಾಗೂ ಫ್ಲೈಓವರ್ ಪಟ್ಟಿಯನ್ನು ಸಂಚಾರ ಪೊಲೀಸರು ನೀಡಿದ್ದಾರೆ. ಒಟ್ಟು 43 ಸ್ಥಳಗಳ ಪಟ್ಟಿಯನ್ನು ನೀಡಿದ್ದಾರೆ. ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಶಿಫಾರಸ್ಸು ಮಾಡಿದೆ.

ಪಟ್ಟಿಯಲ್ಲಿ ಅಂಡರ್ ಪಾಸ್, ಫ್ಲೈಓವರ್ ಸಂಖ್ಯೆ ಹೆಚ್ಚು

ಪಟ್ಟಿಯಲ್ಲಿ ಅಂಡರ್ ಪಾಸ್, ಫ್ಲೈಓವರ್ ಸಂಖ್ಯೆ ಹೆಚ್ಚು

ಪಟ್ಟಿಯಲ್ಲಿ ಅಂಡರ್‌ಪಾಸ್ ಮತ್ತು ಫ್ಲೈಓವರ್‌ಗಳ ಸಂಖ್ಯೆಯೇ ಹೆಚ್ಚಿದೆ. ಹಾಗೆಯೇ ಪೊಲೀಸರು ಗುರುತಿಸಿರುವ ಮಳೆ ನೀರು ನಿಲ್ಲುವ ರಸ್ತೆಗಳು ಸಾರ್ವಜನಿಕರು ಹೆಚ್ಚಾಗಿ ಬಳಸುವಂಥದ್ದಾಗಿದೆ. ಹಾಗಾಗಿ ಈ 43 ಪ್ರಮುಖ ಸ್ಥಳಗಳಲ್ಲಿ ಮಳೆ ನೀರು ನಿಂತು ಉಂಟಾಗುವ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಬೇಕು ಎಂದು ಬಿಬಿಎಂಪಿಯನ್ನು ಸಂಚಾರ ಪೊಲೀಸರು ಕೇಳಿಕೊಂಡಿದ್ದಾರೆ.

ಟ್ರಾಫಿಕ್ ಜಾಮ್ ಉಂಟಾಗುವ ಸ್ಥಳಗಳು

ಟ್ರಾಫಿಕ್ ಜಾಮ್ ಉಂಟಾಗುವ ಸ್ಥಳಗಳು

-ವಿಜಿನಾಪುರ ಅಂಡರ್ ಪಾಸ್
ಕೆಂಪೇಗೌಡ ಅಂಡರ್ ಪಾಸ್
-ರಿಂಗ್‌ರೋಡ್ ನ ಆರ್ ಎಂ ನಗರ
-ಲೌರಿ ರೈಲ್ವೆ ಅಂಡರ್ ಪಾಸ್
-ಹೆಬ್ಬಾ ಫ್ಲೈಓವರ್
-ಭೂಪಸಂದ್ರ ಕ್ರಾಸ್
-ದೊಡ್ಡನೆಕ್ಕುಂದಿ ಫ್ಲೈಓವರ್ ಕೆಳಭಾಗ
-ಬಿಇಎಲ್ ಸರ್ಕಲ್
-ಆರ್‌ಕೆ ಹೆಗಡೆ ನಗರ ಮುಖ್ಯರಸ್ತೆ
-ಕೆಂಪಾಪುರ ರಸ್ತೆ ಫ್ಲೈಓವರ್
-ಡಿಪು ಪುರ ರಸ್ತೆ
-ವಾಟರ್ ಟ್ಯಾಂಕ್ ಜಂಕ್ಷನ್
-ಯಲಹಂಕದ ರೈತರ ಸಂತೆ ಬ್ರಿಡ್ಜ್ ಕೆಳಭಾಗ
-ಬಾಗಲೂರು ಮುಖ್ಯರಸ್ತೆ ಬಿಗ್ ಮಾರುಕಟ್ಟೆ
-ಟಿಸಿ ಪಾಳ್ಯ
-ಎಂಎಂ ಟೆಂಪಲ್ ಸಿಗ್ನಲ್

English summary
BBMP lost its sense, so some roads are become pathetic for the passengers and drivers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X