ಬೆಂಗಳೂರಿನ ಟ್ರಾಫಿಕ್ ಜಂಜಾಟದಲ್ಲಿಯೂ 20 ನಿಮಿಷದಲ್ಲಿ ತಲುಪಲಿದೆ ಡೊಮಿನೋಸ್ ಪಿಜ್ಜಾ!
ಡೊಮಿನೋಸ್ ವೇಗವಾಗಿ ಪಿಜ್ಜಾ ಡಿಲಿವರಿ ಮಾಡುವ ದಾಖಲೆಯನ್ನು ಹೊಂದಿದೆ.
ಬೆಂಗಳೂರು, ಮಾರ್ಚ್ 07: ಸಿಲಿಕಾನ್ ಸಿಟಿ ಎಂದ ತಕ್ಷಣ ನೆನಪಾಗುವುದು ಟ್ರಾಫಿಕ್ ಸಮಸ್ಯೆ. ಟ್ರಾಫಿಕ್ ಜಂಜಾಟದ ನಗರಗಳಲ್ಲಿ ಹೆಚ್ಚು ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಡೊಮಿನೋಸ್ ತನ್ನ ನೂತನ ಡೆಲಿವರಿ ಸೇವೆಯನ್ನು ಆರಂಭಿಸಿದೆ. ಈ ನೂತನ ಸೇವೆಯಿಂದ ನಿಮ್ಮ ಪಿಜ್ಜಾ ಬಿಸಿಬಿಸಿಯಾಗಿಯೇ ಕೇವಲ 20 ನಿಮಿಷದಲ್ಲಿ ನಿಮ್ಮ ಮನೆಗೆ ತಲುಪಲಿದೆ.
ಹೌದು, ಡೊಮಿನೊಸ್ ಪಿಜ್ಜಾ ಬೆಂಗಳೂರಿನಲ್ಲಿ ತನ್ನ 20 ನಿಮಿಷಗಳ ವಿತರಣಾ ಸೇವೆಯನ್ನು ಪ್ರಾರಂಭಿಸಿದ್ದು, ಡೊಮಿನೋಸ್ ಬ್ರಾಂಡ್ ಅನ್ನು ನಿರ್ವಹಿಸುವ ಜುಬಿಲೆಂಟ್ ಫುಡ್‌ವರ್ಕ್ಸ್ ಈ ಪ್ರಕಟಣೆ ಮಾಡಿದೆ. ಗ್ರಾಹಕರು ಆರ್ಡರ್ ಮಾಡಿದ ಕ್ಷಣದಿಂದ 20 ನಿಮಿಷಗಳಲ್ಲಿ ವಿತರಣೆಯನ್ನು ನೀಡುವ ಮೂಲಕ ಬೆಂಗಳೂರಿನ ತ್ವರಿತ ಸೇವಾ ರೆಸ್ಟೋರೆಂಟ್‌ಗಳಿಗೆ (ಕ್ಯೂಎಸ್‌ಆರ್) ಟಕ್ಕರ್ ಕೊಡಲು ಸಿದ್ಧವಾಗಿದೆ.

ಡೊಮಿನೋಸ್ ವೇಗವಾಗಿ ಪಿಜ್ಜಾ ಡಿಲಿವರಿ ಮಾಡುವ ದಾಖಲೆಯನ್ನು ಹೊಂದಿದೆ. ಇನ್-ಸ್ಟೋರ್ ಪ್ರಕ್ರಿಯೆ ಸುಧಾರಣೆಗಳನ್ನು ಹೆಚ್ಚಿಸುವ ಮೂಲಕ, ತಂತ್ರಜ್ಞಾನವನ್ನು ಅಪ್‌ಗ್ರೇಡ್ ಮಾಡುವ ಮೂಲಕ ಮತ್ತು ತನ್ನ ಸ್ಟೋರ್ ನೆಟ್‌ವರ್ಕ್ ಅನ್ನು ವಿಸ್ತರಿಸುವ ಮೂಲಕ ಇದನ್ನು ಸಾಧಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಎಲ್ಲಾ ಪ್ರಯತ್ನಗಳಿಂದ ಆಹಾರದ ಗುಣಮಟ್ಟ ಅಥವಾ ಅದರ ವಿತರಣಾ ಸವಾರರ ಸುರಕ್ಷತೆಗೆ ಧಕ್ಕೆಯಾಗದಂತೆ ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆ ಎಂದಿದೆ.
ಬೆಂಗಳೂರಿನಾದ್ಯಂತ 170 ಡೊಮಿನೊ ರೆಸ್ಟೋರೆಂಟ್‌ಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆ ಲಭ್ಯವಿರುತ್ತದೆ. ಕಂಪನಿಯು ತನ್ನ ವಿತರಣಾ ಸಿಬ್ಬಂದಿಗೆ ಅವರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ತರಬೇತಿಯನ್ನು ನೀಡುತ್ತಿದೆ ಎಂದು ಹೇಳಿಕೊಂಡಿದೆ. ಡೊಮಿನೋಸ್ ಅನ್ನು ನಿರ್ಹವಣೆ ಮಾಡುವ ಜ್ಯೂಬಿಲಂಟ್ ಫುಡ್ ವರ್ಕ್ ಈ ಬಗ್ಗೆ ಮಾಹಿತಿ ನೀಡಿದೆ.

"ಡೊಮಿನೋಸ್‌ನಲ್ಲಿ, ನಮ್ಮ ಗ್ರಾಹಕರಿಗೆ ಅತ್ಯುತ್ತಮವಾದ ಪಿಜ್ಜಾ ಸ್ವಾಧಿಸುವ ಅನುಭವವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಬೆಂಗಳೂರಿನಲ್ಲಿ 20 ನಿಮಿಷಗಳ ವಿತರಣೆಯನ್ನು ಪರಿಚಯಿಸಲಾಗುತ್ತಿದೆ. ವಿಶ್ಲೇಷಣೆಗಳು, ಒಳನೋಟಗಳು ಮತ್ತು ತಂತ್ರಜ್ಞಾನವನ್ನು ಬಳಸುವ ಮೂಲಕ ನಾವು ಈ ಸೇವೆ ನೀಡಲು ಸಮರ್ಥರಾಗಿದ್ದೇವೆ. ನಮ್ಮ ಗ್ರಾಹಕರು ಹಿಂದೆಂದಿಗಿಂತಲೂ ಬಿಸಿಯಾದ, ತಾಜಾ ಮತ್ತು ರುಚಿಯಾದ ಪಿಜ್ಜಾಗಳನ್ನು ಆಸ್ವಾಧಿಸಬಹುದು" ಎಂದು ಹೇಳಿಕೆ ತಿಳಿಸಲಾಗಿದೆ.
ಡಿಸೆಂಬರ್ 2022 ರಲ್ಲಿ, ಡೊಮಿನೊಸ್ ಭಾರತದಲ್ಲಿ ತನ್ನ ನೆಟ್‌ವರ್ಕ್ ಅನ್ನು ಗಮನಾರ್ಹವಾಗಿ ಹೆಚ್ಚಿಸಲು ಯೋಜಿಸಿದೆ ಎಂದು ಹೇಳಿಕೆ ನೀಡಿತ್ತು. ಡೊಮಿನೋಸ್ ಇಂಡಿಯಾ ಈಗಾಗಲೇ ಭಾರತದ 14 ನಗರಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆಯನ್ನು ಆರಂಭಿಸಿದೆ. ಈ ಯೋಜನೆಯ ಭಾಗವಾಗಿ, ಜುಬಿಲಂಟ್ ದೇಶಾದ್ಯಂತ ಇನ್ನೂ 1,300 ಮಳಿಗೆಗಳನ್ನು ಸೇರಿಸುವುದಾಗಿ ಹೇಳಿದೆ.












Click it and Unblock the Notifications