ವಿಮಾನಯಾನಕ್ಕೆ ಅವಕಾಶ: ಟಿಕೆಟ್ ಬುಕ್ಕಿಂಗ್ ಶುರು ಮಾಡಿದ ಗೋ ಏರ್
ಬೆಂಗಳೂರು, ಮೇ 23: ದೇಶಿಯ ವಿಮಾನ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಬೆನ್ನಲ್ಲೇ ಗೋ ಏರ್ (GoAir) ವಿಮಾನಯಾನ ಸಂಸ್ಥೆ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದೆ.
Recommended Video
ಜೂನ್ 1 ರಿಂದ ವಿಮಾನಯಾನ ಸೇವೆ ನೀಡಲು ನಮ್ಮ ಗೋ ಏರ್ ಸಂಸ್ಥೆ ಉತ್ಸುಕವಾಗಿದೆ ಮತ್ತು ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಶನಿವಾರ ಗೋ ಏರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.
ಶೀಘ್ರದಲ್ಲೇ ವಿಮಾನದಲ್ಲಿ ತನ್ನ ಗ್ರಾಹಕರನ್ನು ಸ್ವಾಗತಿಸಲು ಗೋ ಏರ್ ಎದುರು ನೋಡುತ್ತಿದೆ. ಪ್ರಯಾಣಿಕರು ಕೋವಿಡ್ 19 ತಡೆ ನಿಯಮಗಳಿಗೆ ಬದ್ದವಾಗಿ ಮೇ 25 ರಿಂದ ಮೇ 31 ರವರೆಗೆ ಟಿಕೆಟ್‌ಗಳನ್ನು ಕಾಯ್ದಿರಸಬಹುದಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಗೋ ಏರ್ ತನ್ನ ಮಾರ್ಪಡಿಸಿದ ವೇಳಾಪಟ್ಟಿಯನ್ನು ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಿದೆ ಮತ್ತು ಅನುಮೋದನೆಯನ್ನು ಪಡೆದುಕೊಂಡಿದೆ, ಸದ್ಯ ಮೂರನೇ ಒಂದು ಭಾಗದಷ್ಟು ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಕೋವಿಡ್ ತಡೆಗಾಗಿ ಸರ್ಕಾರ ಹಾಗೂ ಸಮಾಜದ ಜೊತೆ ಸಂಸ್ಥೆ ಒಟ್ಟಾಗಿ ಕೆಲಸ ಮಾಡುತ್ತದೆ ಎಂದು ಗೋ ಏರ್ ಪ್ರಕಟಣೆ ತಿಳಿಸಿದೆ.












Click it and Unblock the Notifications