ಖಡಕ್ ಆಫೀಸರ್ ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್
ಬೆಂಗಳೂರು, ಮಾ.17: ಕೋಲಾರ ಜಿಲ್ಲಾಧಿಕಾರಿಯಾಗಿ ಡಿಕೆ ರವಿ ಅವರು ಸಣ್ಣ ವಯಸ್ಸಿನಲ್ಲೇ ಅಧಿಕಾರವಹಿಸಿಕೊಂಡಾಗ ಮೂಗು ಮುರಿದವರೇ ಹೆಚ್ಚು ಮಂದಿ. ಅದರೆ, ದಕ್ಷತೆಯಿಂದ ಕೋಲಾರ ಜನ ಸಾಮಾನ್ಯರ ಪ್ರೀತಿ ಗಳಿಸಿ ಅಧಿಕಾರಿಯಾಗಿ ಕ್ಲೀನ್ ರೆಕಾರ್ಡ್ ಹೊಂದಿರುವ ರವಿ ಅವರ ವೃತ್ತಿ ಬದುಕಿನತ್ತ ಕಿರು ನೋಟ ಇಲ್ಲಿದೆ.
ಕೋಲಾರ ಡಿಸಿಯಾಗಿ ಜನಪ್ರಿಯತೆ ಗಳಿಸಿದ್ದ ರವಿ ಅವರು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾಗಿ ವರ್ಗಗೊಂಡ ಮೇಲೂ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದರು. [ರವಿ ಪ್ರಕರಣ ಸಿಬಿಐಗೆ ವಹಿಸಿ: ಪ್ರಧಾನಿಗೆ ಪತ್ರ]
Since IAS DK Ravi raided Home Minister George's Realty company, no one will be satisfied with CID investigation as he heads the police Dept.
— Vishweshwar Bhat (@VishweshwarBhat) March 17, 2015 ತೆರಿಗೆ ವಂಚಿಸಿದ್ದ ರಿಯಲ್‌ಎಸ್ಟೇಟ್ ಕಂಪನಿಗಳ ಮೇಲೆ ದಾಳಿ ನಡೆಸಿದ್ದರು. ಇದೇ ಅವರ ಸಾವಿಗೆ ಕಾರಣವಾಗಿದೆ ಎಂಬ ಚರ್ಚೆ ನಡೆಯುತ್ತಿದೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]
ಡಿಕೆ ರವಿ ಹಿನ್ನೆಲೆ : ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರು ದುರ್ಗ ಹೋಬಳಿ ದೊಡ್ಡಕೊಪ್ಪಲು ಗ್ರಾಮದ ಡಿಕೆ ರವಿ ಅವರು ಕೃಷಿ ಕುಟುಂಬದಿಂದ ದೇಶಕ್ಕೆ ಸಿಕ್ಕ ಕೊಡುಗೆ. ತೆರಿಗೆ ವಂಚಕರಿಗೆ ಸಿಂಹ ಸ್ವಪ್ನವಾಗಿದ್ದ ಡಿಕೆ ರವಿ ಅವರು ಬೆಂಗಳೂರಿನಲ್ಲಿ ಡಿಸೆಂಬರ್ 2014ರಿಂದ ಮಾರ್ಚ್ ತಿಂಗಳ ಆರಂಭದವರೆಗೂ ನಡೆಸಿದ ದಾಳಿಯ ವಿವರಗಳು ಇಲ್ಲಿದೆ: [ಡಿಕೆ ರವಿ ಸಾವು : ಪ್ರಮುಖ ಬೆಳವಣಿಗೆಗಳು]

ವಿದ್ಯೆಯಲ್ಲೂ ಪ್ರಥಮ, ಜನ ಮನ್ನಣೆಗೂ ಪ್ರಥಮ
* ಬೆಂಗಳೂರು ಕೃಷಿ ವಿ.ವಿ.ಯಲ್ಲಿ ಕೃಷಿ ಪದವಿ ಪಡೆದು, ಆ ಬಳಿಕ ದಿಲ್ಲಿಯಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ(ಐಎಆರ್‌ಐ)ಯಲ್ಲಿ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
* ಐಎಎಸ್ ಪರೀಕ್ಷೆ ಪಾಸು ಮಾಡಿ 2009ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿ ರಾಜ್ಯ ಸೇವೆಗೆ ಆಗಮಿಸಿದರು.
* 31/08/2009 ರಿಂದ ಜನ ಸೇವೆಗೆ ನಿಂತ ರವಿ ಮೊದಲಿಗೆ ಮುಸ್ಸೌರಿಯಲ್ಲಿ ತರಬೇತಿ ಪಡೆದರು.
*Identity No: 01KN108K03.

2011ರಿಂದ ಜನ ಸೇವೆಯಲ್ಲಿ ನಿರತರಾಗಿದ್ದ ರವಿ
* ಕಲಬುರಗಿ ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿ, 29/08/2011 ರಿಂದ 31/12/2012
* ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. 29/01/2013 ರಿಂದ 10/08/2013.
* ಕೋಲಾರದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ 10/08/2013 ರಿಂದ 29/10/2014.
* ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾಗಿ 29/10/2014 ರಿಂದ ಕಾರ್ಯ ನಿರ್ವಹಿಸುತ್ತಿದ್ದರು.

ಯಾರು ಮಾಡದ ಸಾಧನೆ ಮಾಡಿದ ರವಿ
* ಸಾಮಾಜಿಕ ಅಸಮಾನತೆ, ಸರಕಾರದ ಹಣದ ಸಮರ್ಪಕ ಬಳಕೆ, ಭ್ರಷ್ಟಾಚಾರದ ವಿರುದ್ಧ ನಿಷ್ಠುರವಾಗಿದ್ದ ಡಿ.ಕೆ. ರವಿ ಬಡವರ ಪರ ಅಪಾರ ಕಳಕಳಿ ಹೊಂದಿದ್ದರು.
* ಕೋಲಾರ ಜಿಲ್ಲೆಯ ಪ್ರಭಾವಿ ಶಾಸಕರು, ಸಂಸದರಿಗೆ ಸೇರಿದ 200ಕ್ಕೂ ಅಧಿಕ ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿ ತೆರವಿಗಾಗಿ ರವಿ ಹೋರಾಟ ನಡೆಸಿದ್ದಕ್ಕೆ ವರ್ಗಾವಣೆಗೊಂಡರು.
* ರವಿ ವರ್ಗಾವಣೆ ಖಂಡಿಸಿ, ಕೋಲಾರ ಜಿಲ್ಲೆ ಬಂದ್ ಆಚರಿಸಿತ್ತು.
* ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ತಳಮಟ್ಟಿನಿಂದ ಭ್ರಷ್ಟತನ ಮಟ್ಟ ಹಾಕಿದ್ದರು. ದಲಿತರು ಹಾಗೂ ಸವರ್ಣೀಯರ ನಡುವಿನ ಸಂಘರ್ಷವನ್ನು ತಗ್ಗಿಸಿ ಜನ ಸಾಮಾನ್ಯರೊಡನೆ ಕಲೆತು ಬೆರೆತಿದ್ದು ಕೇವಲ ತೋರಿಕೆಗಾಗಿ ಅಲ್ಲ ಎಂಬುದು ಗಮನಾರ್ಹ.

ಡಿಸೆಂಬರ್ ತಿಂಗಳಿನಲ್ಲಿ ನಡೆದ ದಾಳಿಗಳು
ಡಿಕೆ ರವಿ ನಡೆಸಿದ ದಾಳಿಗಳು: ತೆರಿಗೆ ವಂಚಕರಿಗೆ ಸಿಂಹ ಸ್ವಪ್ನವಾಗಿದ್ದ ಡಿಕೆ ರವಿ ಅವರು ಬೆಂಗಳೂರಿನಲ್ಲಿ ಡಿಸೆಂಬರ್ 2014ರಿಂದ ಮಾರ್ಚ್ ತಿಂಗಳ ಆರಂಭದವರೆಗೂ ನಡೆಸಿದ ದಾಳಿಯ ವಿವರಗಳು ಇಲ್ಲಿದೆ:
* ರಾಜೇಶ್ ಎಕ್ಸ್ ಪೋರ್ಟ್ಸ್ ಲಿ 67 ಕಚೇರಿ (ಬೆಂಗಳೂರಿನಲ್ಲೇ 24 ಕಚೇರಿ ಮೇಲೆ ದಾಳಿ)
* ಅಂಡರ್ ಕವರ್ ಆಪರೇಷನ್ ಮೂಲಕ 33 ಚಿತ್ರಮಂದಿರಗಳು ತೆರಿಗೆ ಕಟ್ಟದೆ ಪ್ರದರ್ಶನ ಮಾಡುವುದನ್ನು ಪತ್ತೆ ಹಚ್ಚಿದರು.
* ಡಿ.13ರಿಂದ 14ರ ತನಕ ರಜನಿಕಾಂತ್ ಅಭಿನಯದ ಲಿಂಗಾ ಚಿತ್ರ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರದಲ್ಲಿ ಕಾರ್ಯಾಚರಣೆ ನಡೆಸಿದ್ದರು.

ಜನವರಿಯಿಂದ ಫೆಬ್ರವರಿಯ ಕಾರ್ಯಾಚರಣೆ
ಬೆಂಗಳೂರಿನಲ್ಲಿ ಡಿಸೆಂಬರ್ 2014ರಿಂದ ಮಾರ್ಚ್ ತಿಂಗಳ ಆರಂಭದವರೆಗೂ ನಡೆಸಿದ ದಾಳಿಯ ವಿವರಗಳು ಇಲ್ಲಿದೆ:
ಜನವರಿ 2015: ಸುಖ್ ಸಾಗರ್ ಶಾಪಿಂಗ್ ಮಾಲ್, ನ್ಯಾಷನಲ್ ಮಾರ್ಕೆಟ್, ಬಜಾಜ್ ಶಾಪಿಂಗ್ ಕಾಂಪ್ಲೆಕ್ಸ್, ಗಾಂಧಿನಗರ ಇಲ್ಲಿನ ಶೇ 70ರಷ್ಟು ಮಳಿಗೆಗಳು ಅಕ್ರಮ ಎಂದು ಸಾಬೀತು.
* ಫೆಬ್ರವರಿ 2015: ನಿತೇಶ್ ಫಾರೆಸ್ಟ್ ಹಿಲ್ ಹಾಗೂ ಫ್ಲಷಿಂಗ್ ಮಿಡೌಸ್ ಮೇಲೆ ದಾಳಿ 10 ಕೋಟಿ ರು ದಂಡ. 400 ದಾಖಲೆ ವಶ

ಮಾರ್ಚ್ ನಲ್ಲಿ ನಡೆಸಿದ ಮಾರಕ ದಾಳಿ
* ಮಂತ್ರಿ, ಎಂಬೆಸಿ ಗ್ರೂಪ್ಸೇರಿದ್ದಂತೆ ಹಲವು ರಿಯಲ್ ಎಸ್ಟೇಟ್ ಕಂಪನಿ ಮೇಲೆ ದಾಳಿ.
* ಸಿಂಗಪುರ ಮೂಲದ ಅಸೆಟ್ಜ್ ಪ್ರಾಪರ್ಟಿ ಗ್ರೂಪ್ ನ ಎಸ್ ಇಜಡ್, ಐಟಿ ಪಾರ್ಕ್ ಕಚೇರಿ ಮೇಲೆ ದಾಳಿ 20 ಕೋಟಿ ರು ಸಂಗ್ರಹ.
* ಆರ್ಥಿಕ ಅವ್ಯವಹಾರಕ್ಕೆ ಉತ್ತರಿಸುವಂತೆ 434 ಬಿಲ್ಡರ್ಸ್ ಗಳಿಗೆ ನೋಟಿಸ್, ಇದರಲ್ಲಿ ಗೃಹ ಸಚಿವ ಕೆಜೆ ಜಾರ್ಜ್ ಅವರ ಸಂಸ್ಥೆಯೂ ಸೇರಿದೆ.
* ಬಿಬಿಎಂಪಿ ವಾರ್ಡ್ 152 ನ ಅವ್ಯವಹಾರ ಬಯಲಿಗೆಳೆದರು. ಒಟ್ಟಾರೆ 129 ಕೋಟಿ ರು ತೆರಿಗೆ ವಂಚನೆ ತಪ್ಪಿಸಿದ್ದ ರವಿ ಕಾರ್ಯಾಚರಣೆ ಸದಾ ಅನುಕರಣೀಯ
-
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್












Click it and Unblock the Notifications