Final E-Khata: ಅಂತಿಮ ಇ - ಖಾತಾ ಪಡೆಯಲು ಬೇಕಾಗುವ ದಾಖಲೆಗಳು, ಶುಲ್ಕ ಎಷ್ಟು ?
Final E-Khata: ಬೆಂಗಳೂರಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿಯು ಅಂತಿಮ ಇ -ಖಾತಾವನ್ನು ನೀಡುತ್ತಿದೆ. ಈ ವಿಷಯದಲ್ಲಿ ಜನರಿಗೆ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಹಲವು ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದೆ.
ಇದೀಗ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿನ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಖಾತಾ ಸೌಲಭ್ಯವನ್ನು ವಿಸ್ತರಿಸಲಾಗಿದೆ. ನಗರದ ಸಾರ್ವಜನಿಕರು ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂತಿಮ ಇ-ಖಾತಾ ಪಡೆಯುವುದಕ್ಕೆ ಬೆಂಗಳೂರು ಒನ್ ಕೇಂದ್ರದ ಮೂಲಕವೂ ಇನ್ಮುಂದೆ ಸಹಾಯವನ್ನು ಪಡೆಯಬಹುದು. ಹಾಗಾದರೆ ಇದಕ್ಕೆ ಬೇಕಾಗುವ ದಾಖಲೆಗಳು ಏನು, ತಗಲುವ ಶುಲ್ಕವೇನು ಎನ್ನುವ ವಿವರ ಇಲ್ಲಿದೆ.

ಪ್ರತಿ ಆಸ್ತಿಗೆ ಬೇಕಾಗುವ ಶುಲ್ಕ:
* ಬೆಂಗಳೂರು ಒನ್ ಕೇಂದ್ರದಲ್ಲಿ 45 ರೂಪಾಯಿ ಶುಲ್ಕ ಮತ್ತು ಪ್ರತಿ ದಾಖಲೆಯ ಪುಟ ಸ್ಕ್ಯಾನ್ ಮಾಡಲು 5 ರೂಪಾಯಿ ಪಾವತಿ ಮಾಡಬೇಕು.
* ಬಿಬಿಎಂಪಿಗೆ 125 ರೂಪಾಯಿ(ಅಂತಿಮ ಇ-ಖಾತಾ ಮುದ್ರಣಕ್ಕೆ ಸಿದ್ಧವಾದಾಗ ಮಾತ್ರ) ಪಾವತಿ ಮಾಡಬೇಕು.
ಕೆಳಗಿನ ದಾಖಲೆಗಳ ಪ್ರತಿಯೊಂದಿಗೆ ನೀವು ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಬೇಕು(ಇವುಗಳಲ್ಲಿ ಕೆಲವು ಪ್ರಮುಖ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಸ್ಕ್ಯಾನ್ ಮಾಡಿ ಮಾತ್ರ ಬೆಂಗಳೂರು ಒನ್‌ನಲ್ಲಿ ಸಲ್ಲಿಸಬೇಕಾಗುತ್ತದೆ. ದಾಖಲೆಗಳನ್ನು ನೀಡುವ ಅಗತ್ಯವಿಲ್ಲ) ಎಂದು ಬಿಬಿಎಂಪಿ ತಿಳಿಸಿದೆ.

ಅಂತಿಮ ಇ - ಖಾತಾಗೆ ಬೇಕಾಗುವ ದಾಖಲೆಗಳು
(1) ನಿಮ್ಮ ಆಸ್ತಿ ತೆರಿಗೆ ರಶೀದಿ
(2) ನಿಮ್ಮ ಮಾರಾಟ ಅಥವಾ ನೋಂದಾಯಿತ ಪತ್ರ
(3) ಎಲ್ಲಾ ಮಾಲೀಕರ ಆಧಾರ್ ಕಾರ್ಡ್
(4) ಬೆಸ್ಕಾಂ ಬಿಲ್
(5) ಜಲಮಂಡಳಿ ಬಿಲ್ (ನೀವು ಕಾವೇರಿ ಸಂಪರ್ಕವನ್ನು ಹೊಂದಿದ್ದರೆ)
(6) ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ (ಇದರ ದಾಖಲೆ ಹೊಂದಿದ್ದರೆ)
(7) ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ(ಇದರ ದಾಖಲೆ ಹೊಂದಿದ್ದರೆ)
(8) ಡಿಸಿ ಪರಿವರ್ತನೆ (ಇದರ ದಾಖಲೆ ಹೊಂದಿದ್ದರೆ)
(9) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ಅಥವಾ ಕರ್ನಾಟಕ ಹೌಸಿಂಗ್ ಬೋರ್ಡ್(KHB) ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಹಂಚಿಕೆ ಪತ್ರ (ಇದು ನಿಮ್ಮ ಪ್ರಕರಣಕ್ಕೆ ಅನ್ವಯಿಸಿದರೆ ಮತ್ತು ನೀವು ಇದರ ದಾಖಲೆ ಹೊಂದಿದ್ದರೆ)
ನೀವು ಮೇಲಿನ ದಾಖಲೆಗಳನ್ನು ಬೆಂಗಳೂರು ಒನ್ ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿಲ್ಲ. ಆದರೆ, ಆನ್‌ಲೈನ್ ವಿವರಗಳನ್ನು ಸಲ್ಲಿಸಲು ಅವರಿಗೆ ತೋರಿಸಿ ಮತ್ತು ನಂತರ ಅವುಗಳನ್ನು ಹಿಂದಕ್ಕೆ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ವತಃ ನೀವೇ ಇ-ಖಾತಾ ಪಡೆಯಬಹುದು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಸರಳವಾಗಿಸುವ ಉದ್ದೇಶದಿಂದ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ತರಬೇತಿ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಬಿಬಿಎಂಪಿ ಅಪ್ಲೋಡ್ ಮಾಡಿದೆ. ಇದನ್ನು ನೋಡಿಕೊಂಡು ಸ್ವತಃ ಇ-ಖಾತಾಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಿಡಿಯೋ ಲಿಂಕ್ ಇಲ್ಲಿದೆ
ಕನ್ನಡ: https://youtu.be/JR3BxET46po?si=jDoSKqy2V1IFUpf6
ಇಂಗ್ಲೀಷ್: https://youtu.be/GL8CWsdn3wo?si=Zu_EMs3SCw5-wQwT
ಬಿಬಿಎಂಪಿಯ ಅಧಿಕೃತ ಯುಟ್ಯೂಬ್ ಚಾನಲ್ https://youtube.com/@bbmpcares?si=YStwr7xLhX5aRxFT ನಲ್ಲಿಯೂ ಇ-ಖಾತಾ ಪಡೆಯುವ ವೀಡಿಯೋವನ್ನು ವೀಕ್ಷಿಸಬಹುದು ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications