Get Updates
Get notified of breaking news, exclusive insights, and must-see stories!

ಶಾಂತಿನಗರದಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವೈದ್ಯ ಸಾವು

ಬೆಂಗಳೂರು, ಫೆಬ್ರವರಿ 28: ಶಾಂತಿನಗರ ಬಸ್ ನಿಲ್ದಾಣದಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಇಳಿಯಲು ಹೋಗಿ ವೈದ್ಯರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಬಸ್ ಚಾಲಕನನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತ ವ್ಯಕ್ತಿ ಡಾ. ಅಂದನೂರು ಚಿಂತನ್ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬೋಧಕರಾಗಿ ಕೆಲಸದಲ್ಲಿದ್ದರು. ಇವರು ಮೂಲತಃ ದಾವಣಗೆರೆಯವರಾಗಿದ್ದು ಎಂಡಿ ವ್ಯಾಸಂಗ ಮಾಡಲು ಯೋಜಿಸಿದ್ದರೆಂದು ತಿಳಿದುಬಂದಿದೆ.

ಗರದ ಶಾಂತಿನಗರ ಬಸ್ ನಿಲ್ದಾಣದಲ್ಲಿ ಚಲಿಸುತ್ತಿರುವ ಬಿಎಂಟಿಸಿ ಬಸ್‌ನಿಂದ ಏಕಾಏಕಿ ಇಳಿಯಲು ಮುಂದಾದ 26 ವರ್ಷದ ಎಂಬಿಬಿಎಸ್ ವೈದ್ಯ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.

Doctor Slips From Moving Bus Near Shantinagar Bus Stop

ಮಧ್ಯಾಹ್ನ 2.45 ರ ಸುಮಾರಿಗೆ ಚಿಂತನ್ ಶಿವಾಜಿನಗರಕ್ಕೆ ತೆರಳುತ್ತಿದ್ದ ಬಸ್ ಹತ್ತಿದಾಗ ಈ ಘಟನೆ ಸಂಭವಿಸಿದೆ ಅವರು ಮೆಜೆಸ್ಟಿಕ್‌ಗೆ ಟಿಕೆಟ್ ಕೇಳಿದಾಗ, ಕಂಡಕ್ಟರ್ ಈ ಬಸ್ ಮೆಜೆಸ್ಟಿಕ್ ಗೆ ತೆರಳಲ್ಲ ಎಂದಿದ್ದಾರೆ. ಆಗ ಚಲಿಸುತ್ತಿದ್ದ ಬಸ್ಸಿನಿಂದ ಚಿಂತನ್ ಕೆಳಗಿಳಿಯಲು ಪ್ರಯತ್ನಿಸಿದ್ದಾರೆ. ಆದರೆ ಆಯತಪ್ಪಿ ಜಾರಿ ಬಿದ್ದಿದ್ದಾರೆ. ಆದರೆ ಚಾಲಕ ಪ್ರಯಾಣಿಕ ಬಿದ್ದಿದ್ದನ್ನು ಗಮನಿಸದೆ ಬಸ್ ಚಲಾಯಿಸಿದ್ದರಿಂದ ಬಸ್ಸಿನ ಹಿಂಭಾಗದ ಚಕ್ರ ಚಿಂತನ್ ಅವರ ತಲೆ ಮೇಲೆ ಉರುಳಿ ಹೋಗಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದರು" .

ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿಯಾಗಿದ್ದ ವಿಲ್ಸನ್ ಗಾರ್ಡನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ವೇಳೆ ನಿಯಮ ಬಾಹಿರವಾಗಿ ಬಸ್ಸಿನ ಶೋರ್ ತೆರೆದ ಕಾರಣ ಚಾಲಕ ಕಗ್ಗಲಿಪುರ ನಿವಾಸಿ ತಾಯಣ್ಣ ಬಿ. ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.

ಘಟನೆ ನಡೆದ ನಂತರ ಪ್ರಯಾಣಿಕರು ಕಿರುಚಿಕೊಂಡಿದ್ದಾರೆ. ಆಗ ಬಸ್ ನಿಲ್ಲಿಸಿದ ಚಾಲಕ ಚಿಂತನ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾನೆ. ಆದರೆ ಚಕ್ರ ಚಿಂತನ್ ತಲೆ ಮೇಲೆ ಹರಿದ ಪರಿಣಾಮ ಅವರಾಗಲೇ ಸಾವನ್ನಪ್ಪಿರುವುದು ಗೊತ್ತಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+