Pavithra Gowda: ರಾಣಿಯಂತೆ ಮೆರೆದಿದ್ದ ಪವಿತ್ರಾ ಗೌಡಳ ಪರಿಸ್ಥಿತಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೇಗಿದೆ ಗೊತ್ತಾ?

Pavithra Gowda: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ನಟ ದರ್ಶನ್‌ & ಪಟಾಲಂ ಗ್ಯಾಂಗ್‌ ಜೈಲು ಸೇರಿದೆ. ಇನ್ನು ಈ ಪೈಕಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎ1 ಆರೋಪಿ ಪವಿತ್ರಾಗೌಡಳ ಪರಿಸ್ಥಿತಿ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಜೈಲು ಸೇರಿದಾಗಿನಿಂದ ನಟ ದರ್ಶನ್‌ ಯಾವ ಬಳಿಯೂ ಮೌನವಾಗಿದ್ದು, ಸ್ವಲ್ಪ ದಿನಗಳ ಬಳಿಕ ಜೈಲಿನಲ್ಲೆ ಇಬ್ಬರನ್ನು ಹೊಸ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದರು. ಆಗಿನಿಂದ ದರ್ಶನ್‌ ಮುಖದಲ್ಲಿ ನಗು ಮೂಡಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಆ ಇಬ್ಬರು ಹೊಸ ಸ್ನೇಹಿತರೇ ಪುಸ್ತಕ ಮತ್ತು ಭಜನೆ ಆಗಿದ್ದವು. ಮತ್ತೊಂದೆಡೆ ದರ್ಶನ್‌ ವ್ಯಾಯಾಮ, ಡಿಪ್ಸ್‌ ಅನ್ನು ಕೂಡ ಶುರು ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

Do you know how is Pavithra Gowda s condition in Parappana Agrahara Jail

ಮತ್ತೊಂದೆಡೆ ನಟ ದರ್ಶನ್‌ನನ್ನು ಜೈಲಿನಿಂದ ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ಯಾವುದಕ್ಕೂ ಕ್ಯಾರೆ ಅನ್ನದೇ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸುವ ಮೂಲಕ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಇನ್ನು ಎ1 ಆರೋಪಿ ಪವಿತ್ರಾ ಗೌಡ ಜೈಲಿಗೆ ಬರುವ ಮುನ್ನ ಇವರಿಗೆ ಕೈಗೊಬ್ಬರು, ಕಾಲಿಗೊಬ್ಬರು ಇದ್ದು, ಈ ಮೂಲಕ ಅವರು ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು. ಆದರೆ ಇದೀಗ ಜೈಲು ಕೈದಿಗಳೊಟ್ಟಿಗೆ ಜೀವನ ಮಾಡುವಂತಹ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 21 ದಿನಗಳು ಆಗಿದ್ದು, ಐಷಾರಾಮಿ ಜೀವನ ಸಾಗಿಸಿದ ಇವರಿಗೆ ಇದೀಗ ಖಿನ್ನತೆಯಿಂದ ಒದ್ದಾಡುತ್ತಿದ್ದಾರಂತೆ. ಆದ್ದರಿಂದ ಈ ಖಿನ್ನತೆಯಿಂದ ಹೊರಬರಲು ನಟ ದರ್ಶನ್ ಜೈಲಿನಲ್ಲೇ ಯೋಗಾಭ್ಯಾಸ, ಪುಸ್ತಕ ಓದುವುದರ ಕಡೆ ಗಮನಹರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರ ನಡುವೇ ಆಗಾಗ ದರ್ಶನ್‌ ನೋಡಲು ಕುಟುಂಬಸ್ಥರು ಜೈಲಿಗೆ ಭೇಟಿ ನೀಡುತ್ತಿದ್ದಾರೆ.

ಮತ್ತೊಂದೆಡೆ ಐಷಾರಾಮಿ ಜೀವನ ಸಾಗಿಸುತ್ತಿದ್ದ ಪವಿತ್ರಗೌಡ ಇದೀಗ ಜೈಲಿನಲ್ಲಿ ಕ್ಷಣ ಕ್ಷಣಕ್ಕೂ ಪರದಾಡುತ್ತಿದ್ದಾರೆ. ಅಲ್ಲಿನ ಸಹ ಕೈದಿಗಳ ಸಹವಾಸದಿಂದ ಮಾನಸಿಕವಾಗಿ ಕುಗ್ಗಿಹೋದಿದ್ದು, ಆರೋಗ್ಯದಲ್ಲಿ ಕೂಡ ತುಸು ಏರುಪೇರಾಗಿದ್ದು, ತೀವ್ರ ಸುಸ್ತು ಬಳಲಿಕೆಯಿಂದ ಜೈಲಿನೊಳಗಿರುವ ಆಸ್ಪತ್ರೆಗೆ ಸೇರಿದ್ದು, ಕಳೆದ 2 ದಿನಗಳಿಂದ ಅಲ್ಲೇ ಚಿಕಿತ್ಸೆ ಪಡಯತ್ತಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+