ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ; ಇದ್ದಕ್ಕಿದ್ದಂತೆ ಒಂದಾದ ಡಿಕೆಶಿ, ಸಿದ್ದರಾಮಯ್ಯ

ಬೆಂಗಳೂರು, ಮಾರ್ಚ್ 02: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸ್ಫೋಟದ ಬೆನ್ನಲ್ಲಿಯೇ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಮಾಧ್ಯಮಗಳಲ್ಲಿ ಜಾರಕಿಹೊಳಿ ಸಿಡಿ ವಿಚಾರ ಬಹಿರಂಗವಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

ಕೆಲವೇ ದಿನಗಳ ಹಿಂದೆ ರಾಜಕೀಯ ವೈಮನಸ್ಸಿನಿಂದ ಮುಖ ತಿರುಗಿಸಿಕೊಂಡಿದ್ದ ನಾಯಕರು ಈಗ ಏಕಾಏಕಿ ಒಂದಾಗಿದ್ದಾರೆ. ಜಾರಕಿಹೊಳಿಯ ಈ ಪ್ರಕರಣ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರವಾದಂತೆ ತೋರುತ್ತಿದೆ.

DK Shivakumar Rushes To Siddaramaiah House To Discuss Ramesh Jarkiholi SEX CD Row

ಜಾರಕಿಹೊಳಿ ಸಿಡಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಸರಣಿ ಟ್ವೀಟ್‌ಗಳನ್ನು ಮಾಡಿ ಟೀಕಿಸಲು ಆರಂಭಿಸಿದೆ. ಏನ್ರಿ @BJP4Karnataka ಇದೆಲ್ಲ?. ಏನು ಹೇಳ್ತೀರಾ ಅದರ ಬಗ್ಗೆ?" ಎಂದು ಕೇಳಿದೆ. "ಯುವ ಸಮುದಾಯಕ್ಕೆ ಉದ್ಯೋಗ ಕೊಡಿ ಎಂದರೆ ಉದ್ಯೋಗ ಕೇಳಿ ಬಂದವರಿಗೆ ನೀವು ಏನನ್ನು ಕೊಡಲು ಹೊರಟಿದ್ದೀರಿ" ಎಂದು ಪ್ರಶ್ನೆ ಮಾಡಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿ ಬಿಜೆಪಿ ಸೇರಿದ್ದ ರಮೇಶ್ ಜಾರಕಿಹೊಳಿ ಬಗ್ಗೆ ಸಹಜವಾಗಿಯೇ ಇದ್ದ ಆಕ್ರೋಶ ಈಗ ಕಾಂಗ್ರೆಸ್‌ಗೆ ಅವಕಾಶವಾಗಿ ಬದಲಾಗಬಹುದಾಗಿದೆ. ಇದನ್ನೇ ಕಾಂಗ್ರೆಸ್ ತನ್ನ ಅಸ್ತ್ರವನ್ನಾಗಿ ಮಾಡಿಕೊಳ್ಳಲಿದೆ.

ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿಯನ್ನು ಮಂಗಳವಾರ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬಿಡುಗಡೆ ಮಾಡಿದ್ದಾರೆ. ಕೆಲಸ ಕೊಡಿಸುವ ನೆಪದಲ್ಲಿ ಸಚಿವರು ಯುವತಿಯನ್ನು ದೈಹಿಕವಾಗಿ ಬಳಸಿಕೊಂಡು ನಂತರ ಆಕೆಗೆ ಹಾಗೂ ಆಕೆಯ ಮನೆಯವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದೂ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+