ಬಂಧನದಿಂದ ರಕ್ಷಣೆ: ಮಧ್ಯಾಹ್ನ ಡಿಕೆ ಶಿವಕುಮಾರ್ ಭವಿಷ್ಯ ನಿರ್ಧಾರ
ಬೆಂಗಳೂರು, ಆಗಸ್ಟ್ 30: ಜಾರಿ ನಿರ್ದೇಶನಾಲಯದ ಬಂಧನದಿಂದ ರಕ್ಷಣೆ ನೀಡುವಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಮಧ್ಯಾಹ್ನ ವಿಚಾರಣೆಗೆ ಎತ್ತಿಕೊಳ್ಳಲಿದೆ.
ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ರಾತ್ರಿ ಹತ್ತು ಗಂಟೆಗೆ ಸಮನ್ಸ್ ನೀಡಿದೆ. ಮಧ್ಯಾಹ್ನ ಒಂದು ಗಂಟೆಗೆ ವಿಚಾರಣೆಗೆ ಬರುವಂತೆ ಸೂಚಿಸಿದೆ. ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಬೇಕು. ಅಲ್ಲಿಯವರೆಗೆ ಬಂಧಿಸದಂತೆ ರಕ್ಷಣೆ ನೀಡಿ ಎಂದು ಡಿಕೆ ಶಿವಕುಮಾರ್ ಅವರ ವಕೀಲರಾದ ಬಿ.ವಿ. ಆಚಾರ್ಯ ಕೋರಿದರು.
ನಾನು ಕೊಲೆ ಮಾಡಿಲ್ಲ, ರೇಪ್ ಮಾಡಿಲ್ಲ: ಡಿಕೆ ಶಿವಕುಮಾರ್ ಕಿಡಿ
ಈ ಹಿಂದೆ ನೀಡಿದಂತೆಯೇ ಮಧ್ಯಂತರ ರಕ್ಷಣೆಯನ್ನು ಮುಂದುವರಿಸಿ ಎಂದು ಅವರು ಮನವಿ ಮಾಡಿದರು.
ಸನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಪೀಠದಲ್ಲಿ ವಿಚಾರಣೆ ನಡೆಯಿತು. ಈ ಅರ್ಜಿಯ ವಿಚಾರಣೆಗೆ ಒಪ್ಪಿಕೊಂಡ ನ್ಯಾಯಪೀಠ, ಕಲಾಪದ ಕೊನೆಯಲ್ಲಿ ಮಧ್ಯಾಹ್ನ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಜಾರಿ ನಿರ್ದೇಶನಾಲಯದಿಂದ ಡಿ.ಕೆ.ಶಿವಕುಮಾರ್ಗೆ ಸಮನ್ಸ್
ಡಿಕೆ ಶಿವಕುಮಾರ್ ಅವರ ಮಧ್ಯಂತರ ಬಂಧನದಿಂದ ರಕ್ಷಣೆಗೆ ಕೋರಿದ್ದ ಅರ್ಜಿಗೆ ಇ.ಡಿ ಪರ ವಕೀಲರಾದ ಎಂ.ಬಿ. ನರಗುಂದ ಆಕ್ಷೇಪ ವ್ಯಕ್ತಪಡಿಸಿದರು. ಹೈಕೋರ್ಟ್ ತೀರ್ಪು ನೀಡಿದ ನಂತರ ಮಧ್ಯಂತರ ಆದೇಶ ಬೇಡ. ಇಡಿ ಮುಂದೆಯೇ ಮನವಿ ಸಲ್ಲಿಸಬಹುದಿತ್ತಲ್ಲ ಎಂದ ಅವರು, ಅರ್ಜಿಯನ್ನು ತಿರಸ್ಕರಿಸುವಂತೆ ಕೋರಿದರು.