ಇಂದಿನ ವಿಚಾರಣೆ ಮುಗಿದಿದೆ, ನಾಳೆ ಬರಲು ಹೇಳಿಲ್ಲ: ಡಿಕೆಶಿ
ಬೆಂಗಳೂರು, ಆಗಸ್ಟ್ 07: ಆದಾಯ ತೆರಿಗೆ(ಐ.ಟಿ) ಇಲಾಖೆ ಕಚೇರಿಯಲ್ಲಿ ಸೋಮವಾರ ಸುಮಾರು ಮೂರು ತಾಸು ನಡೆದ ಸಚಿವ ಡಿ.ಕೆ ಶಿವಕುಮಾರ್ ಅವರ ವಿಚಾರಣೆ ಅಂತ್ಯಗೊಂಡಿದೆ.
"ಇಂದು (ಸೋಮವಾರ) ಐಟಿ ಅಧಿಕಾರಿಗಳು ಬರಲು ಹೇಳಿದ್ದರು. ಅದರಂತೆ ಬಂದಿದ್ದೇನೆ. ಇಂದಿನ ವಿಚಾರಣೆ ಮುಗಿದಿದೆ, ನಾಳೆ ಬರಲು ಹೇಳಿಲ್ಲ. ಕರೆದಾಗ ಬರುವೆ ಎಂದು ಹೇಳಿ ಬಂದಿದ್ದೇನೆಂದು" ಇಂಧನ ಸಚಿವ ಡಿ.ಕೆ ಶಿವಕುಮಾರ್ ವಿಚಾರಣೆ ಮುಗಿಸಿಕೊಂಡು ಹೊರ ಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಆಗಸ್ಟ್ 2ರಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರದಲ್ಲಿರುವ ನಿವಾಸ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆದಿತ್ತು. ಮೈಸೂರಿನಲ್ಲಿರುವ ಡಿ.ಕೆ.ಶಿವಕುಮಾರ್ ಮಾನವ ಮನೆಯ ಮೇಲೆಯೂ ದಾಳಿ ನಡೆಸಲಾಗಿತ್ತು.
ಶನಿವಾರ ಬೆಳಗ್ಗೆ ದಾಳಿ ಮುಕ್ತಾಯಗೊಂಡಿದ್ದು, ಅಧಿಕಾರಿಗಳು ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದರು.
Karnataka: DK Shivakumar leaves IT Dept office in Bengaluru after being questioned for almost 4 hours. pic.twitter.com/em69SuT8HV
— ANI (@ANI_news) August 7, 2017
ಡಿ.ಕೆ.ಶಿವಕುಮಾರ್ ಅವರ ವಿದೇಶ ಪ್ರವಾಸಕ್ಕೆ ನಿರ್ಬಂಧ ವಿಧಿಸಿರುವ ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಸಮನ್ಸ್ ಹಿನ್ನಲೆಯಲ್ಲಿ ಇಂದು ಸಚಿವರು ವಿಚಾರಣೆಗೆ ಹಾಜರಾಗಿದ್ದರು.












Click it and Unblock the Notifications