ಬಿಜೆಪಿ ಎಷ್ಟು ಶಾಸಕರನ್ನಾದರೂ ಭೇಟಿ ಆಗಲಿ ಡೋಂಟ್ ಕೇರ್: ಡಿ.ಕೆ.ಶಿವಕುಮಾರ್
ಬೆಂಗಳೂರು, ಡಿಸೆಂಬರ್ 04: ಬಿಜೆಪಿಯ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಹೆದರುವುದಿಲ್ಲ ಎಂದ ಸಚಿವ ಡಿ.ಕೆ.ಶಿವಕುಮಾರ್ ಅವರು ಎಷ್ಟು ಜನ ಶಾಸಕರನ್ನಾದರೂ ಭೇಟಿ ಆಗಲಿ ಡೋಂಟ್ ಕೇರ್ ಎಂದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನೂರು ಜನ ಶಾಸಕರನ್ನು ಭೇಟಿ ಆಗಲಿ, ನೂರಾರು ಕೋಟಿ ಆಮಿಷ ಒಡ್ಡಲಿ ನಮಗೆ ಚಿಂತೆ ಇಲ್ಲ, ನಮ್ಮ ಶಾಸಕರಾರೂ ಬಿಜೆಪಿಗೆ ಹೋಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.
ಸರ್ಕಾರ ಉರುಳಿಸಲು ಬಿಜೆಪಿ ಬಹಳ ಪ್ರಯತ್ನ ಮಾಡುತ್ತಿದ್ದಾರೆ, ಬಿಜೆಪಿ ಅದೇನು ಪ್ರಯತ್ನ ಮಾಡುತ್ತದೆಯೋ ಮಾಡಲಿ, ಎಲ್ಲರಿಗೂ ಸಮಯ ಬರುತ್ತದೆ, ಸಮಯ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಶಾಸಕರೊಬ್ಬರಿಗೆ ಹಣ ಮತ್ತು ಅಧಿಕಾರದ ಆಮಿಷ ಒಡ್ಡುತ್ತಿರುವ ಆಡಿಯೋ ಲೀಕ್ ಆಗಿರುವ ಬಗ್ಗೆ ಮಾತನಾಡಿದ ಅವರು, ಆಡಿಯೋದಲ್ಲಿ ಮಾತನಾಡಿರುವ ಸರ್ಜಿತ್ ನನ್ನ ಪಿಎ ಅಲ್ಲ ಅದು ಶ್ರೀರಾಮುಲು ಅವರ ಪಿಎ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸಿ.ಟಿ.ರವಿ ಹಾಗೂ ಇತರ ಕೆಲವು ಬಿಜೆಪಿ ನಾಯಕರು ಆಡಿಯೋದಲ್ಲಿರುವ ಧದ್ವನಿ ಡಿ.ಕೆ.ಶಿವಕುಮಾರ್ ಅವರ ಆಪ್ತರದ್ದು ಎಂದು ಹೇಳಿದ್ದರು.
ಜನಾರ್ದನ ರೆಡ್ಡಿ ಜಿಂದಾಲ್ ಆಸ್ಪತ್ರೆಗೆ ಏಕೆ ಹೋಗಿದ್ದರು, ಶಾಸಕ ಅಶ್ವಥ್‌ನಾರಾಯಣ ಅವರು ಮೂರು ದಿನಗಳ ಹಿಂದೆ ಬ್ರಿಗೆಡ್ ಟವರ್ಸ್‌ನಲ್ಲಿ ಯಾರನ್ನು ಭೇಟಿ ಮಾಡಿದ್ದರು, ರಾಮುಲು ಯಾಕೆ ಸುರ್ಜಿತ್ ಅನ್ನು ಹಗಲು, ರಾತ್ರಿ ಹಿಂದೆ ಇಟ್ಟುಕೊಂಡು ಓಡಾಡುತ್ತಿದ್ದಾರೆ ಎಲ್ಲವೂ ತಿಳಿದಿದೆ. ಸಿ.ಟಿ.ರವಿ ಮತ್ತು ಜಗದೀಶ್ ಶೆಟ್ಟರ್‌ಗೆ ಅವೆಲ್ಲಾ ತಿಳಿದಿಲ್ಲ ಎಂದು ಹೇಳಿದರು.












Click it and Unblock the Notifications