ಹೈಕಮಾಂಡ್‌ಗೆ ಹಣ ನೀಡಿಲ್ಲ, ಹವಾಲಾ ಬಗ್ಗೆ ಗೊತ್ತೇ ಇಲ್ಲ: ಡಿಕೆಶಿ
ಬೆಂಗಳೂರು, ಜೂನ್ 22: ಹವಾಲಾ ದಂಧೆಯಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಬಗ್ಗೆ ಸಿಟ್ಟಾಗಿರುವ ಡಿ.ಕೆ.ಶಿವಕುಮಾರ್ ಹವಾಲಾ ಹಾಗೂ ಹೈಕಮಾಂಡ್‌ಗೆ ಕಪ್ಪ ನೀಡಿರುವ ಆರೋಪವನ್ನು ಸಾರಾ ಸಗಟಾಗಿ ಸಚಿವ ನಿರಾಕರಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಆದ ಐಟಿ ರೇಡ್‌ನಲ್ಲಿ ಡೈರಿಯೊಂದು ಪತ್ತೆಯಾಗಿತ್ತು ಹಾಗೂ ಅವರ ಆಪ್ತರ ಅಪಾರ್ಟ್‌ಮೆಂಟ್‌ನಲ್ಲಿ ಡಿಕೆಶಿ ಅವರದ್ದೇ ಎನ್ನಲಾದ ಕೋಟ್ಯಂತರ ರೂಪಾಯಿ ಹಣ ಸಹ ದೊರೆತಿದೆ ಎಂದು ಆರೋಪಿಸಲಾಗಿತ್ತು.
ಆದರೆ ಈ ಎಲ್ಲಾ ಆರೋಪಗಳನ್ನು ಸಾರಾಸಗಟು ನಿರಾಕರಿಸಿರುವ ಡಿ.ಕೆ.ಶಿವಕುಮಾರ್ ಅವರು 'ನಾನು ಹೈಕಮಾಂಡ್‌ಗೆ ಹಣ ನೀಡಿಲ್ಲ ಹಾಗೂ ಹವಾಲಾ ದಂದೆಯ ಬಗ್ಗೆಯೂ ನನಗೆ ತಿಳಿದಿಲ್ಲ' ಎಂದು ಹೇಳಿದ್ದಾರೆ.

ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಇದು ಎಂದಿರುವ ಡಿಕೆಶಿ ನಾನು ಯಾವುದೇ ತಪ್ಪು ಮಾಡಿಲ್ಲ, ಬೇಕೆಂದೇ ನನ್ನ ರಾಜಕೀಯ ಜೀವನ ಮುಗಿಸಲು ಮಾಡುತ್ತಿರುವ ಹುನ್ನಾರವಿದು ಎಂದು ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೆ ಬಿಜೆಪಿಯವರು ರಾಜಿನಾಮೆ ಕೇಳಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ್ದ ಡಿಕೆಶಿ ಬಿಜೆಪಿಯವರ ಅವ್ಯವಹಾರಗಳ ಬಗ್ಗೆ ನನಗೆ ಗೊತ್ತಿದೆ. ಇಂಥಹಾ ಡೈರಿಗಳು ನನ್ನ ಬಳಿಯೂ ಇದೆ ಸಮಯ ಬಂದಾಗ ಹೊರಗಿಡುತ್ತೇನೆ ಎಂದಿದ್ದರು.











Click it and Unblock the Notifications