ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆ ರವಿ ಆತ್ಮಹತ್ಯೆ ಕಾರಣ? ತನಿಖೆಯೇ ಅನುಮಾನ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಅ.18: ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣದ ಅಂತಿಮ ವರದಿಯನ್ನು ಸಿಬಿಐ ತಂಡ ದೆಹಲಿ ಕಚೇರಿಗೆ ಕಳಿಸಿದೆ. ಡಿಕೆ ರವಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದು, ಈ ಪ್ರಕರಣದಲ್ಲಿ ಯಾರ ಕೈವಾಡವೂ ಇಲ್ಲ ಎಂದು ಸಿಬಿಐ ಹೇಳಿದೆ. ಅದರೆ, ಆತ್ಮಹತ್ಯೆಯ ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಈ ಪ್ರಶ್ನೆಗೆ ಉತ್ತರ ಸಿಗುವುದು ಕೂಡಾ ಡೌಟು ಎಂಬ ಸುದ್ದಿ ಬಂದಿದೆ.

ಸಿಬಿಐ ತನಿಖಾ ತಂಡ ಸಿದ್ಧಪಡಿಸಿದ ಅಂತಿಮ ವರದಿಯನ್ನು ಹಿರಿಯ ಅಧಿಕಾರಿಗಳು ಪರಿಶೀಲನೆ ಕಳಿಸಿದೆ. ವರದಿಯನ್ನು ಪರೀಶಿಲಿಸಿದದ ಬಳಿಕ ಆತ್ಮಹತ್ಯೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ಮುಂದುವರೆಸಬೇಕೆ? ಬೇಡವೇ? ಎಂದು ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಅದರೆ, ಈ ಪ್ರಕರಣದ ತನಿಖೆ ಮುಂದುವರೆಸುವುದು ತನಿಖಾ ತಂಡಕ್ಕೆ ಬೇಡದ ವಿಷಯವಾಗಿದೆ.

DK Ravi death case

ಕಾರಣ ತಿಳಿಯುವುದಾದರೂ ಹೇಗೆ?: ಡಿಕೆ ರವಿ ಅವರ ಸಾವಿನ ನೈಜ ಕಾರಣ ಮಣ್ಣಲ್ಲಿ ಮಣ್ಣಾಗಿ ಹೋಗುವುದಕ್ಕೂ ಮುನ್ನ ಸಿಬಿಐ ತಂಡ ನಿಜ ಕಾರಣವನ್ನು ಹುಡುಕಿ ಜನತೆ ಮುಂದಿಡಬಹುದಾಗಿದೆ. ಅದರೆ, ಈ ಬಗ್ಗೆ ಕರ್ನಾಟಕ ಸರ್ಕಾರ ಅಥವಾ ಕೋರ್ಟ್ ನಿರ್ದೇಶಿಸಬಹುದಾಗಿದೆ. [ಡಿಕೆ ರವಿಯದು ಆತ್ಮಹತ್ಯೆ]

ಡಿಕೆ ರವಿ ಅವರು ವೈಯಕ್ತಿಕ ಮತ್ತು ಹಣಕಾಸು ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವಿಚಾರದಲ್ಲಿ ಡಿಕೆ ರವಿ ಅವರನ್ನು ಅವರ ಸ್ನೇಹಿತರಿಂದ ಮೋಸ ಹೋಗಿದ್ದರು ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿದೆ. ಅದರೆ, ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿಲ್ಲ. ಸಾವು ಸಂಭವಿಸಿದ್ದು ಹೇಗೆ? ಎಂಬುದಷ್ಟೇ ಈವರೆಗಿನ ತನಿಖೆಯ ಉದ್ದೇಶವಾಗಿತ್ತು. ಅದನ್ನು ಸಿಬಿಐ ಈಗಾಗಲೇ ಸ್ಪಷ್ಟಪಡಿಸಿದೆ. [ಡಿಕೆ ರವಿ ಪ್ರಕರಣದ ಟೈಮ್ ಲೈನ್]

ಈ ಮುಂಚೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ನೀಡಿದ ಮರಣೋತ್ತರ ಪರೀಕ್ಷೆ ವರದಿ, ಹೈದರಾಬಾದಿನ ಸಿಎಫ್ ಎಲ್ ವರದಿ, ಸಿಐಡಿ ಮಧ್ಯಂತರ ವರದಿಯಲ್ಲೂ ಉಸಿರುಗಟ್ಟಿ ರವಿ ಅವರು ಸಾವನ್ನಪ್ಪಿದ್ದಾರೆ ಎಂದು ದಾಖಲಾಗಿದೆ. ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆ ನಂತರದ ವರದಿಯೂ ಡಿಕೆ ರವಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸ್ಪಷ್ಟಪಡಿಸಿದೆ. [ಡಿಕೆ ರವಿ ಆತ್ಮಹತ್ಯೆ ಹಿಂದೆ ಕ್ರಿಮಿನಲ್ ಸಂಚಿಲ್ಲ: ಸಿಬಿಐ]

ಅದರೆ, ರವಿ ಆತ್ಮಹತ್ಯೆಗೆ ನಿಜವಾದ ಕಾರಣವಾದ ಅಂಶದ ಬಗ್ಗೆ ತಿಳಿಯಬೇಕಾದರೆ ಕರ್ನಾಟಕ ಸರ್ಕಾರ ಮತ್ತೊಮ್ಮೆ ಸಿಬಿಐ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಬೇಕಾಗುತ್ತದೆ. ಅಥವಾ ಸಿಬಿಐ ಈಗಿನ ವರದಿಯನ್ನು ಕೋರ್ಟೀಗೆ ಸಲ್ಲಿಸಿದ ಮೇಲೆ ಕೋರ್ಟ್ ಏನಾದರೂ ಹೆಚ್ಚಿನ ತನಿಖೆ ಅಗತ್ಯ ಎಂದು ನಿರ್ದೇಶಿಸಿದರೆ ಮಾತ್ರ ಡಿಕೆ ರವಿ ಸಾವಿನ ನಿಗೂಢತೆ ಬಯಲಾಗಲಿದೆ.

English summary
The Central Bureau of Investigation would investigate the reasons behind the suicide of IAS officer D K Ravi only if there are specific orders from the government or the court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X