ಜೆಪಿ ನಗರ: ಹಿರಿಯ ನಾಗರಿಕರ ಅನುಕೂಲಕ್ಕಾಗಿ ಬಸ್‌ಗಳ ಮಾರ್ಗ ಬದಲಾಯಿಸಲು ಮನವಿ
ಸದ್ಯ ಅಸ್ತಿತ್ವದಲ್ಲಿರುವ ಬಿಎಂಟಿಸಿ ಬಸ್ ಮಾರ್ಗಗಳು ಅಂಜನಾಪುರ ಮುಖ್ಯರಸ್ತೆ ಮತ್ತು ಕೆಂಗೇರಿ-ಗೊಟ್ಟಿಗೆರೆ ರಸ್ತೆಯಲ್ಲಿ ನಿಲ್ಲುತ್ತವೆ.
ಬೆಂಗಳೂರು, ಮಾರ್ಚ್ 13: ಜೆ.ಪಿ.ನಗರ 9ನೇ ಹಂತದ ರಾಘವನಪಾಳ್ಯ ಮತ್ತು ಸುತ್ತಮುತ್ತಲಿನ ನಿವಾಸಿಗಳು ಇಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ನೆಲೆಸಿರುವ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಬಸ್‌ಗಳನ್ನು ಒಂದು ಕಿಲೋಮೀಟರ್ ಮಾರ್ಗ ಬದಲಿಸುವಂತೆ ಬಿಎಂಟಿಸಿಗೆ ಮನವಿ ಸಲ್ಲಿಸಿದ್ದಾರೆ. ಸದ್ಯದಲ್ಲೇ ಸಮೀಕ್ಷೆ ನಡೆಸಿ ನಿರ್ಧಾರ ಕೈಗೊಳ್ಳಲು ಬಿಎಂಟಿಸಿ ಮುಂದಾಗಿದೆ.
ಜೆ.ಪಿ.ನಗರ 9ನೇ ಹಂತದ ರಾಘವನಪಾಳ್ಯ ಮತ್ತು ಸುತ್ತಮುತ್ತಲಿನ ನಿವಾಸಿ ಹಿರಿಯ ನಾಗರಿಕರು ಸುಲಭವಾಗಿ ತೆರಳಲು ಅನುಕೂಲವಾಗುವಂತೆ ಮಾಡಲು ಈ ಮನವಿ ಸಲ್ಲಿಸಲಾಗಿದೆ. ಅನೇಕ ಹಿರಿಯರು ಸೇರಿದಂತೆ 138 ನಿವಾಸಿಗಳು ಸಹಿ ಮಾಡಿದ ಮನವಿಯನ್ನು ಮಾರ್ಚ್ 2 ರಂದು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ ಎಂದು ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯ ಕನಕಪುರ ರಸ್ತೆಯ ಚೇಂಜ್ ಮೇಕರ್ಸ್ ಸಂಸ್ಥಾಪಕ ಅಬ್ದುಲ್ ಅಲೀಂ ಮಾಹಿತಿ ನೀಡಿದ್ದಾರೆ.

ನಂದಿ ಗಾರ್ಡನ್ಸ್, ಐಎಂಜಿ ಎಲೈಟ್, ಆರ್ಯಹಂಸ, ಪ್ಲಾಟಿನಂ ಲೈಫ್‌ಸ್ಟೈಲ್ ಮತ್ತು ಜಿಆರ್ ಹೈಟ್ಸ್‌ನಂತಹ ಹಲವಾರು ವಸತಿ ಅಪಾರ್ಟ್‌ಮೆಂಟ್‌ಗಳು ಈ ಭಾಗದಲ್ಲಿವೆ. "ಪ್ರತಿಯೊಂದು ಅಪಾರ್ಟ್‌ಮೆಂಟ್‌ಗಳಲ್ಲಿ ನೂರು ಫ್ಲ್ಯಾಟ್‌ಗಳಿವೆ. ಹೆಚ್ಚಿನ ಸಂಖ್ಯೆಯ ನಿವಾಸಿಗಳು ಇದ್ದಾರೆ. ಅವರಲ್ಲಿ ಹಲವರು ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಹಿರಿಯ ನಾಗರಿಕರು ಎಂದು ಹೇಳಿದ್ದಾರೆ.
ಸದ್ಯ ಅಸ್ತಿತ್ವದಲ್ಲಿರುವ ಬಿಎಂಟಿಸಿ ಬಸ್ ಮಾರ್ಗಗಳು ಅಂಜನಾಪುರ ಮುಖ್ಯರಸ್ತೆ ಮತ್ತು ಕೆಂಗೇರಿ-ಗೊಟ್ಟಿಗೆರೆ ರಸ್ತೆಯಲ್ಲಿ ನಿಲ್ಲುತ್ತವೆ. ಇದು ಈ ಭಾಗದ ಹಿರಿಯ ನಾಗರಿಕರಿಗೆ ಕಾಲ್ನಡಿಗೆಯಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ದುಬಾರಿ ಆಟೋರಿಕ್ಷಾಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಬನಶಂಕರಿಯಿಂದ ಜಂಬೂಸವಾರಿ ದಿನ್ನೆಗೆ ತೆರಳುವ ಬಸ್‌ಗಳನ್ನು ವಿನಾಯಕ ಚಿತ್ರಮಂದಿರದ ನಿಲ್ದಾಣದಲ್ಲಿ ತಿರುಗಿಸಿ 60 ಅಡಿ ರಸ್ತೆಯಲ್ಲಿ ಎಚ್‌ಎಂ ವರ್ಲ್ಡ್ ಸಿಟಿ ಮತ್ತು ನಂದಿ ಗಾರ್ಡನ್ ಮೂಲಕ ಸಾಗಿ, ಹಲವು ಅಪಾರ್ಟ್‌ಮೆಂಟ್‌ಗಳ ಮೂಲಕ ಹಾದು ಹೋಗುವ 80 ಅಡಿ ರಸ್ತೆಗೆ ಬಂದು ನಂತರ ರಾಯಲ್ ಲೇಔಟ್ ನಿಲ್ದಾಣ್ ಬಳಿ ಗೊಟ್ಟಿಗೆರೆ ರಸ್ತೆಗೆ ಸೇರುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಬಿಎಂಟಿಸಿಯ ದಕ್ಷಿಣ ವಿಭಾಗೀಯ ಸಂಚಾರ ಅಧಿಕಾರಿ ಮಹೇಶ್ ಹೇಳುವಂತೆ, "ಸೋಮವಾರದ ನಂತರ ಬಿಎಂಟಿಸಿ ಪ್ರದೇಶದ ನಿವಾಸಿಗಳನ್ನು ಭೇಟಿ ಮಾಡಿ ಸಮೀಕ್ಷೆ ನಡೆಸುತ್ತದೆ. ಅದರ ನಂತರ, ಅವರ ಕೋರಿಕೆಯಂತೆ ಮಾರ್ಗಗಳನ್ನು ತಿರುಗಿಸುವ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಬಳಿಕ ನಾನು ಅದನ್ನು ನಾಗರಿಕರಿಗೆ ತಿಳಿಸುತ್ತೇವೆ" ಎಂದಿದ್ದಾರೆ.












Click it and Unblock the Notifications