• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಂ ಯಡಿಯೂರಪ್ಪ ನಿವಾಸಕ್ಕೆ ಅನರ್ಹ ಶಾಸಕರ ಭೇಟಿ: ಏನೇನು ಚರ್ಚೆ?

|

ಬೆಂಗಳೂರು, ಆಗಸ್ಟ್ 3: ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ ಒಂದು ವಾರಗಳು ಕಳೆದಿವೆ. ಇದೀಗ ಅನರ್ಹ ಶಾಸಕರು ಒಬ್ಬೊಬ್ಬರಾಗಿ ಯಡಿಯೂರಪ್ಪ ಮನೆಗೆ ಭೇಟಿ ನೀಡಲು ಆರಂಭಿಸಿದ್ದಾರೆ.

ಇನ್ನೂ ಸಂಪುಟ ವಿಸ್ತರಣೆಯಾಗಿಲ್ಲ, ಒಟ್ಟು ಎರಡು ಹಂತದಲ್ಲಿ ವಿಸ್ತರಣೆಯಾಗುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ. ಈ ಹೊತ್ತಲ್ಲೇ ಅನರ್ಹ ಶಾಸಕರು ತಮ್ಮ ನಿಲುವೇನೆಂದು ತಿಳಿಸಲು ಹಾಗೂ ತಮ್ಮ ಬಗ್ಗೆ ಸಿಎಂ ಅಭಿಪ್ರಾಯ ಏನೆಂದು ಅರಿಯಲು ಒಬ್ಬೊಬ್ಬರಾಗಿ ಸಿಎಂ ಮನೆಗೆ ಭೇಟಿ ನೀಡುತ್ತಿದ್ದಾರೆ.

ಕರ್ನಾಟಕ ಅಸೆಂಬ್ಲಿ ಉಪಚುನಾವಣೆ: ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳುಕರ್ನಾಟಕ ಅಸೆಂಬ್ಲಿ ಉಪಚುನಾವಣೆ: ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳು

ಸುಪ್ರೀಂಕೋರ್ಟ್ ಆದೇಶ ಮೊದಲು ಬರಲಿ, ಸೋಲಿಸೋದು ಗೆಲ್ಲಿಸೋನು ಎಲ್ಲಾ ಮೇಲೆ ಇದ್ದಾನೆ ಎಲ್ಲೋ ಇಲ್ಲಿಂದ ಹೋಗಿ, ಕಾಲರ್ ಮೇಲೆ ಮಾಡಿಕೊಂಡು ಹೋದರೆ ಜನರುಮತ ಹಾಕುವುದಿಲ್ಲ, ಅಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದವರಿಗೆ ಜನರು ಮತ ಕೊಡ್ತಾರೆ.

ಯಾರೋ ಇಲ್ಲಿ ಒಬ್ಬರು ಬೊಬ್ಬೆ ಹೊಡೆದ ತಕ್ಷಣ ಜನರು ಬೆದರಲ್ಲ, ಆ ರೀತಿ ಬೆದರುವವರಾಗಿದ್ದರೆ ಲೋಕಸಭೆಯಲ್ಲಿ ಯಾಕೆ ಕಾಂಗ್ರೆಸ್ ಗೆ ಒಂದು ಸ್ಥಾನ ಬರ್ತಿತ್ತು, ಇವರೆಲ್ಲರೂ ಸೇರಿ ಇಡೀ ರಾಜ್ಯ ಸುತ್ತಿದವರು ತಾನೇ, ಈ ಅತಿರಥ- ಮಹಾರಥರು ಯಾಕೆ ಸೋತ್ರು ಒಟ್ಟಿಗೆ ಚುನಾವಣೆಗೆ ಹೋಗಿದ್ದ ಕಾಂಗ್ರೆಸ್ - ಜೆಡಿಎಸ್‌ ನಾಯಕರಿಗೆ ಸುಧಾಕರ್ ಟಾಂಗ್ ನೀಡಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪು ತಡವಾಗಿರುವ ಚರ್ಚೆ

ಸುಪ್ರೀಂಕೋರ್ಟ್ ತೀರ್ಪು ತಡವಾಗಿರುವ ಚರ್ಚೆ

ಸ್ಪೀಕರ್ ಅನರ್ಹ ನಿರ್ಧಾರ ಕುರಿತ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ತಡವಾಗಿರೋ ಬಗ್ಗೆ ಸಿಎಂ ನಿವಾಸದಲ್ಲಿ ಚರ್ಚೆ ನಡೆದಿದೆ. ಸುಪ್ರೀಂಕೋರ್ಟ್ ಆದೇಶ ಮೊದಲು ಬರಲಿ, ಸೋಲಿಸೋದು ಗೆಲ್ಲಿಸೋನು ಎಲ್ಲಾ ಮೇಲೆ ಇದ್ದಾನೆ ಎಂದು ಸುಧಾಕರ್ ಹೇಳಿದ್ದಾರೆ.

ಜನತೆಗಾಗಿ ದುಡಿದರೆ ಮಾತ್ರ ಮತ

ಜನತೆಗಾಗಿ ದುಡಿದರೆ ಮಾತ್ರ ಮತ

ಎಲ್ಲಿಂದಲೋ ಹೋಗಿ, ಕಾಲರ್ ಮೇಲೆ ಮಾಡಿಕೊಂಡು ಹೋದರೆ ಹೋದರೆ ಜನರು ಮತ ಹಾಕುವುದಿಲ್ಲ, ಅಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದವರಿಗೆ ಜನರು ಮತ ಹಾಕುತ್ತಾರೆ, ಯಾರೋ ಇಲ್ಲಿ ಒಬ್ಬರು ಬೊಬ್ಬೆ ಹೊಡೆದ ತಕ್ಷಣ ಜನರು ಹೆದರುವುದಿಲ್ಲ.

ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ

ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ

ಸಿಎಂ ಯಡಿಯೂರಪ್ಪ ಪ್ರಮಾಣ ತೆಗೆದುಕೊಂಡಾಗ ನಾನು ಇರಲಿಲ್ಲ ಹಾಗಾಗಿ ಈಗ ಬಂದು ಅಭಿನಂದನೆ ಸಲ್ಲಿಸಿದ್ದೇನೆ ರಾಜಕೀಯವಾಗಿ ಏನು ಚರ್ಚೆಯಾಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಿದ್ದೇನೆ ಅಷ್ಟೇ.. ಅಭಿವೃದ್ಧಿಗೆ ಅನುದಾನ ನೀಡ್ತಾರೆ ಅನ್ನೋ ವಿಶ್ವಾಸ ಇದೆ ನಮ್ಮ ಜಿಲ್ಲೆಗೆ ಮೆಡಿಕಲ್‌ ಕಾಲೇಜ್‌ಗೆ ಅಪ್ರೋವ್ ಆಗಿದ್ರೂ, ಹಿಂದಿನವರು ಅನುದಾನ ಕೊಡ್ಲಿಲ್ಲ.

ಈಗ ಇವರಿಗೆ ಮನವಿ ಮಾಡಿದ್ದೇನೆ, ಮುಂದಿನ ವಾರದಲ್ಲಿ ಅನುದಾನ ನೀಡಬಹದ ಮೌಲ್ಯಗಳಿಗೆ ಪ್ರತಿಪಾದಕರಂತೆ ರಮೇಶ್ ಕುಮಾರ್ ನಟಿಸ್ತಾರೆ ಅವರ ಆದೇಶ ಅನೈತಿಕವಾದದ್ದು.. ಅದನ್ನ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದೇವೆ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇದೆ ಇಂತವರಿಂದ ಸಂವಿಧಾ‌ನಕ್ಕೆ ಅಪಚಾರ ಆಗ್ತಿದೆ ತೀರ್ಪು ನಿಧಾನವಾದ್ರೂ ಪರವಾಗಿಲ್ಲ, ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಪಕ್ಷದ ರಾಜಕೀಯ ಧೋರಣೆಯಿಂದ ಮನನೊಂದು ರಾಜೀನಾಮೆ

ಪಕ್ಷದ ರಾಜಕೀಯ ಧೋರಣೆಯಿಂದ ಮನನೊಂದು ರಾಜೀನಾಮೆ

ಕ್ಷೇತ್ರದ ಅಭಿವೃದ್ಧಿಗಾಗಿ ನಾನು ರಾಜೀನಾಮೆ ನೀಡಿದ್ದೇನೆ ಹಾಗೆಯೇ ಪಕ್ಷದ ರಾಜಕೀಯ ಧೋರಣೆಯಿಂದ ಮನನೊಂದು ರಾಜೀನಾಮೆ ನೀಡಿದ್ದೇನೆ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ತನಗೆ ಸ್ಥಾನ ಸಿಗೋ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ರೋಷನ್ ಬೇಗ್

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ರೋಷನ್ ಬೇಗ್

ಸುಧಾಕರ ಭೇಟಿ ಬೆನ್ನೆಲ್ಲೆ ರೋಷನ್ ಬೇಗ್ ಕೂಡ ಭೇಟಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ, ಇಬ್ಬರು ಡಾಲರ್ಸ್ ಕಾಲೊನಿಯಲ್ಲಿರುವ ಸಿಎಂ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

English summary
Disqualified mla from chikkaballapur sudhakar and former minister Roshan Baig met chief minister BS Yeddyurappa to discuss about ongoing political issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X